ಹಿಂದೂ ಮಹಿಳೆಯನ್ನು ವಂಚಿಸಿ ಅತ್ಯಾಚಾರ ಮಾಡಿದ ಮೊಹಮ್ಮದ್ ಅಕ್ರಮ್‌ಗೆ ೧೦ ವರ್ಷ ಕಠಿಣ ಜೈಲು ಶಿಕ್ಷೆ! Love Jihad Case

  • ಉದ್ಯೋಗದ ಆಮಿಷ ನೀಡಿ ವಂಚನೆ ಮಾಡಿದ್ದ!

  • ಮತಾಂತರಕ್ಕಾಗಿ ಒತ್ತಡ ಹೇರಿದ್ದ!

ಭೋಪಾಲ್ (ಮಧ್ಯಪ್ರದೇಶ) – ಇಲ್ಲಿನ ಮೊಹಮ್ಮದ್ ಅಕ್ರಮ್ ಎಂಬ ಮುಸ್ಲಿಂ ವ್ಯಕ್ತಿ, ತಾನು ಹಿಂದೂ ಎಂದು ಸುಳ್ಳು ಹೇಳಿ, ಓರ್ವ ಹಿಂದೂ ವಿವಾಹಿತ ಮಹಿಳೆಯನ್ನು ಪ್ರೀತಿಯ ಬಲೆಗೆ ಕೆಡವಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದನು. ಈ ಪ್ರಕರಣದಲ್ಲಿ ಭೋಪಾಲ್‌ನ ನ್ಯಾಯಾಲಯವು ಅಕ್ರಮ್‌ಗೆ ೧೦ ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ಪ್ರಕಟಿಸಿದೆ. ಸರಿಸುಮಾರು ೩ ವರ್ಷಗಳ ಕಾಲ ನಡೆದ ಈ ಮೊಕದ್ದಮೆಯಲ್ಲಿ, ನ್ಯಾಯಾಲಯವು ಸೂಕ್ತ ಸಾಕ್ಷ್ಯಗಳ ಆಧಾರದ ಮೇಲೆ ಈ ಮಹತ್ವದ ತೀರ್ಪನ್ನು ನೀಡಿದೆ.

೧. ಈ ‘ಲವ್ ಜಿಹಾದ್’ ಪ್ರಕರಣವು ಅಕ್ಟೋಬರ್ ೧೬, 2022 ರಂದು ನಗರದಲ್ಲಿ ಬಯಲಾಗಿತ್ತು. ಸಂತ್ರಸ್ತ ಮಹಿಳೆಯು ಬಣ್ಣದ ಕೆಲಸ ಮಾಡುವವರ ಮೊಬೈಲ್ ಸಂಖ್ಯೆಯನ್ನು ಹುಡುಕುತ್ತಿದ್ದಾಗ, ಆಕಸ್ಮಿಕವಾಗಿ ಆರೋಪಿ ಮೊಹಮ್ಮದ್ ಅಕ್ರಮ್‌ನೊಂದಿಗೆ ಸಂಪರ್ಕಕ್ಕೆ ಬಂದಳು.

೨. ಈ ಒಂದು ತಪ್ಪಾದ ಸಂಪರ್ಕದ ಲಾಭ ಪಡೆದ ಅಕ್ರಮ್, ಸಂತ್ರಸ್ತ ಮಹಿಳೆಗೆ ‘ವಾಟ್ಸಾಪ್’ನಲ್ಲಿ ಸಂದೇಶಗಳನ್ನು ಕಳುಹಿಸಲು ಪ್ರಾರಂಭಿಸಿದನು. ಅಕ್ರಮ್ ತನ್ನ ನಿಜವಾದ ಗುರುತನ್ನು ಸಂಪೂರ್ಣವಾಗಿ ಮರೆಮಾಚಿ, ತಾನು ಅಮರ್ ಕುಶ್ವಾಹ ಎಂದು ಸುಳ್ಳು ಹೇಳಿದ್ದನು.

೩. ಮಹಿಳೆಯ ವಿಶ್ವಾಸ ಗಳಿಸಲು, ಹಣೆಯ ಮೇಲೆ ತಿಲಕವಿಟ್ಟ ತನ್ನ ಚಿತ್ರಗಳನ್ನು ಸಹ ಆಕೆಗೆ ಕಳುಹಿಸಿದ್ದನು. ಅವನು ಮಹಿಳೆಗೆ ಉದ್ಯೋಗ ಕೊಡಿಸುವುದಾಗಿ ದೊಡ್ಡ ಆಮಿಷ ತೋರಿಸಿ, ಆಕೆಯನ್ನು ಒಂದು ಹೋಟೆಲ್‌ಗೆ ಕರೆದೊಯ್ದಿದ್ದನು.

೪. ಹೋಟೆಲ್ ಕೋಣೆಯಲ್ಲಿ, ಆತ ಮಹಿಳೆಯನ್ನು ಕೂಡಿ ಹಾಕಿ ಅತ್ಯಾಚಾರ ಎಸಗಿದ್ದನು. ನಂತರ ಆರೋಪಿ ತನ್ನ ನಿಜವಾದ ಗುರುತನ್ನು ಬಯಲು ಮಾಡಿ ತನ್ನ ಹೆಸರು ಮೊಹಮ್ಮದ್ ಅಕ್ರಮ್ ಎಂದು ತಿಳಿಸಿದ್ದನು. ತದನಂತರ ಆತ ಆಕೆಯ ಮೇಲೆ ಮತಾಂತರಕ್ಕಾಗಿ ಒತ್ತಡ ಹೇರಿದ್ದನು.

೫. ಅವನು ಸಂತ್ರಸ್ತ ಮಹಿಳೆಗೆ ಮತ್ತು ಆಕೆಯ ಚಿಕ್ಕ ಮಕ್ಕಳಿಗೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು. ಅಂತಿಮವಾಗಿ ಸಂತ್ರಸ್ತ ಮಹಿಳೆ ಧೈರ್ಯ ತೋರಿಸಿ ಪೊಲೀಸರಿಗೆ ದೂರು ನೀಡಿದ್ದಳು.