ಪ್ರಧಾನ ಮಂತ್ರಿ ಮೋದಿ ಅವರನ್ನು ‘ಹತ್ಯೆ ಮಾಡಿರಿ’ ಎಂದು ಘೋಷಣೆ ಕೂಗಿದರು

ಒಟ್ಟಾವಾ (ಕೆನಡಾ) – ದಕ್ಷಿಣ ಆಫ್ರಿಕಾದಲ್ಲಿ ನಡೆದ ಜಿ-20 ದೇಶಗಳ ಶೃಂಗಸಭೆಯಲ್ಲಿ ಭಾರತ ಮತ್ತು ಕೆನಡಾ ದೇಶಗಳ ರಾಷ್ಟ್ರ ಪ್ರಮುಖರ ಭೇಟಿ ನಡೆಯಿತು. ಉಭಯ ದೇಶಗಳ ನಡುವೆ ವ್ಯಾಪಾರದ ಮೇಲೆ ಐತಿಹಾಸಿಕ ಒಪ್ಪಂದಗಳಾದವು. ಆದಾಗ್ಯೂ, ಕೆನಡಾದಲ್ಲಿನ ಖಲಿಸ್ತಾನಿಗಳು ಜನಾಭಿಪ್ರಾಯ ಸಂಗ್ರಹದ ಮೂಲಕ ಪಂಜಾಬ ಅನ್ನು ಭಾರತದಿಂದ ಬೇರ್ಪಡಿಸಲು ಮುಂದಾಗಿದ್ದಾರೆ. ನವೆಂಬರ್ 23 ರಂದು ಒಟ್ಟಾವಾದಲ್ಲಿ ಈ ಹಿನ್ನೆಲೆಯಲ್ಲಿ ಆಯೋಜಿಸಲಾದ ಒಂದು ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲಾಯಿತು. ಹಾಗೆಯೇ, ಪ್ರಧಾನಿ ಮೋದಿ ಮತ್ತು ಆಡಳಿತಾತ್ಮಕ ಅಧಿಕಾರಿಗಳನ್ನು ‘ಹತ್ಯೆ ಮಾಡಬೇಕು’ ಎಂದು ಘೋಷಣೆ ನೀಡಲಾಯಿತು. ಆದರೆ ಈ ಕಾರ್ಯಕ್ರಮದಲ್ಲಿ ಕೇವಲ ಶೇ. 6 ರಷ್ಟು ಸಿಖ್ ನಾಗರಿಕರು ಮಾತ್ರ ಭಾಗವಹಿಸಿದ್ದಾರೆ ಎಂದು ಸ್ವತಃ ಈ ಖಲಿಸ್ತಾನಿ ಭಯೋತ್ಪಾದಕರು ಒಪ್ಪಿಕೊಂಡಿದ್ದಾರೆ.
1. ‘ಖಲಿಸ್ತಾನ್ ರೆಫರೆಂಡಮ್ (ಜನಮತ ಸಂಗ್ರಹ)’ ಎಂಬ ಹೆಸರಿನಲ್ಲಿ ಆಯೋಜಿಸಲಾದ ಈ ಮತದಾನದಲ್ಲಿ, ಪಂಜಾಬ್ ರಾಜ್ಯವನ್ನು ಭಾರತದಿಂದ ಬೇರ್ಪಡಿಸಿ ಒಂದು ಹೊಸ ಸ್ವತಂತ್ರ ದೇಶವಾದ ಖಲಿಸ್ತಾನ್ ಮಾಡಬೇಕೇ? ಎಂಬ ಪ್ರಶ್ನೆಯನ್ನು ಕೇಳಲಾಗುತ್ತಿತ್ತು.
2. ಜನರು ಬೆಳಗಿನಿಂದ ಸಂಜೆಯವರೆಗೆ ಹಳದಿ ಬಣ್ಣದ ಖಲಿಸ್ತಾನ್ ಧ್ವಜಗಳನ್ನು ಕೈಯಲ್ಲಿ ಹಿಡಿದು ಸುಮಾರು 2 ಕಿಲೋಮೀಟರ್ ಉದ್ದದ ಸರತಿ ಸಾಲಿನಲ್ಲಿ ನಿಂತಿದ್ದರು.
3. ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ‘ಸಿಖ್ ಫಾರ್ ಜಸ್ಟಿಸ್’ ಈ ಭಾರತ-ದ್ವೇಷಿ ಕಾರ್ಯಕ್ರಮವನ್ನು ಆಯೋಜಿಸಿತ್ತು.
4. ಆಯೋಜಕರು, ಒಂಟಾರಿಯೊ, ಆಲ್ಬರ್ಟಾ, ಬ್ರಿಟಿಷ್ ಕೊಲಂಬಿಯಾ ಮತ್ತು ಕ್ಯೂಬೆಕ್ ಪ್ರಾಂತ್ಯಗಳಿಂದ 53 ಸಾವಿರಕ್ಕೂ ಹೆಚ್ಚು ಸಿಖ್ಖರು ಮತದಾನ ಮಾಡಲು ಬಂದಿದ್ದರು ಎಂದು ಹೇಳಿಕೊಂಡಿದ್ದಾರೆ. ಆದರೆ ಹಾಸ್ಯಾಸ್ಪದ ಸಂಗತಿಯೆಂದರೆ, ಈ ಸಂಖ್ಯೆಯು ಕೆನಡಾದ ಒಟ್ಟು ಸಿಖ್ ನಾಗರಿಕರ ಕೇವಲ ಶೇ. 6 ರಷ್ಟು ಮಾತ್ರ ಆಗಿದೆ.
5. ಈ ಸಮಯದಲ್ಲಿ ಭಯೋತ್ಪಾದಕ ಗುರಪತವಂತ್ ಸಿಂಗ್ ಪನ್ನೂ ಅಮೆರಿಕಾದಿಂದಲೇ ಉಪಸ್ಥಿತ ಖಲಿಸ್ತಾನಿಗಳನ್ನು ಉದ್ದೇಶಿಸಿ ಮಾತನಾಡಿದರು.
6. ಭಾರತ ಸರಕಾರವು ಈ ಆಯೋಜನೆಯನ್ನು ಕಾನೂನುಬಾಹಿರ ಎಂದು ಘೋಷಿಸಿದ್ದು, ಇದು ಭಾರತದ ಸಾರ್ವಭೌಮತ್ವದ ಮೇಲಿನ ಆಕ್ರಮಣ ಎಂದು ಹೇಳಿದೆ.
ಸಂಪಾದಕೀಯ ನಿಲುವುಖಲಿಸ್ತಾನವಾದಿಗಳ ಮೂಲಕ ಪಂಜಾಬ ಅನ್ನು ಭಾರತದಿಂದ ಬೇರ್ಪಡಿಸಲು ಪಾಕಿಸ್ತಾನ ಬೆಂಬಲಿತ ಪ್ರಯತ್ನ ಕೆನಡಾದಲ್ಲಿ ನಡೆಯುತ್ತಿದೆ. ಆದರೆ ಅಲ್ಲಿ ಹಣ ನೀಡಿದರೂ ಕೇವಲ ಶೇ. 6 ರಷ್ಟು ಸಿಖ್ಖರು ಮಾತ್ರ ಇದರಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುವುದೇ ಈ ಭಾರತ-ದ್ವೇಷಿ ಅಭಿಯಾನದ ಫಲಿತಾಂಶ. |
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!