|

ಫಿರೋಜಾಬಾದ್ (ಉತ್ತರಪ್ರದೇಶ) – ಉತ್ತರಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ಧಾರ್ಮಿಕ ಪ್ರವಾಸೋದ್ಯಮವನ್ನು ಹೆಚ್ಚಿಸಲು ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಯು 5 ಪ್ರಮುಖ ದೇವಸ್ಥಾನಗಳ ಅಭಿವೃದ್ಧಿ ಕಾರ್ಯಗಳಿಗೆ ಅನುಮೋದನೆ ನೀಡಿದೆ. ‘ಮುಖ್ಯಮಂತ್ರಿ ಪ್ರವಾಸೋದ್ಯಮ ಯೋಜನೆ’ಯಡಿಯಲ್ಲಿ ಕೈಗೊಳ್ಳಲಾಗುವ ಈ ಅಭಿವೃದ್ಧಿ ಕಾಮಗಾರಿಗಳಿಗೆ 5 ಕೋಟಿ 50 ಲಕ್ಷ ರೂಪಾಯಿ ಖರ್ಚು ಮಾಡಲಾಗುವುದು. ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಠಾಕೂರ ಜಯವೀರ ಸಿಂಗ್ ಅವರು, ನಗಲಾ ಹರಿ ಸಿಂಗ್ ನಲ್ಲಿರುವ ಹನುಮಾನ ದೇವಸ್ಥಾನಕ್ಕೆ 1 ಕೋಟಿ 97 ಲಕ್ಷ ರೂಪಾಯಿ, ಕನವಾರ ರೈಮಜಾದಲ್ಲಿರುವ ಸಿದ್ಧಕಾಳಿ ಮಾತಾ ದೇವಸ್ಥಾನಕ್ಕೆ 1 ಕೋಟಿ 93 ಲಕ್ಷ ರೂಪಾಯಿ, ಚಂದ್ರವಾರನಲ್ಲಿರುವ ಪಸೀನೆ ವಾಲೆ ಹನುಮಾನ ದೇವಸ್ಥಾನಕ್ಕೆ 1 ಕೋಟಿ ರೂಪಾಯಿ, ರಜೌರಾದಲ್ಲಿರುವ ಸ್ವಾಮಿ ಗುದರಿಯಾವಾಲೇ ಮಹಾರಾಜ ಆಶ್ರಮಕ್ಕೆ 1 ಕೋಟಿ 47 ಲಕ್ಷ ರೂಪಾಯಿ ಮತ್ತು ಪಿಪರೌಲಿ ಜಲೇಸರನಲ್ಲಿರುವ ಗೋಗಾ ಜಿ ಕಾಳಿ ದೇವಸ್ಥಾನದ ಅಭಿವೃದ್ಧಿಗೆ 1 ಕೋಟಿ 12 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಲಾಗುವುದು ಎಂದು ತಿಳಿಸಿದರು.
ಫಿರೋಜಾಬಾದ್ ಗೆ ‘ಚಂದ್ರವಾರ’ ಎಂದು ಮರುನಾಮಕರಣ ಮಾಡುವ ಬೇಡಿಕೆ!
ಹಿಂದೆ ಈ ಪ್ರದೇಶದ ಹೆಸರು ‘ಚಂದ್ರವಾರ’ ಎಂದಾಗಿತ್ತು. ‘ಚಂದ್ರವಾರ’ ರಾಜಾ ಚಂದ್ರಸೇನನ ರಾಜಧಾನಿಯಾಗಿತ್ತು. ಆದ್ದರಿಂದ ಈ ನಗರಕ್ಕೆ ಹಿಂದಿನ ಹೆಸರನ್ನು ಮರಳಿ ನೀಡುವಂತೆ ಬೇಡಿಕೆ ಕೇಳಿಬರುತ್ತಿದ್ದು, ಈ ಪ್ರಸ್ತಾವನೆ ಸರಕಾರದ ಮಟ್ಟದಲ್ಲಿ ಬಾಕಿಯಿದೆ.
ಪಸೀನೆ ವಾಲೆ ಹನುಮಾನ ದೇವಸ್ಥಾನದ ವಿಶೇಷತೆ

ಈ ಐದು ದೇವಸ್ಥಾನಗಳಲ್ಲಿ, ಪಸೀನೆ ವಾಲೆ ಹನುಮಾನ (ಬೆವರು ಸುರಿಸುವ ಹನುಮಾನ) ದೇವಸ್ಥಾನವು ವಿಶೇಷ ವೈಶಿಷ್ಟ್ಯವನ್ನು ಹೊಂದಿದೆ. ಈ ಹೆಸರು ಏಕೆ ಬಂತು ಎಂಬುದರ ಕುರಿತು ಒಂದು ಅದ್ಭುತ ಕಥೆ ಭಕ್ತರಲ್ಲಿ ಪ್ರಚಲಿತವಿದೆ. ಯಮುನಾ ನದಿಯ ಶಾಂತ ತೀರದಲ್ಲಿ ನೆಲೆಸಿರುವ ಚಂದ್ರವಾರ ಗ್ರಾಮವು ಇಂದಿಗೂ ಈ ರಹಸ್ಯವನ್ನು ಕಾಪಾಡಿಕೊಂಡು ಬಂದಿದೆ. ಭಕ್ತರ ಪ್ರಕಾರ, ಶ್ರೀ ಹನುಮಂತನ ವಿಗ್ರಹಕ್ಕೆ ಕುಂಕುಮ ಲೇಪಿಸಿದ ತಕ್ಷಣ ಅದು ತೇವವಾಗುತ್ತದೆ. ಸ್ಥಳೀಯರ ಪ್ರಕಾರ, ಇದು ಕೇವಲ ವಿಶಿಷ್ಟವಲ್ಲ, ಆದರೆ ಶ್ರೀ ಹನುಮಾನ ಇಲ್ಲಿ ಸಜೀವ ರೂಪದಲ್ಲಿ ನೆಲೆಸಿದ್ದಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಸ್ಥಳೀಯ ನಂಬಿಕೆಯ ಪ್ರಕಾರ, ಈ ದೇವಸ್ಥಾನವು ಸುಮಾರು 2000 ವರ್ಷಗಳಷ್ಟು ಹಳೆಯದಾಗಿದೆ. ದೇವಸ್ಥಾನದ ಮಹಂತರ ಪ್ರಕಾರ, ಹಿಂದೆ ಈ ವಿಗ್ರಹಕ್ಕೆ ಎಷ್ಟು ಬೆವರು ಬರುತ್ತಿತ್ತೆಂದರೆ, ಭಕ್ತರು ಅದನ್ನು ಸಂಗ್ರಹಿಸಿ ಪ್ರಸಾದ ರೂಪದಲ್ಲಿ ಮನೆಗೆ ಒಯ್ಯುತ್ತಿದ್ದರು. ಈ ಭೂಮಿಯ ಅದ್ಭುತ ಶಕ್ತಿಯ ಪುರಾವೆ ಇದಾಗಿದೆ ಎಂದು ಅವರು ಹೇಳುತ್ತಾರೆ.
ಸಂಪಾದಕೀಯ ನಿಲುವುಆಕ್ರಮಣಕಾರರ ಹೆಸರಿರುವ ಗ್ರಾಮಗಳು, ಪಟ್ಟಣಗಳು, ತಾಲ್ಲೂಕುಗಳು, ಜಿಲ್ಲೆಗಳ ಹೆಸರನ್ನು ತಕ್ಷಣ ಬದಲಾಯಿಸಬೇಕಾದ ಅವಶ್ಯಕತೆಯಿದೆ. |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !