ಕ್ಯಾಥೋಲಿಕ್ ಚರ್ಚ್‌ನಲ್ಲಿನ ಲೈಂಗಿಕ ದೌರ್ಜನ್ಯದ ಪ್ರಕರಣ
(ಚರ್ಚ್‌ನಲ್ಲಿ ಮೇಲಿನ ಶ್ರೇಣಿಯಲ್ಲಿ ಕಾರ್ಯನಿರ್ವಹಿಸುವ ಪಾದ್ರಿಗಳನ್ನು ‘ಬಿಷಪ್’ ಎಂದು ಕರೆಯಲಾಗುತ್ತದೆ.)

ಮ್ಯಾಡ್ರಿಡ್ (ಸ್ಪೇನ್) – ಸ್ಪೇನ್‌ನ ಕ್ಯಾಡಿಜ್ ಮತ್ತು ಸಿಯುಟಾ ಧರ್ಮಪ್ರಾಂತ್ಯಗಳ ೭೬ ವರ್ಷದ ಬಿಷಪ್ ರಾಫೆಲ್ ಜೋರ್ನೋಸಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪೋಪ್ ಲಿಯೋ ಅವರು ಅವರ ರಾಜೀನಾಮೆಯನ್ನು ಸ್ವೀಕರಿಸಿದ್ದಾರೆ. ೧೯೯೦ ರ ದಶಕದಲ್ಲಿ ಓರ್ವ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಅವರ ಮೇಲಿದೆ. ಚರ್ಚ್‌ನ ನ್ಯಾಯಾಧಿಕರಣದಿಂದ ಅವರ ವಿಚಾರಣೆ ನಡೆಯುತ್ತಿದೆ.
೧. ವ್ಯಾಟಿಕನ್ ನಡೆಸಿದ ಮುಕ್ತ ತನಿಖೆಯನ್ನು ಎದುರಿಸುತ್ತಿರುವ ಸ್ಪೇನ್‌ನ ಮೊದಲ ಕ್ಯಾಥೋಲಿಕ್ ಬಿಷಪ್ ಇವರಾಗಿದ್ದಾರೆ.
೨. ಸಂತ್ರಸ್ತ ವ್ಯಕ್ತಿಯು ತನ್ನ ಮೇಲಾದ ಲೈಂಗಿಕ ದೌರ್ಜನ್ಯದ ಮಾಹಿತಿಯನ್ನು ‘ಡಿಕಾಸ್ಟರಿ ಫಾರ್ ದಿ ಡಾಕ್ಟ್ರಿನ್ ಆಫ್ ಫೇಥ್’ ಎಂಬ ಸಂಸ್ಥೆಗೆ ಕಳುಹಿಸಿದ ಪತ್ರದಲ್ಲಿ ನೀಡಿದ್ದಾನೆ. ಅದರಲ್ಲಿ, ೧೯೯೪ ರಲ್ಲಿ ದೌರ್ಜನ್ಯ ಪ್ರಾರಂಭವಾಯಿತು, ಆಗ ತನಗೆ ೧೪ ವರ್ಷ ವಯಸ್ಸಾಗಿತ್ತು. ಆನಂತರ ೭ ವರ್ಷಗಳ ಕಾಲ, ಅಂದರೆ ತನಗೆ ೨೧ ವರ್ಷವಾಗುವವರೆಗೆ ಬಿಷಪ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ, ಎಂದು ಉಲ್ಲೇಖಿಸಿದ್ದಾರೆ.
೩. ಸಂತ್ರಸ್ತ ವ್ಯಕ್ತಿಯು, ರಾತ್ರಿ ಬಿಷಪ್ ತನ್ನ ಕೋಣೆಗೆ ಬರುತ್ತಿದ್ದರು. ತಾನು ಭಯಭೀತರಾಗಿ ಮೌನವಾಗಿರುತ್ತಿದ್ದೆ. ಅವರು ತನ್ನ ಪಕ್ಕದಲ್ಲಿ ಮಲಗುತ್ತಿದ್ದರು, ತನ್ನ ಗುಪ್ತಾಂಗಗಳನ್ನು ಸ್ಪರ್ಶಿಸುತ್ತಿದ್ದರು ಮತ್ತು ಚುಂಬಿಸುತ್ತಿದ್ದರು. ಬೆಳಿಗ್ಗೆಯೂ ಅದೇ ರೀತಿಯಲ್ಲಿ ತನ್ನ ಲೈಂಗಿಕ ಶೋಷಣೆ ಮಾಡುತ್ತಿದ್ದರು ಎಂದು ಬರೆದಿದ್ದಾನೆ.
೪. ಈ ಪ್ರಕರಣದಿಂದಾಗಿ ಕ್ಯಾಥೋಲಿಕ್ ಚರ್ಚ್‌ನಲ್ಲಿ ದೀರ್ಘಕಾಲದಿಂದ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಪ್ರಶ್ನೆಯು ಮತ್ತೊಮ್ಮೆ ತಲೆ ಎತ್ತಿದೆ.
ಸಂಪಾದಕೀಯ ನಿಲುವು
|
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation