ಕ್ರೈಸ್ತ ಸೇನಾಧಿಕಾರಿಯ ವಜಾ ಕುರಿತಾದ ಮೇಲ್ಮನವಿ ಅರ್ಜಿಯ ಮೇಲೆ ಸರ್ವೋಚ್ಚ ನ್ಯಾಯಾಲಯದ ತೀರ್ಪು

ನವದೆಹಲಿ – ಸೇನೆಯು ಒಂದು ಸಂಸ್ಥೆಯಾಗಿ ಧರ್ಮನಿರಪೇಕ್ಷವಾಗಿದೆ ಮತ್ತು ಸೇನೆಯ ಶಿಸ್ತಿನೊಂದಿಗೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ, ಎಂಬ ಕಠಿಣ ಮಾತುಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ದೇವಸ್ಥಾನದ ಗರ್ಭಗುಡಿ ಪ್ರವೇಶಿಸಲು ನಿರಾಕರಿಸಿದ ಕ್ರೈಸ್ತ ಸೇನಾಧಿಕಾರಿ ಸ್ಯಾಮುವೆಲ್ ಕಮಲೇಸನ್ ಅವರನ್ನು ವಜಾ ಮಾಡಿದ ನಿರ್ಧಾರವನ್ನು ಎತ್ತಿಹಿಡಿದಿದೆ.(ಕಾಯಂಗೊಳಿಸಿದೆ?) ಈ ಹಿಂದೆ ದೆಹಲಿ ಉಚ್ಚ ನ್ಯಾಯಾಲಯವು ಈ ಅಧಿಕಾರಿಯ ಅರ್ಜಿಯನ್ನು ವಜಾ ಮಾಡಿತ್ತು. ಈ ಅಧಿಕಾರಿಯು ಸರ್ವೋಚ್ಚ ನ್ಯಾಯಾಲಯದಲ್ಲಿ ವಾದ ಮಂಡಿಸುವಾಗ, ದೇವಸ್ಥಾನ ಪ್ರವೇಶಿಸಲು ಒತ್ತಾಯಿಸುವುದರಿಂದ ಆತನ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಆಗಿದೆ, ಎಂದು ಹೇಳಿದ್ದರು. ಇದಕ್ಕೆ ನ್ಯಾಯಾಲಯವು, ಸದರಿ ಅಧಿಕಾರಿಯ ನಡವಳಿಕೆಯು ಕಾನೂನುಬದ್ಧ ಆದೇಶದ ಉಲ್ಲಂಘನೆಯಾಗಿದೆ. ಈ ಕೃತಿಯಿಂದ ಆ ಅಧಿಕಾರಿ ಯಾವ ಸಂದೇಶವನ್ನು ನೀಡುತ್ತಿದ್ದಾರೆ? ಈ ಉಲ್ಲಂಘನೆಗಾಗಿ ಅವರನ್ನು ವಜಾ ಮಾಡಲೇಬೇಕು. ಸೇನಾಧಿಕಾರಿಯು ಮಾಡಿರುವ ಇದು ಅತ್ಯಂತ ಗಂಭೀರ ಸ್ವರೂಪದ ಶಿಸ್ತು ಉಲ್ಲಂಘನೆಯ ಕೃತಿಯಾಗಿದೆ, ಎಂದು ಹೇಳಿದೆ.
