ಅಮೆರಿಕಾದ ಜಿ-೨೦ ಶೃಂಗಸಭೆಗೆ ದಕ್ಷಿಣ ಆಫ್ರಿಕಾವನ್ನು ಆಹ್ವಾನಿಸುವುದಿಲ್ಲ! – South Africa will not be Invited

  • ಡೊನಾಲ್ಡ್ ಟ್ರಂಪ್ ಅವರ ಘೋಷಣೆ

  • ಶ್ವೇತ ರೈತರನ್ನು ಕೊಲ್ಲುತ್ತಿರುವುದರಿಂದ ಈ ನಿರ್ಧಾರ

ವಾಷಿಂಗ್ಟನ್ (ಅಮೆರಿಕಾ) – ಮುಂದಿನ ವರ್ಷ ಅಮೆರಿಕಾದ ಮಿಯಾಮಿ ನಗರದಲ್ಲಿ ನಡೆಯಲಿರುವ ‘ಜಿ-೨೦’ ಶೃಂಗಸಭೆಗೆ ದಕ್ಷಿಣ ಆಫ್ರಿಕಾವನ್ನು ಆಹ್ವಾನಿಸದಿರಲು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದಾರೆ. ೨೦೨೬ ರ ಜಿ-೨೦ ಶೃಂಗಸಭೆಯು ಟ್ರಂಪ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ಜಿ-೨೦ ಸಭೆಯನ್ನು ಆಯೋಜಿಸಲಾಗಿತ್ತು; ಆದರೆ ಅಮೆರಿಕಾದ ಅಧ್ಯಕ್ಷ ಟ್ರಂಪ್ ಅದರಲ್ಲಿ ಭಾಗವಹಿಸಿರಲಿಲ್ಲ. ಟ್ರಂಪ್ ಅವರು ದಕ್ಷಿಣ ಆಫ್ರಿಕಾದ ಮೇಲೆ ಬಿಳಿ ಜನರನ್ನು ಕೊಲ್ಲುತ್ತಿದ್ದಾರೆ ಮತ್ತು ಅವರ ಕೃಷಿ ಭೂಮಿಯನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಅವರು, ಅಮೆರಿಕಾದ ಮಾಧ್ಯಮಗಳು ಈ ಹಿಂಸಾಚಾರದ ಕಡೆಗೆ ಎಂದಿಗೂ ಗಮನ ನೀಡುವುದಿಲ್ಲ ಎಂದು ಹೇಳಿದರು.

ಟ್ರಂಪ್ ಅವರು, “ಅಮೆರಿಕಾದಿಂದ ದಕ್ಷಿಣ ಆಫ್ರಿಕಾದ ಜಿ-೨೦ ಸಭೆಯಲ್ಲಿ ಭಾಗವಹಿಸಲಿಲ್ಲ; ಏಕೆಂದರೆ ಅಲ್ಲಿನ ಸರಕಾರವು ಆಫ್ರಿಕನ್ ಸಮುದಾಯದ ಮೇಲೆ, ಹಾಗೆಯೇ ಡಚ್, ಫ್ರೆಂಚ್ ಮತ್ತು ಜರ್ಮನ್ ಮೂಲದ ವಸಾಹತುಶಾಹಿಗಳ ಉತ್ತರಾಧಿಕಾರಿಗಳ ಮೇಲೆ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ನಿರ್ಲಕ್ಷಿಸುತ್ತದೆ. ದಕ್ಷಿಣ ಆಫ್ರಿಕಾವು ತಾನು ಜಿ-೨೦ ಸದಸ್ಯನಾಗಿರಲು ಅನರ್ಹ ಎಂದು ಜಗತ್ತಿಗೆ ತೋರಿಸಿಕೊಟ್ಟಿದೆ. ಆ ದೇಶಕ್ಕೆ ಅಮೆರಿಕಾದಿಂದ ಸಿಗುವ ಎಲ್ಲಾ ಅನುದಾನ ಮತ್ತು ಪಾವತಿಗಳನ್ನು ತಕ್ಷಣವೇ ನಿಲ್ಲಿಸಲಾಗುವುದು” ಎಂದು ಹೇಳಿದರು. ಇತ್ತೀಚೆಗೆ ನಡೆದ ಸಭೆ ಮುಗಿದ ನಂತರ ದಕ್ಷಿಣ ಆಫ್ರಿಕಾವು ಅಮೆರಿಕಾದ ರಾಯಭಾರ ಕಚೇರಿಯ ಹಿರಿಯ ಪ್ರತಿನಿಧಿಗೆ ಜಿ-೨೦ ಶೃಂಗಸಭೆಯ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸಲು ನಿರಾಕರಿಸಿತು. ಆದ್ದರಿಂದ, ಅವರ ನಿರ್ದೇಶನದ ಪ್ರಕಾರ, ೨೦೨೬ ರ ಜಿ-೨೦ ಶೃಂಗಸಭೆಗೆ ದಕ್ಷಿಣ ಆಫ್ರಿಕಾವನ್ನು ಆಹ್ವಾನಿಸಲಾಗುವುದಿಲ್ಲ. ಈ ಶೃಂಗಸಭೆಯು ಫ್ಲೋರಿಡಾದ ಮಿಯಾಮಿ ನಗರದಲ್ಲಿ ನಡೆಯಲಿದೆ.

ಸಂಪಾದಕೀಯ ನಿಲುವು

 ಶ್ವೇತ ರೈತರು, ಕ್ರೈಸ್ತರನ್ನು ಕೊಲ್ಲುತ್ತಿರುವುದರಿಂದ ಟ್ರಂಪ್ ಅವರು ಆ ದೇಶಕ್ಕೆ ಆಹ್ವಾನವನ್ನೂ ನೀಡುವುದಿಲ್ಲ ಎಂದು ಹೇಳುತ್ತಾರೆ, ಇದನ್ನು ನೋಡಿದರೆ ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿ ಹಿಂದೂಗಳನ್ನು ಕೊಲ್ಲುತ್ತಿರುವಾಗ ಭಾರತವು ಏನನ್ನೂ ಮಾಡುತ್ತಿಲ್ಲ ಎಂಬುದು ಗಮನಕ್ಕೆ ಬರುತ್ತದೆ!