ಸಂಯುಕ್ತ ಅರಬ್ ಎಮಿರೇಟ್ಸ್ (ಯುಎಇ) ನಿಂದ ಪಾಕಿಸ್ತಾನಿ ನಾಗರಿಕರಿಗೆ ವೀಸಾ ನಿರಾಕರಣೆ – Visa Denial for Pakistani Citizens

ಪಾಕಿಸ್ತಾನಿಯರು ಭಿಕ್ಷೆ ಬೇಡುವುದು ಮತ್ತು ಅಪರಾಧ ಕೃತ್ಯಗಳನ್ನು ಎಸಗುವುದರಿಂದ ಈ ಕಠಿಣ ನಿರ್ಧಾರ

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಸಂಸದೀಯ ಸಮಿತಿಯ ಮುಂದೆ, ‘ಪ್ರಸ್ತುತ ಸಂಯುಕ್ತ ಅರಬ್ ಎಮಿರೇಟ್ಸ್ ಸಾಮಾನ್ಯ ಪಾಕಿಸ್ತಾನಿ ನಾಗರಿಕರಿಗೆ ವೀಸಾವನ್ನು (ಒಂದು ದೇಶವನ್ನು ಪ್ರವೇಶಿಸಲು, ಒಂದು ದೇಶವನ್ನು ತೊರೆಯಲು ಅಥವಾ ಒಂದು ದೇಶದ ಮೂಲಕ ಪ್ರಯಾಣಿಸಲು ಅನುಮತಿ ನೀಡುವ ಅಧಿಕೃತ ದಾಖಲೆ ಅಥವಾ ಮುದ್ರೆ) ನೀಡುತ್ತಿಲ್ಲ. ಪ್ರಸ್ತುತ, ನೀಲಿ ಪಾಸ್‌ಪೋರ್ಟ್ ಹೊಂದಿರುವ ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿರುವವರಿಗೆ ಮಾತ್ರ ವೀಸಾ ನೀಡಲಾಗುತ್ತಿದೆ, ಎಂದು ಹೇಳಿದೆ.’ ಪಾಕಿಸ್ತಾನದಲ್ಲಿ, ನೀಲಿ ಪಾಸ್‌ಪೋರ್ಟ್ ಅನ್ನು ಸರಕಾರಿ ಅಧಿಕಾರಿಗಳು ಮತ್ತು ವಿಶೇಷ ವರ್ಗದ ವ್ಯಕ್ತಿಗಳಿಗೆ ನೀಡಲಾಗುತ್ತದೆ, ಆದರೆ ಸಾಮಾನ್ಯ ನಾಗರಿಕರಿಗೆ ಹಸಿರು ಪಾಸ್‌ಪೋರ್ಟ್ ನೀಡಲಾಗುತ್ತದೆ. ಪಾಕಿಸ್ತಾನದ ನಾಗರಿಕರು ಪ್ರವಾಸಿ ವೀಸಾದ ಮೇಲೆ ಸಂಯುಕ್ತ ಅರಬ್ ಎಮಿರೇಟ್ಸ್‌ಗೆ ಹೋಗಿ ಭಿಕ್ಷೆ ಬೇಡುವುದು ಅಥವಾ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಮುಂತಾದ ಕೃತ್ಯಗಳನ್ನು ಮಾಡಲು ಪ್ರಾರಂಭಿಸಿದ್ದರಿಂದ, ಯುಎಇ ಈ ಕಠಿಣ ನಿಲುವು ತೆಗೆದುಕೊಂಡಿದೆ.

೧. ಈ ಅಧಿಕಾರಿಯು, ಪಾಕಿಸ್ತಾನವು ಪಾಸ್‌ಪೋರ್ಟ್ ನಿಷೇಧದಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದೆ ಮತ್ತು ಅಂತಹ ನಿಷೇಧವನ್ನು ಜಾರಿಗೊಳಿಸಿದರೆ ಅದನ್ನು ತೆಗೆದುಹಾಕುವುದು ಅತ್ಯಂತ ಕಷ್ಟಕರ ಎಂದು ಹೇಳಿದರು.

೨. ವಿಧಾನಸಭೆಯ ಮಾನವ ಹಕ್ಕುಗಳ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ, ಸಮಿತಿಯ ಅಧ್ಯಕ್ಷೆ ಸಮೀನಾ ಮುಮ್ತಾಜ್ ಜೈರಿ ಅವರು, ಕೆಲವು ನಾಗರಿಕರು ಯುಎಇಗೆ ಹೋಗಿ ಅಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸುವ ಸಾಧ್ಯತೆಯ ಕಾರಣದಿಂದ ವೀಸಾ ಪ್ರಕ್ರಿಯೆಯನ್ನು ಕಠಿಣಗೊಳಿಸಲಾಗಿದೆ ಎಂದು ತಿಳಿಸಿದರು. ಇತ್ತೀಚಿನ ತಿಂಗಳುಗಳಲ್ಲಿ ಬಹಳ ಕಡಿಮೆ ವೀಸಾಗಳು ಅನುಮೋದನೆಯಾಗಿವೆ ಮತ್ತು ಅವುಗಳನ್ನು ಸಹ ಕಠಿಣ ಪರಿಶೀಲನೆಯ ನಂತರವೇ ನೀಡಲಾಗಿದೆ.

ಪಾಕಿಸ್ತಾನದ ಆರ್ಥಿಕತೆಯ ಮೇಲೆ ಪರಿಣಾಮ

ಸಂಯುಕ್ತ ಅರಬ್ ಎಮಿರೇಟ್ಸ್ ಪಾಕಿಸ್ತಾನದ ದೊಡ್ಡ ವ್ಯಾಪಾರ ಪಾಲುದಾರನಾಗಿದೆ ಮತ್ತು ವಿದೇಶದಿಂದ ಹಣ ರವಾನೆಯ ಪ್ರಮುಖ ಮೂಲವಾಗಿದೆ. ವೀಸಾ ನಿರ್ಬಂಧಗಳಿಂದಾಗಿ ಅಲ್ಲಿ ಕೆಲಸ ಮಾಡುವ ಲಕ್ಷಾಂತರ ಪಾಕಿಸ್ತಾನಿ ಕಾರ್ಮಿಕರ ಮೇಲೆ ದೊಡ್ಡ ಪರಿಣಾಮ ಬೀರಬಹುದು.

ಸಂಪಾದಕೀಯ ನಿಲುವು

ಪಾಕಿಸ್ತಾನಿ ಜಿಹಾದಿ ಭಯೋತ್ಪಾದಕ ಕೃತ್ಯಗಳನ್ನೂ ಮಾಡುತ್ತಿರುವುದರಿಂದ, ಅವರಿಗೆ ಜಗತ್ತಿನ ಯಾವುದೇ ದೇಶಕ್ಕೂ ಪ್ರವೇಶಿಸುವುದನ್ನು ನಿಷೇಧಿಸುವುದು ಸೂಕ್ತವಾಗಿದೆ!