‘ಮುಸ್ಲಿಂ ವಿದ್ಯಾರ್ಥಿಗಳು ‘ಅಲ್-ಫಲಾಹ್’ಗೆ ಹೋಗಿ ಕಟ್ಟರವಾದಿಗಳಾದರೆ, ಅದಕ್ಕೆ ಯಾರು ಹೊಣೆ?'(ಅಂತೆ) : Omar Abdullah

ಶ್ರೀ ಮಾತಾ ವೈಷ್ಣೋದೇವಿ ವೈದ್ಯಕೀಯ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಪ್ರವೇಶಕ್ಕೆ ಸಂಬಂಧಿಸಿದ ವಿವಾದದ ಕುರಿತು ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರ ಭಯೋತ್ಪಾದಕರಿಗೆ ಬೆಂಬಲ ನೀಡುವ ಪ್ರಶ್ನೆ!

ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ

ಶ್ರೀನಗರ (ಜಮ್ಮು – ಕಾಶ್ಮೀರ) – ವಿದ್ಯಾರ್ಥಿಗಳು ಯಾವುದೇ ವೈದ್ಯಕೀಯ ಸಂಸ್ಥೆಗೆ ಹೋಗುವಾಗ ಹೆಸರು ಅಥವಾ ಹಣ ಎಲ್ಲಿಂದ ಬರುತ್ತದೆ ಎಂಬುದನ್ನು ನೋಡುವುದಿಲ್ಲ, ಅವರು ಕೇವಲ ಶಿಕ್ಷಣದ ಬಗ್ಗೆ ಯೋಚಿಸುತ್ತಾರೆ. ಅವರು ವೈದ್ಯರಾಗುವ ಕನಸು ಕಾಣುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ಧರ್ಮದ ಆಧಾರದ ಮೇಲೆ ಪ್ರವೇಶ ನಿರಾಕರಿಸಿ, ಅವರು ಅಲ್-ಫಲಾಹ್ ವಿಶ್ವವಿದ್ಯಾಲಯಕ್ಕೆ ಹೋಗಿ ಕಟ್ಟರವಾದದ ಕಡೆಗೆ ವಾಲಿದರೆ, ಅದಕ್ಕೆ ಯಾರು ಹೊಣೆ ಆಗುತ್ತಾರೆ? ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಪ್ರಶ್ನಿಸಿದ್ದಾರೆ. ಜಮ್ಮುವಿನ ಶ್ರೀಮಾತಾ ವೈಷ್ಣೋದೇವಿ ಟ್ರಸ್ಟ್‌ನ ವೈದ್ಯಕೀಯ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಪ್ರವೇಶಕ್ಕೆ ಹಿಂದೂತ್ವನಿಷ್ಠ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಈ ಹಿನ್ನೆಲೆಯಲ್ಲಿ ಅಬ್ದುಲ್ಲಾ ಅವರು ಈ ಪ್ರಶ್ನೆಯನ್ನು ಸಂಘಟನೆಗಳಿಗೆ ಕೇಳಿದ್ದಾರೆ. ಅವರು ಮಾತು ಮುಂದುವರೆಸಿ, ‘ಒಂದು ವೇಳೆ ಸಂಸ್ಥೆಯ ಉದ್ದೇಶವು ನಿರ್ದಿಷ್ಟ ಸಮುದಾಯಕ್ಕಾಗಿ ಸ್ಥಾನಗಳನ್ನು ಕಾಯ್ದಿರಿಸುವುದಾಗಿದ್ದರೆ, ಅದರ ಸ್ಥಾಪನೆಯ ಸಮಯದಲ್ಲಿ ಅದಕ್ಕೆ ಅಲ್ಪಸಂಖ್ಯಾತ ಸಂಸ್ಥೆಯ ಸ್ಥಾನಮಾನವನ್ನು ಏಕೆ ನೀಡಲಿಲ್ಲ? ಸ್ಥಾನಮಾನ ನೀಡಿದ್ದರೆ, ವಿವಾದವೇ ಸೃಷ್ಟಿಯಾಗುತ್ತಿರಲಿಲ್ಲ.’ ಅವರು ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. (ಅಬ್ದುಲ್ಲಾ ಹೇಳಿದಂತೆ ಮಾಡುವುದರಿಂದ ಮುಸ್ಲಿಮರಿಗೆ ಅಲ್ಲಿ ಪ್ರವೇಶ ನಿಷೇಧವಾಗುವುದಾದರೆ, ಈಗ ಹಿಂದೂಗಳು ಈ ಬೇಡಿಕೆ ಇಟ್ಟು ಆ ಸ್ಥಾನಮಾನವನ್ನು ನೀಡುವಂತೆ ಒತ್ತಾಯಿಸಬೇಕು! – ಸಂಪಾದಕರು)

