ಕಲ್ಯಾಣ: ಶಿವಸೇನಾ ಪದಾಧಿಕಾರಿಯ ಬರ್ಬರ ಹತ್ಯೆ!

ಠಾಣೆ – ಕಲ್ಯಾಣ ತಾಲ್ಲೂಕಿನ ಮುರ್ಬಾಡ್ ರಸ್ತೆಯಲ್ಲಿರುವ ಮಮಣೋಳಿ ಗ್ರಾಮದ ಬಳಿ ಶಿವಸೇನೆಯ ಪದಾಧಿಕಾರಿ ಕಿರಣ್ ಘೋರಡ್ (ವಯಸ್ಸು ೩೨ ವರ್ಷ) ಅವರನ್ನು ಢಾಬಾದಲ್ಲಿ ನಡೆದ ವಿವಾದದಿಂದಾಗಿ ನಿರ್ದಯವಾಗಿ ಕೊಲೆ ಮಾಡಲಾಗಿದೆ. ಆರೋಪಿ ಪರಾರಿಯಾಗಿದ್ದು ಕಲ್ಯಾಣ ಗ್ರಾಮೀಣ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.ಪೊಲೀಸರು ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಪ್ರಮುಖ ಮಾಹಿತಿ ದೊರೆತಿದೆ ಎಂದು ತಿಳಿಸಿದ್ದಾರೆ.

ಘಟನೆಯ ನಂತರ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ. ವೈಯಕ್ತಿಕ ದ್ವೇಷ ಅಥವಾ ರಾಜಕೀಯ ವೈರತ್ವದಿಂದ ಈ ಕೊಲೆಯಾಗಿರಬಹುದು ಎಂದು ಊಹಿಸಲಾಗಿದೆ.

ಸಂಪಾದಕೀಯ ನಿಲುವು

ಅಸುರಕ್ಷಿತ ಕಲ್ಯಾಣ ತಾಲ್ಲೂಕು!