ಕಠಿಣ ಕ್ರಮಕ್ಕೆ ಒತ್ತಾಯಿಸಿದ ಜನರು

ಠಾಣೆ, ನವೆಂಬರ್ 26 (ವರದಿ) – ಅಂಬಿವಲಿಯ ಅಟಾಳಿ ಪ್ರದೇಶದಲ್ಲಿ ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ನವೆಂಬರ್ 23 ರಂದು ಮಧ್ಯಾಹ್ನ 1 ಗಂಟೆಗೆ ರಿಕ್ಷಾ ನಿಲ್ದಾಣದ ಬಳಿ ಕೆಲವು ವ್ಯಕ್ತಿಗಳು ಅನುಮತಿಯಿಲ್ಲದೆ ಪುಸ್ತಕ ಮಾರಾಟಕ್ಕಾಗಿ ವಿತರಣಾ ಕೇಂದ್ರ (ಸ್ಟಾಲ್) ತೆರೆದು ಹಿಂದೂ ಧರ್ಮದ ವಿರುದ್ಧ ಅವಮಾನಕರ ಮತ್ತು ದ್ವೇಷಪೂರಿತ ಸಾಹಿತ್ಯವನ್ನು ವಿತರಿಸಿದರು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರುದಾರರು ಸಂಬಂಧಪಟ್ಟ ಪುಸ್ತಕಗಳನ್ನು ಪರಿಶೀಲಿಸಿದಾಗ, ಅವುಗಳಲ್ಲಿ ಹಿಂದೂ ದೇವತೆಗಳು, ಸಾಧು-ಸಂತರು ಮತ್ತು ಧರ್ಮಚಿಹ್ನೆಗಳ ಬಗ್ಗೆ ವಿರೂಪಗೊಂಡ ಬರಹಗಳು ಕಂಡುಬಂದಿವೆ. ವಿತರಣಾ ಕೇಂದ್ರದಲ್ಲಿದ್ದ ವ್ಯಕ್ತಿಗಳನ್ನು ಅನುಮತಿಯ ಬಗ್ಗೆ ಕೇಳಿದಾಗ ಅವರು ಉದ್ಧಟತನದಿಂದ ಉತ್ತರ ನೀಡಿದರು, ಅಲ್ಲದೆ ಅಲ್ಲಿದ್ದ ವಕೀಲರೊಬ್ಬರು ದೂರುದಾರರ ಮೇಲೆ ಸುಳ್ಳು ಆರೋಪ ಮಾಡುವ ಬೆದರಿಕೆಯನ್ನು ಸಹ ಹಾಕಿದರು. (ದೂರುದಾರರಿಗೆ ಬೆದರಿಕೆ ಹಾಕುವ ವಕೀಲರ ಪರವಾನಗಿಯನ್ನು ರದ್ದುಗೊಳಿಸಬೇಕು! – ಸಂಪಾದಕರು)
ಈ ಪುಸ್ತಕಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ‘ಅಂಧಶ್ರದ್ಧಾ ಭಕ್ತಿ ಖತರಾ-ಎ-ಜಾನ್’, ‘ಜ್ಞಾನ ಗಂಗಾ’, ‘ಜೀನೆ ಕೀ ರಾಹ್’ ಮುಂತಾದ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ. ದೂರುದಾರರು ಹಿಂದೂ ಧರ್ಮದ ವಿರುದ್ಧ ದ್ವೇಷ ಹರಡುತ್ತಿರುವ ವ್ಯಕ್ತಿಗಳ ವಿರುದ್ಧ, ಹಾಗೂ ಸಂಬಂಧಿತ ಪ್ರಕಾಶನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ ಪ್ರಕರಣ ದಾಖಲಿಸುವಂತೆ ವಿನಂತಿಸಿದ್ದಾರೆ.
ಸಂಪಾದಕೀಯ ನಿಲುವುಹಿಂದೂ ಬಹುಸಂಖ್ಯಾತ ರಾಜ್ಯದಲ್ಲಿ ಇಂತಹ ಘಟನೆ ನಡೆಯುವುದು ದುರದೃಷ್ಟಕರ! ಹಿಂದೂಗಳು ಸಂಘಟಿತರಾಗಿ ಇಂತಹ ಕೃತ್ಯ ಮಾಡುವವರನ್ನು ಶಿಕ್ಷೆಗೆ ಒಳಪಡಿಸಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!