ಪ್ರವೇಶ ಪ್ರಕ್ರಿಯೆಯು ಕೇವಲ ಅರ್ಹತಾ ಪರೀಕ್ಷೆಗಳನ್ನು ಆಧರಿಸಿದೆ!

ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರು, ಪ್ರವೇಶ ಪ್ರಕ್ರಿಯೆಯು ಕೇವಲ ‘ನೀಟ್’ (ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರನ್ಸ್ ಟೆಸ್ಟ್, ಅಂದರೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ. ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಈ ಪರೀಕ್ಷೆ ನೀಡುವುದು ಕಡ್ಡಾಯವಾಗಿದೆ) ಮತ್ತು ಇತರ ಅರ್ಹತಾ ಪರೀಕ್ಷೆಗಳನ್ನು ಆಧರಿಸಿದೆ, ಅದರಲ್ಲಿ ಧರ್ಮವನ್ನು ಪರಿಗಣಿಸಲಾಗುವುದಿಲ್ಲ. ಒಂದು ವೇಳೆ ಸಂಸ್ಥೆಯಲ್ಲಿ ನಿರ್ದಿಷ್ಟ ಸಮುದಾಯದ ವಿದ್ಯಾರ್ಥಿಗಳು ಮಾತ್ರ ಇರಬಾರದು ಎಂದಿದ್ದರೆ, ಅದನ್ನು ‘ಅಲ್ಪಸಂಖ್ಯಾತ ಸಂಸ್ಥೆ’ ಎಂದು ಘೋಷಿಸಬೇಕು. ಆಗ ಮುಸ್ಲಿಂ ಮತ್ತು ಸಿಖ್ ವಿದ್ಯಾರ್ಥಿಗಳು ಅಲ್ಲಿಂದ ಹೊರಟು ಬೇರೆಡೆ ಪ್ರವೇಶ ಪಡೆಯುತ್ತಾರೆ. (ಸಿಖ್ಖರು ಹಿಂದೂಗಳಿಗಿಂತ ಭಿನ್ನರಲ್ಲ, ಆದ್ದರಿಂದ ಅವರಿಗೆ ಯಾರೂ ವಿರೋಧಿಸುವುದಿಲ್ಲ. ಅಬ್ದುಲ್ಲಾ ಅವರು ಹಿಂದೂ ಮತ್ತು ಸಿಖ್ಖರ ನಡುವೆ ಭೇದ ಮಾಡಬಾರದು ಮತ್ತು ಮುಸ್ಲಿಂ ಹಾಗೂ ಸಿಖ್ಖರನ್ನು ಒಂದೇ ಎಂದು ತಿಳಿಯಬಾರದು! – ಸಂಪಾದಕರು)

ಪ್ರವೇಶವು ಅರ್ಹತೆಯ ಆಧಾರದ ಮೇಲೆ!

