ದೆಹಲಿ: ಕರಕರ್ಡೂಮಾ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ 25 ವಕೀಲರಿಗೆ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ಕ್ಕೆ ಆಹ್ವಾನ! – Sanatan Rashtra Shankhanad Mahotsav Delhi 2025

ದೆಹಲಿ – ದೆಹಲಿಯ ಕರಕರ್ಡೂಮಾ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ 25 ವಕೀಲರಿಗೆ ದೆಹಲಿಯಲ್ಲಿ ನಡೆಯಲಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ಆಹ್ವಾನ ನೀಡಲಾಯಿತು. ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ ಚೇತನ್ ರಾಜಹಂಸ ಅವರು ವಕೀಲರ ಸಭೆಯಲ್ಲಿ ಈ ಉತ್ಸವದ ಬಗ್ಗೆ ಮಾಹಿತಿ ನೀಡಿದರು. ವಕೀಲ ಅವನೀಶ್ ಶುಕ್ಲಾ ಅವರು ಈ ಸಭೆಯನ್ನು ಆಯೋಜಿಸಿದ್ದರು.

ಈ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವು ಡಿಸೆಂಬರ್ 13 ಮತ್ತು 14 ರಂದು ಭಾರತ ಮಂಟಪಂನಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಹಾಜರಿದ್ದ ವಕೀಲರು ಶಂಖನಾದ ಮಹೋತ್ಸವದಲ್ಲಿ ಭಾಗವಹಿಸುವುದಾಗಿ ತಿಳಿಸಿದರು.