
ಆಡಿಸ್ ಅಬಾಬಾ (ಇಥಿಯೋಪಿಯಾ) – ಆಫ್ರಿಕಾ ದೇಶದ ಇಥಿಯೋಪಿಯಾದ ಹಾಯಲಿ ಗುಬ್ಬಿ ಪ್ರದೇಶದಲ್ಲಿ ಇತ್ತೀಚೆಗೆ ಜ್ವಾಲಾಮುಖಿ ಸ್ಫೋಟ ಸಂಭವಿಸಿದೆ. ಸುಮಾರು 10 ಸಾವಿರ ವರ್ಷಗಳ ನಂತರ ಈ ಸ್ಫೋಟವಾಗಿದೆ ಎಂದು ಹೇಳಲಾಗುತ್ತಿದ್ದು ಇದರ ಪರಿಣಾಮ ಸಾವಿರಾರು ಕಿಲೋಮೀಟರ್ ದೂರದ ವರೆಗಿನ ವಾತಾವರಣದ ಮೇಲೂ ಆಗಿದೆ. ಜ್ವಾಲಾಮುಖಿ ಸ್ಫೋಟದಿಂದ ಮೇಲೆ ಬಂದ ಬೂದಿಯಿಂದ, ‘ಸಲ್ಫರ್ ಡೈ ಆಕ್ಸೈಡ್’ ನ ಮತ್ತು ದೊಡ್ಡ ಪ್ರಮಾಣದ ಗಾಜಿನ ಚೂರುಗಳ ಮೋಡಗಳು ಸೃಷ್ಟಿಯಾಗಿವೆ. ಈ ಮೋಡಗಳು ಮೊದಲು ನೆರೆಯ ಒಮಾನ್ ಮತ್ತು ಯೆಮೆನ್ ದೇಶಗಳಿಗೆ ತಲುಪಿದ ನಂತರ ಗುಜರಾತ್ ಮೂಲಕ ಭಾರತಕ್ಕೂ ಬಂದಿವೆ. ಕೆಲವು ಗಂಟೆಗಳಲ್ಲಿ ಅವು ಚೀನಾ ಕಡೆಗೆ ಸಾಗಲಿವೆ. ಇದರಿಂದಾಗಿ ವಿಮಾನ ಸಂಚಾರದ ಮೇಲೆ ಭಾರೀ ಪರಿಣಾಮ ಉಂಟಾಗಿದೆ.

ಇಥಿಯೋಪಿಯಾದ ಪೂರ್ವ ಭಾಗದಲ್ಲಿ ನವೆಂಬರ್ 23 ರಂದು ಜ್ವಾಲಾಮುಖಿ ಸ್ಫೋಟಗೊಂಡಿತು. ಸ್ಫೋಟ ಎಷ್ಟು ಪ್ರಬಲವಾಗಿತ್ತೆಂದರೆ, ಬೂದಿ ಮತ್ತು ಕಲ್ಲಿನ ಚೂರುಗಳ ದಟ್ಟ ಹೊಗೆಯು ಆಕಾಶದಲ್ಲಿ ಬರೋಬ್ಬರಿ 14 ರಿಂದ 15 ಕಿಲೋಮೀಟರ್ ವರೆಗೆ ಎತ್ತರಕ್ಕೆ ಚಿಮ್ಮಿತು. ಈ ಜ್ವಾಲಾಮುಖಿ ಸ್ಫೋಟ ಇನ್ನೂ ಹೊರ ಬರುತ್ತಿದ್ದರೂ, ಅದರ ಪ್ರಮಾಣ ಈಗ ಕಡಿಮೆಯಾಗಿದೆ. ಆದರೆ ಅದರ ಪರಿಣಾಮ ದೂರದವರೆಗೆ ಹರಡಿದೆ.
🌋 Volcanic ash hits India!
Ash clouds from Ethiopia’s Hayli Gubbi volcano – dormant for 12,000 years – travelled 4,000 km to India, Pakistan disrupting international routes.
Multiple flights across eastern & northern India were affected.pic.twitter.com/queVQAUJG4
— Sanatan Prabhat (@SanatanPrabhat) November 25, 2025
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman
‘ವಿಶ್ವಸಂಸ್ಥೆಯ ಠರಾವಿನಂತೆ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಬೇಕಂತೆ!’