ತೃಣಮೂಲ ಕಾಂಗ್ರೆಸ್ಸಿಗೆ ಸಂಬಂಧಿಸಿದ ಮಹಮ್ಮದ್ ಕಾಸಿಮುದ್ದೀನ್‌ ನಿಂದ ಮತಗಟ್ಟೆ ಅಧಿಕಾರಿಯ ಪತಿಯ ಮೇಲೆ ಹಲ್ಲೆ! TMC Opposes SIR

ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ‘ವಿಶೇಷ ಸಮಗ್ರ ಪರಿಶೀಲನೆ’ ಪ್ರಕ್ರಿಯೆಗೆ ಆಡಳಿತ ಪಕ್ಷದ ವಿರೋಧ!

ಕೋಲಕಾತಾ(ಪಶ್ಚಿಮ ಬಂಗಾಳ) – ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಶೀಲನೆ’ ಪ್ರಕ್ರಿಯೆಗೆ ಬಹಿರಂಗವಾಗಿ ವಿರೋಧ ಪ್ರಾರಂಭಿಸಿದೆ. ಇದರಿಂದ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಅನೇಕ ಅಡೆತಡೆಗಳನ್ನು ಎದುರಿಸಬೇಕಾಗಿದೆ. ರಾಜ್ಯದ ಮಾಲದಾ ಜಿಲ್ಲೆಯ ಹರೀಶ್ಚಂದ್ರಪುರ ಭಾಗದ ದಾಟಣ ಗ್ರಾಮದಲ್ಲಿ ‘ಬಿ.ಎಲ್.ಒ.’ (ಬೂತ್ ಲೆವೆಲ್ ಆಫೀಸರ್, ಅಂದರೆ ಮತಗಟ್ಟೆ ಅಧಿಕಾರಿ) ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಶಾಲೆಯ ಶಿಕ್ಷಕಿಯ ಪತಿಯ ಮೇಲೆ ತೃಣಮೂಲ ಕಾಂಗ್ರೆಸ್ಸಿನ ಮಹಮ್ಮದ್ ಕಾಸಿಮುದ್ದೀನ್ ಹಲ್ಲೆ ಮಾಡಿದ್ದಾನೆ

‘ಬಿ.ಎಲ್.ಒ.’ ನಿವೇದಿತಾ ಮೊಂಡಲ್ ಅವರು ಆರೋಪಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಪ್ರಕಾರ, ಸ್ಥಳೀಯ ಭೂ-ಮಾಫಿಯಾ, ಮಾಜಿ ಕಾಂಗ್ರೆಸ್ ಪಂಚಾಯತ್ ಸದಸ್ಯ ಮತ್ತು ಪ್ರಸ್ತುತ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ಸಿಗೆ ಸಂಬಂಧಿಸಿದ ಮಹಮ್ಮದ್ ಕಾಸಿಮುದ್ದೀನ್ ನಿವೇದಿತಾ ಮತ್ತು ಅವರ ಪತಿ ಕಮಲ್ ಮೊಂಡಲ್ ಅವರ ಮೇಲೆ ‘ನನ್ನ ಆದೇಶಗಳ ಪ್ರಕಾರವೇ ‘ವಿಶೇಷ ಸಮಗ್ರ ಪರಿಶೀಲನೆ’ ಪ್ರಕ್ರಿಯೆಯ ಅರ್ಜಿ ವಿತರಣೆ ಮತ್ತು ಸಂಗ್ರಹಣೆಯನ್ನು ಮಾಡಿರಿ’ ಎಂದು ಒತ್ತಡ ಹೇರಿದ್ದನು. ನಿವೇದಿತಾ ಮೊಂಡಲ್ ಅವರು ಅವನ ಸೂಚನೆಗಳನ್ನು ಪಾಲಿಸಲು ನಿರಾಕರಿಸಿದರು. ಆಗ ಕಾಸಿಮುದ್ದೀನ್ ಕಮಲ್ ಮೊಂಡಲ್ ಅವರ ಪತಿಯ ಮೇಲೆ ಕ್ರೂರವಾಗಿ ಹಲ್ಲೆ ಮಾಡಿ ಅವರನ್ನು ಗಂಭೀರವಾಗಿ ಗಾಯಗೊಳಿಸಿದನು. ಅವರ ಗುಪ್ತಾಂಗದ ಮೇಲೆ ಅನೇಕ ಬಾರಿ ಹಲ್ಲೆ ಮಾಡಿದನು. ‘ಅವನ ಸೂಚನೆಗಳನ್ನು ಪಾಲಿಸಲು ನಮಗೆ ನಿರಂತರವಾಗಿ ಬೆದರಿಕೆ ಹಾಕಲಾಯಿತು. ನಾವು ಅದನ್ನು ನಿರಾಕರಿಸಿದಾಗ, ನನ್ನ ಗಂಡನನ್ನು ಬಹುತೇಕ ಕೊಲ್ಲಲಾಯಿತು’ ಎಂದು ನಿವೇದಿತಾ ಹೇಳಿದರು.

ಸಂಪಾದಕೀಯ ನಿಲುವು

ಪಶ್ಚಿಮ ಬಂಗಾಳದಲ್ಲಿ ಭಾರತೀಯ ಸಂವಿಧಾನ ನಡೆಯುತ್ತಿದೆಯೇ ಅಥವಾ ಬಾಂಗ್ಲಾದೇಶಿ ನುಸುಳುಕೋರರ ಮೇಲಿನ ಪ್ರೀತಿಯಿಂದ ಕುರುಡಾಗಿರುವ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ಸಿನ ಸಂವಿಧಾನ ನಡೆಯುತ್ತಿದೆಯೇ? ಎಂಬ ಪ್ರಶ್ನೆ ಈ ಘಟನೆಯಿಂದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಆದ್ದರಿಂದ, ನಿಜವಾದ ಅರ್ಥದಲ್ಲಿ ‘ವಿಶೇಷ ಸಮಗ್ರ ಪರಿಶೀಲನೆ’ ಪ್ರಕ್ರಿಯೆಯನ್ನು ನಡೆಸಬೇಕಾದರೆ, ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತವನ್ನೇ ಜಾರಿಗೊಳಿಸಬೇಕು!