|

ಭೋಪಾಳ (ಮಧ್ಯಪ್ರದೇಶ) – ಇಲ್ಲಿ ಒಬ್ಬ ಮುಸ್ಲಿಂ ಯುವತಿ ಹಿಂದೂ ಯುವಕನನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ ನಂತರ, ಬೆದರಿಕೆ ಹಾಕಿ ಆತನನ್ನು ಇಸ್ಲಾಂಗೆ ಮತಾಂತರಗೊಳಿಸಿದಳು. ಈ ಸಂಬಂಧ, ಸಂತ್ರಸ್ತ ಅಮನ್ ಖಾನ್ (ಮೂಲತಃ ಶುಭಂ ಗೋಸ್ವಾಮಿ) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ, ಪೊಲೀಸರು ತನಿಖೆ ನಡೆಸಿ ಸಂಬಂಧಪಟ್ಟ ಮುಸ್ಲಿಂ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮುಸ್ಲಿಂ ಕುಟುಂಬದ ಮೇಲೆ ಮತಾಂತರ-ವಿರೋಧಿ ಕಾನೂನಿನ’ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು, ಜೊತೆಗೆ ಶಾಸ್ತ್ರೋಕ್ತವಾಗಿ ಶುಭಂನ ‘ಘರ್‌ವಾಪಸಿ’ (ಮೂಲಧರ್ಮಕ್ಕೆ ಮರಳುವುದು) ಮಾಡಲಾಗುವುದು.
೧. ಜಹಾಂಗೀರಾಬಾದ್‌ನಲ್ಲಿ ವಾಸಿಸುವ ಶುಭಂ ಹೇಳಿದ್ದೇನೆಂದರೆ, ಮಾನಸಿಕ ಒತ್ತಡ, ಬೆದರಿಕೆಗಳು ಮತ್ತು ಸುಳ್ಳು ಕ್ರಿಮಿನಲ್ ದೂರುಗಳ ಮೂಲಕ ನನ್ನನ್ನು ಇಸ್ಲಾಂ ಸ್ವೀಕರಿಸಲು ಒತ್ತಾಯಿಸಲಾಯಿತು.
೨. ನನಗೆ ‘ಪರಿಚಯವಿದ್ದ ಮುಸ್ಲಿಂ ಯುವತಿ ಮತ್ತು ಆಕೆಯ ಕುಟುಂಬದವರು ನನ್ನನ್ನು ಪ್ರೀತಿಯ ಸಂಬಂಧದ ನೆಪ ಹೇಳಿ ಮತಾಂತರವಾಗುವಂತೆ ಒತ್ತಡ ಹೇರಿದರು. ಧರ್ಮವನ್ನು ಸ್ವೀಕರಿಸದ ಕಾರಣ, ನನ್ನ ವಿರುದ್ಧ ಸುಳ್ಳು ದೂರು ದಾಖಲಿಸಿದರು. ನನಗೆ ಥಳಿಸಿ ನಿರಂತರವಾಗಿ ಬೆದರಿಕೆ ಹಾಕಿದರು. ನನ್ನನ್ನು ಮತಾಂತರಗೊಳ್ಳುವಂತೆ ಮಾಡಿ, ನನ್ನನ್ನು ಕುಟುಂಬದಿಂದ ದೂರ ಇರಿಸಿದರು ‘, ಎಂದು ಹೇಳಿದನು.
೩. ಮಧ್ಯಪ್ರದೇಶ ಸರಕಾರದ ಸಚಿವ ವಿಶ್ವಾಸ್ ಸಾರಂಗ್ ಅವರ ‘ಜನದರ್ಶನ’ ಕಾರ್ಯಕ್ರಮಕ್ಕೆ ಹೋಗಿ ಆತ ಸಂಪೂರ್ಣ ಘಟನೆಯನ್ನು ವಿವರಿಸಿದನು. ಅದರ ನಂತರ, ಮುಸ್ಲಿಂ ಕುಟುಂಬದ ವಿರುದ್ಧ ಕ್ರಮ ಕೈಗೊಳ್ಳಲಾಯಿತು.
ಸಂಪಾದಕೀಯ ನಿಲುವುಭಾಜಪ ಸರಕಾರವಿರುವ ರಾಜ್ಯಗಳಲ್ಲಿ ಲವ್ ಜಿಹಾದ್-ವಿರೋಧಿ ಕಾನೂನುಗಳಿದ್ದರೂ, ಅಲ್ಲಿ ಇಂತಹ ಘಟನೆಗಳು ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಕಾನೂನು ಅಥವಾ ಅವುಗಳಲ್ಲಿರುವ ನಿಬಂಧನೆಗಳು ಸಾಕಷ್ಟು ಕಠಿಣವಾಗಿಲ್ಲ ಎಂದು ಹೇಳಿದರೆ ತಪ್ಪಾಗಲಾರದು. ಮೂಲತಃ, ‘ಲವ್ ಜಿಹಾದಿ’ಗಳಿಗೆ ನೀಡಲಾಗುವ ತರಬೇತಿ/ಬೋಧನೆಗೆ ಕಡಿವಾಣ ಹಾಕುವುದು ಈಗ ಅವಶ್ಯಕವಾಗಿದೆ. ಇದೇ ಪರಿಣಾಮಕಾರಿ ಪರಿಹಾರವಾಗಿದೆ, ಎಂಬುದನ್ನು ತಿಳಿದುಕೊಳ್ಳಿ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!