|

ನವದೆಹಲಿ – ದೇಶದ ರಾಜಧಾನಿ ದೆಹಲಿಯಲ್ಲಿನ ಮಾಲಿನ್ಯದಿಂದ ಜನರು ತೀವ್ರವಾಗಿ ತೊಂದರೆಗೊಳಗಾಗಿದ್ದಾರೆ. ಈ ಕುರಿತು ಅನೇಕ ಅರ್ಜಿಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿವೆ. ಈ ನಡುವೆ, ನವೆಂಬರ್ 27 ರಂದು ಒಂದು ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ವಿಭಾಗೀಯ ಪೀಠವು, ದೆಹಲಿಯ ಮಾಲಿನ್ಯವು ಇದ್ದಕ್ಕಿದ್ದಂತೆ ಕಣ್ಮರೆಯಾಗಲು ನಾವು ಯಾವ ಚಮತ್ಕಾರ ದಂಡವನ್ನು ತಿರುಗಿಸಬೇಕು? ಎಂದು ಕೇಳಿತು. ಈ ಸಮಸ್ಯೆಗೆ ಹಲವು ಆಯಾಮಗಳಿವೆ.
ನ್ಯಾಯಾಲಯವು ದಾಖಲಿಸಿದ ಪ್ರಮುಖ ಅವಲೋಕನಗಳು!
1. ಈ ಸಮಸ್ಯೆಗೆ ಒಂದೇ ಕಾರಣವಿಲ್ಲ ಮತ್ತು ನ್ಯಾಯಾಂಗ ವ್ಯವಸ್ಥೆಯ ಬಳಿ ತಕ್ಷಣದ ಪವಾಡದ ಪರಿಹಾರವಿಲ್ಲ. ಈ ವಿಷಯವು ಪ್ರತಿಯೊಬ್ಬ ನಾಗರಿಕರ ಜೀವನದೊಂದಿಗೆ ಸಂಬಂಧ ಹೊಂದಿರುವುದರಿಂದ, ಕೇವಲ ಔಪಚಾರಿಕವಾಗಿ ನೋಡದೆ, ಅದರತ್ತ ನಿರಂತರವಾಗಿ ಗಮನಹರಿಸುವುದು ಅವಶ್ಯಕವಾಗಿದೆ.
2. ಈ ಸಂದರ್ಭದಲ್ಲಿ ನ್ಯಾಯಮಿತ್ರರು ‘ರಾಜಧಾನಿಯ ಗಾಳಿಯು ಆರೋಗ್ಯದ ತುರ್ತು ಪರಿಸ್ಥಿತಿಯ ಸ್ಥಿತಿಯಾಗಿದೆ’ ಎಂದು ಹೇಳಿದಾಗ, ಮುಖ್ಯ ನ್ಯಾಯಮೂರ್ತಿಗಳು, ನ್ಯಾಯಾಲಯವು ಯಾವ ಚಮತ್ಕಾರ ದಂಡವನ್ನು ಬಳಸಬೇಕು! ತಕ್ಷಣ ಇಂದೆ ಸ್ವಚ್ಛ ಗಾಳಿ ಸಿಗುವಂತೆ ಯಾವ ಆದೇಶವನ್ನು ನೀಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.
3. ಗಾಳಿಯ ಗುಣಮಟ್ಟ ಕೆಟ್ಟದಾಗಲು ವಿವಿಧ ಅಂಶಗಳು ಕಾರಣವಾಗಿದ್ದು, ಪ್ರತಿಯೊಂದು ಅಂಶಕ್ಕೂ ಪರಿಹಾರವನ್ನು ನಿರ್ಧರಿಸುವುದು ತಜ್ಞರ ಜವಾಬ್ದಾರಿಯಾಗಿದೆ. ಈ ವಿಷಯವು ಪ್ರತಿ ವರ್ಷ ದೀಪಾವಳಿಯ ಹತ್ತಿರ ಮಾತ್ರ ಮುನ್ನೆಲೆಗೆ ಬರುತ್ತದೆ ಮತ್ತು ನಂತರ ಮರೆತುಹೋಗುತ್ತದೆ. ಇನ್ನು ಮುಂದೆ ಅದನ್ನು ನಿಯಮಿತವಾಗಿ ವಿಚಾರಣೆಗೆ ತೆಗೆದುಕೊಳ್ಳಲಾಗುವುದು.
4. ನಾನು ಕೂಡ ಕಳಪೆ ಗಾಳಿಯ ಪರಿಣಾಮವನ್ನು ಅನುಭವಿಸಿದ್ದೆನೆ. ಒಂದು ದಿನ ಮುಂಚೆ ಒಂದು ಗಂಟೆ ಸುತ್ತಾಡಿ ಬಂದ ನಂತರ ನನ್ನ ಆರೋಗ್ಯ ಹದಗೆಟ್ಟಿದೆ ಎಂದು ನನಗೆ ಅನಿಸಿತು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!