ಪಂಜಾಬ್‌ನಲ್ಲಿ ಸಂಘ ಸ್ವಯಂಸೇವಕನ ಹತ್ಯೆ ಮಾಡಿದ ದುಷ್ಕರ್ಮಿ ಗುಂಡಿನ ಚಕಮಕಿಯಲ್ಲಿ ಹತ್ಯೆ!

ಇತರೆ ೨ ಜನರ ಬಂಧನ

ಜಲಾಲಾಬಾದ್ (ಪಂಜಾಬ್) – ಪಂಜಾಬ್ ಪೊಲೀಸರು ರಾ.ಸ್ವ.ಸಂಘದ ಸ್ವಯಂಸೇವಕ ನವೀನ್ ಅರೋರಾ ಅವರ ಹತ್ಯೆಯ ಪ್ರಮುಖ ಸೂತ್ರಧಾರನಾದ ಬಾದಲ್ ಅಲಿಯಾಸ್ ಬಂಟಿ ಎಂಬಾತನನ್ನು ಇಲ್ಲಿನ ಒಂದು ಸ್ಮಶಾನ ಭೂಮಿ ಹತ್ತಿರ ನಡೆದ ಗುಂಡಿನ ಚಕಮಕಿಯಲ್ಲಿ ಹತ್ಯೆ ಮಾಡಿದ್ದಾರೆ. ಹಾಗೂ ಬಂಟಿಯೊಂದಿಗೆ ಇದ್ದ ಹರ್ಷ್ ಮತ್ತು ಕನವ್ ಎಂಬ ಇಬ್ಬರು ಸಹಚರರನ್ನು ಘಟನಾ ಸ್ಥಳದಲ್ಲಿ ಬಂಧಿಸಲಾಗಿದೆ. ಈ ಮೂವರು ನವೀನ್ ಅರೋರಾ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಆರೋಪಿಗಳಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರ ತನಿಖೆಯ ಪ್ರಕಾರ, ಈ ಹತ್ಯೆಯು ಪೂರ್ವ ನಿಯೋಜಿತ ಪಿತೂರಿಯ ಭಾಗವಾಗಿತ್ತು. ಇದರಲ್ಲಿ 5 ಜನರು ಭಾಗಿಯಾಗಿದ್ದರು. ಈ ಹಿಂದೆ ಗುರುಸಿಮ್ರನ್ ಸಿಂಗ್ ಅಲಿಯಾಸ್ ಜತಿನ್ ಕಾಲಿಯನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಯ ಹಿಂದಿನ ಕಾರಣ ಇದುವರೆಗೂ ಸ್ಪಷ್ಟವಾಗಿಲ್ಲ.