ಓಮರ್ ಅಬ್ದುಲ್ಲಾ ಅವರು, ಯಾರಿಗೆ ಪ್ರವೇಶ ದೊರೆತಿದೆಯೋ, ಅವರಿಗೆ ಅದು ಅರ್ಹತೆಯ ಆಧಾರದ ಮೇಲೆ ದೊರೆತಿದೆ ಎಂದು ನಮೂದಿಸಿದರು. (ಅಲ್-ಫಲಾಹ್ ವಿಶ್ವವಿದ್ಯಾಲಯದ ಮುಸ್ಲಿಂ ವೈದ್ಯರಲ್ಲಿಯೂ ಅರ್ಹತೆ ಇತ್ತು; ಆದರೆ ಅವರು ಅದನ್ನು ಜಿಹಾದಿ ಭಯೋತ್ಪಾದನೆಗಾಗಿ ಬಳಸಿಕೊಂಡು ದೇಶದ್ರೋಹ ಮಾಡಿದರು! – ಸಂಪಾದಕರು) ಅವರಿಗೆ ಇನ್ನೊಂದು ಕಡೆ ಪ್ರವೇಶ ನೀಡಬಹುದು; ಆದರೆ ಸಮಾಜದ ಮೇಲೆ ಆರೋಪ ಮಾಡಬಾರದು. ಒಂದು ಘಟನೆಯಿಂದ ಇಡೀ ಸಮಾಜವನ್ನು ದೂಷಿಸುವುದು ಸರಿಯಲ್ಲ, ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಹಿಂದೂ ವೈದ್ಯಕೀಯ ಕಾಲೇಜಿನಲ್ಲಿ ಕಲಿಯುವ ಮುಸ್ಲಿಂ ವಿದ್ಯಾರ್ಥಿಗಳು ಭಯೋತ್ಪಾದಕರಾಗಲು ಸಾಧ್ಯವಿಲ್ಲ’, ಆದರೆ ‘ಅಲ್-ಫಲಾಹ್‌ನಂತಹ ವಿಶ್ವವಿದ್ಯಾಲಯಕ್ಕೆ ಹೋದರೆ ಅವರು ಭಯೋತ್ಪಾದಕರಾಗಬಹುದು’ ಎಂದು ಓಮರ್ ಅಬ್ದುಲ್ಲಾ ಅವರಿಗೆ ಖಚಿತವಿದೆ ಎಂದು ಅವರ ಹೇಳಿಕೆಯಿಂದ ತಿಳಿದುಬರುತ್ತದೆ. ಭಯೋತ್ಪಾದಕರು ಹೇಗೆ ಸೃಷ್ಟಿಯಾಗುತ್ತಿದ್ದಾರೆ ಎಂಬುದನ್ನು ಇದರ ಮೂಲಕ ಅಬ್ದುಲ್ಲಾ ಒಪ್ಪಿಕೊಳ್ಳುತ್ತಿದ್ದಾರೆ ಎಂದಾಯಿತಲ್ಲವೇ? ಈಗ ಅವರೇ ದೇಶದಾದ್ಯಂತ ಅಂತಹ ವಿಶ್ವವಿದ್ಯಾಲಯಗಳ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಬೇಕು!
  • ಬಹುತೇಕ ಬಾರಿ ಮದರಸಾಗಳಲ್ಲಿ ಕಲಿಯುವವರಲ್ಲಿಯೇ ಹಲವರು ಜಿಹಾದಿ ಮತ್ತು ಭಯೋತ್ಪಾದಕರಾಗಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಹಾಗಿದ್ದರೆ ಅವುಗಳನ್ನೂ ಸಹ ಮುಚ್ಚಬೇಕು ಎಂದು ಓಮರ್ ಅಬ್ದುಲ್ಲಾ ಅವರ ಹೇಳಿಕೆಯಿಂದ ಅರ್ಥವಾಗುತ್ತದೆ. ಈಗ ಅವರು ಮದರಸಾಗಳನ್ನು ನಿಷೇಧಿಸಲು ಮುಂದೆ ಬರಬೇಕು, ಆಗ ಮುಸ್ಲಿಮರು ಭಯೋತ್ಪಾದಕರಾಗುವುದಿಲ್ಲ!