ಅಧಿಕಾರಿಯ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ ಶಂಕರನಾರಾಯಣನ್ ಅವರು ವಾದಿಸುವಾಗ, ಹೆಚ್ಚಿನ ರೆಜಿಮೆಂಟಲ್ (ಸೈನಿಕರ ದೊಡ್ಡ ತುಕುಡಿ) ಮುಖ್ಯ ಕಛೇರಿಗಳಲ್ಲಿ ಸರ್ವಧರ್ಮ ಸ್ಥಳಗಳು ಇರುತ್ತವೆ; ಆದರೆ ಪಂಜಾಬಿನ ಮಾಮೂನ್ ನಲ್ಲಿ ಕೇವಲ ಒಂದು ದೇವಸ್ಥಾನ ಮತ್ತು ಒಂದು ಗುರುದ್ವಾರ ಮಾತ್ರ ಇದೆ. ಅಧಿಕಾರಿಯು ದೇವಸ್ಥಾನ ಪ್ರವೇಶಿಸಲು ನಿರಾಕರಿಸಿದರು; ಏಕೆಂದರೆ ಗರ್ಭಗುಡಿ ಪ್ರವೇಶಿಸುವುದು ಅವರ ಶ್ರದ್ಧೆಗೆ ವಿರುದ್ಧವಾಗಿದೆ. ಅವರು ಹೊರಗಿನಿಂದ ಹೂವು ಅರ್ಪಿಸುತ್ತೇನೆ, ಆದರೆ ಒಳಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ವಿಷಯದಲ್ಲಿ ಬೇರೆ ಯಾರಿಗೂ ಯಾವುದೇ ತೊಂದರೆ ಇರಲಿಲ್ಲ; ಆದರೆ ಒಬ್ಬ ಹಿರಿಯ ಅಧಿಕಾರಿಯು ಅವರ ವಿರುದ್ಧ ಶಿಸ್ತು ಕ್ರಮವನ್ನು ಪ್ರಾರಂಭಿಸಿದರು, ಎಂದು ಹೇಳಿದರು.
ಯಾವ ಪ್ರಕರಣ?
ಲೆಫ್ಟಿನೆಂಟ್ ಸ್ಯಾಮುವೆಲ್ ಕಮಲೇಸನ್ ಅವರನ್ನು ಭಾರತೀಯ ಸೇನೆಯಲ್ಲಿ ವರ್ಷ 2017 ರಲ್ಲಿ 3 ನೇ ಕ್ಯಾವಲ್ರಿ ರೆಜಿಮೆಂಟ್ನಲ್ಲಿ ನಿಯೋಜಿಸಲಾಯಿತು. ಅವರದ್ದು ಪ್ರಮುಖವಾಗಿ ಸಿಖ್ ಸೈನಿಕರ ತುಕಡಿಯಾಗಿತ್ತು.
ಅವರ ರೆಜಿಮೆಂಟ್ನಲ್ಲಿ ಪ್ರತೀ ವಾರ ಧಾರ್ಮಿಕ ಸಂಚಲನ (ಪಥಸಂಚಲನ) ನಡೆಯುತ್ತಿತ್ತು. ಆ ಸಂಚಲನದಲ್ಲಿ ಸೈನಿಕರು ದೇವಸ್ಥಾನ ಅಥವಾ ಗುರುದ್ವಾರಕ್ಕೆ ಬಂದು ಪ್ರಾರ್ಥನೆ ಮಾಡಬೇಕಿತ್ತು. ಕಮಲೇಸನ್ ಅವರು ತಮ್ಮ ಧಾರ್ಮಿಕ ಶ್ರದ್ಧೆಯಿಂದಾಗಿ ದೇವಸ್ಥಾನದೊಳಗಿನ ಪವಿತ್ರ ಭಾಗ (ಗರ್ಭಗುಡಿ) ಪ್ರವೇಶಿಸಲು ನಿರಾಕರಿಸಿದರು. ಅವರ ಹೇಳಿಕೆಯ ಪ್ರಕಾರ, ಅವರು ಪೂಜೆ, ಆರತಿ, ಹವನ ಇತ್ಯಾದಿ ದೇವಸ್ಥಾನದ ಮೂಲಭೂತ ಧಾರ್ಮಿಕ ಕ್ರಿಯೆಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ; ಏಕೆಂದರೆ ಅವರು ಕ್ರೈಸ್ತ ಧರ್ಮದ ಮೇಲೆ ವಿಶ್ವಾಸ ಇಟ್ಟಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!