ಉತ್ತರ ಪ್ರದೇಶದ ಫಾಜಿಲ್‌ನಗರದ ಹೆಸರನ್ನು ‘ಪಾವಾನಗರಿ’ ಎಂದು ಬದಲಾಯಿಸಲಾಗುವುದು! – Fazilnagar in UP Changed to Pavanagari

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶ ಸರ್ಕಾರವು ಐತಿಹಾಸಿಕ ಸ್ಥಳಗಳ ಮೂಲ ಸ್ವರೂಪವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದೆ. ಇದೇ ನಿಟ್ಟಿನಲ್ಲಿ ಕುಶಿನಗರ ಜಿಲ್ಲೆಯ ಫಾಜಿಲ್‌ನಗರದ ಹೆಸರನ್ನು ಪಾವಾನಗರಿ ಎಂದು ಬದಲಾಯಿಸಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. ಭಗವಾನ್ ಮಹಾವೀರರ ಜೀವನಕ್ಕೆ ಸಂಬಂಧಿಸಿದ ಈ ಸ್ಥಳದ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವದ ಕಾರಣದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಭಗವಾನ್ ಮಹಾವೀರರ ಮಹಾನಿರ್ವಾಣಕ್ಕೆ ಸಂಬಂಧಿಸಿದ ಸ್ಥಳ!

ಭಗವಾನ್ ಮಹಾವೀರರು ಬಿಹಾರದ ವೈಶಾಲಿಯಲ್ಲಿ ಜನಿಸಿದ್ದರೂ, ಅವರ ಮಹಾನಿರ್ವಾಣವು ಉತ್ತರ ಪ್ರದೇಶದ ಫಾಜಿಲ್‌ನಗರದಲ್ಲಿ ಆಯಿತು. ಫಾಜಿಲ್‌ನಗರದ ಉಲ್ಲೇಖವು ಪ್ರಾಚೀನ ಗ್ರಂಥಗಳಲ್ಲಿ ಪಾವಾಗಢ ಎಂದು ಇದೆ. ಆದ್ದರಿಂದ, ಈ ಸ್ಥಳಕ್ಕೆ ಅದರ ಪ್ರಾಚೀನ ಗುರುತನ್ನು ಮರಳಿ ನೀಡಲು ನಿರ್ಧರಿಸಲಾಗಿದೆ. ಈ ನಾಮಕರಣ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅದರ ಕಾರ್ಯವಿಧಾನವು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ, ಎಂದು ಮುಖ್ಯಮಂತ್ರಿಗಳು ಹೇಳಿದರು.

ಸಂಪಾದಕೀಯ ನಿಲುವು

ಇಸ್ಲಾಮಿಕ್ ಆಕ್ರಮಣಕಾರರ ಕುರುಹುಗಳನ್ನು ಅಳಿಸಿಹಾಕಲು ಉತ್ತರ ಪ್ರದೇಶ ಸರಕಾರವು ಯಾವ ಪ್ರಮಾಣದಲ್ಲಿ ಪ್ರಯತ್ನಿಸುತ್ತಿದೆಯೋ, ಆ ಪ್ರಮಾಣದಲ್ಲಿ ದೇಶದ ಇತರ ಯಾವುದೇ ರಾಜ್ಯವೂ ಪ್ರಯತ್ನಿಸುತ್ತಿಲ್ಲ, ಇದು ಸತ್ಯ!