ಪಾಕಿಸ್ತಾನದ ಖೈಬರ್-ಪಖ್ತುನ್ಖ್ವಾ ರಾಜ್ಯದ ಮುಖ್ಯಮಂತ್ರಿಗಳಿಗೆ ಥಳಿತ! Pakistan Khyber Pakhtunkhwa CM Assaulted

ರಾವಲ್ಪಿಂಡಿ (ಪಾಕಿಸ್ತಾನ) – ಪಾಕಿಸ್ತಾನದ ಖೈಬರ್-ಪಖ್ತುನ್ಖ್ವಾ ರಾಜ್ಯದ ಮುಖ್ಯಮಂತ್ರಿ ಸೋಹೆಲ್ ಆಫ್ರಿದಿ ಅವರನ್ನು ಪೊಲೀಸರು ಇತ್ತೀಚೆಗೆ ರಸ್ತೆಯಲ್ಲಿ ಕೆಡವಿ ಥಳಿಸಿದ್ದಾರೆ. ಸೋಹೆಲ್ ಅವರು ಮಾಜಿ ಪ್ರಧಾನಿ ಇಮ್ರಾನ್ ಖಾನ್‌ ರ ಬೆಂಬಲಕ್ಕಾಗಿ ರಾವಲ್ಪಿಂಡಿಯ ಅಡಿಯಾಲಾ ಕಾರಾಗೃಹದಲ್ಲಿ ಪ್ರತಿಭಟನೆ ಮಾಡಲು ತಲುಪಿದ್ದರು. ಸೋಹೆಲ್ ಅವರು ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಅವರನ್ನು ಟೀಕಿಸಿ, ದೇಶದ ಹದಗೆಟ್ಟ ಪರಿಸ್ಥಿತಿಗೆ ಅವರೇ ಜವಾಬ್ದಾರರು ಎಂದು ಹೇಳಿದರು. ಆಫ್ರಿದಿ ಅವರು, ಇಮ್ರಾನ್ ಖಾನ್‌ ರನ್ನು ಭೇಟಿ ಮಾಡಲು ನಿರ್ಬಂಧಿಸುವುದು ಮತ್ತು ಅವರ ಆರೋಗ್ಯದ ಮಾಹಿತಿಯನ್ನು ಮರೆಮಾಚುವುದು, ಜನರ ವಿಶ್ವಾಸದೊಂದಿಗೆ ಆಟವಾಡುವುದು ಎಂದು ಹೇಳಿದರು. ಆ ಸಮಯದಲ್ಲಿ ಪೊಲೀಸರು ಅವರನ್ನು ಥಳಿಸಿದರು.