ಕೇರಳ ಉಚ್ಚ ನ್ಯಾಯಾಲಯದ ತೀರ್ಪು

ತಿರುವನಂತಪುರಂ (ಕೇರಳ) – ಪತ್ನಿಯ ಆದಾಯವು ಸ್ಥಿರವಾಗಿಲ್ಲದಿದ್ದರೆ ಅಥವಾ ಆಕೆ ತನ್ನ ಖರ್ಚುಗಳನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ, ಆಕೆಯ ಜೀವನಾಂಶ ಪಡೆಯುವ ಹಕ್ಕು ಹಾಗೆಯೇ ಉಳಿಯುತ್ತದೆ. ಆಕೆಯನ್ನು ಈ ಹಕ್ಕಿನಿಂದ ವಂಚಿತಗೊಳಿಸುವಂತಿಲ್ಲ ಎಂದು ಕೇರಳ ಉಚ್ಚ ನ್ಯಾಯಾಲಯವು ವಿಚ್ಛೇದನದ ಪ್ರಕರಣವೊಂದರಲ್ಲಿ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿ ಕೌಸರ್ ಎಡಪ್ಪಗಾಥ ಅವರು ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ಉಲ್ಲೇಖಿಸಿ ಈ ತೀರ್ಪನ್ನು ಪ್ರಕಟಿಸಿದರು. ನ್ಯಾಯಮೂರ್ತಿಗಳು, ಗಳಿಸುವ ಸಾಮರ್ಥ್ಯ ಮತ್ತು ವಾಸ್ತವವಾಗಿ ಸಾಕಷ್ಟು ಆದಾಯವನ್ನು ಗಳಿಸುವುದು, ಇವೆರಡರ ನಡುವೆ ವ್ಯತ್ಯಾಸವಿದೆ. ಎಂದು ಹೇಳಿದರು.
ಯಾವ ಪ್ರಕರಣ?
ಮಹಿಳೆಯು, ತನಗೆ ಹೊಲಿಗೆ ಕೆಲಸ ಗೊತ್ತಿದೆ, ಆದರೆ ತನಗೆ ಶಾಶ್ವತ ಕೆಲಸವಿಲ್ಲ ಮತ್ತು ಆದಾಯವೂ ಸಾಕಷ್ಟು ಇಲ್ಲ. ಆಕೆ ತನ್ನ ಪತಿಯ ಮೇಲೆ ಮಾನಸಿಕ ಮತ್ತು ದೈಹಿಕ ದೌರ್ಜನ್ಯದ ಆರೋಪ ಮಾಡಿದ್ದರು. ಇಬ್ಬರೂ ಬೇರೆಯಾದ ನಂತರ ಮಕ್ಕಳು ಮಹಿಳೆಯೊಂದಿಗೆ ವಾಸಿಸುತ್ತಿದ್ದಾರೆ. ಈ ಕಾರಣಕ್ಕಾಗಿ, ಮಹಿಳೆಯು ತನಗೆ ಹಾಗೂ ತನ್ನ ಮಕ್ಕಳಿಗೆ ಜೀವನಾಂಶಕ್ಕಾಗಿ ಬೇಡಿಕೆ ಸಲ್ಲಿಸಿದ್ದರು. ಆಕೆಯ ಪತಿಯು ಒಬ್ಬ ದರ್ಜಿ ಆಗಿದ್ದು, ಆತ ಪತ್ನಿ ಮತ್ತು ಮಕ್ಕಳಿಗೆ ಜೀವನಾಂಶ ನೀಡಲು ಸಾಕಾಗುವಷ್ಟು ಸಂಪಾದಿಸುತ್ತಾನೆ. ಮಹಿಳೆಯು ತನ್ನ ಪತಿಯಿಂದ ತನಗಾಗಿ ಪ್ರತಿ ತಿಂಗಳು 15 ಸಾವಿರ ರೂಪಾಯಿ ಹಾಗೂ ಇಬ್ಬರು ಮಕ್ಕಳಿಗಾಗಿ ತಲಾ ಪ್ರತಿ ತಿಂಗಳು 10 ಸಾವಿರ ರೂಪಾಯಿ ಜೀವನಾಂಶ ನೀಡುವಂತೆ ಬೇಡಿಕೆ ಸಲ್ಲಿಸಿದ್ದರು.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!