
ಸನಾತನ ಆಶ್ರಮದ ಶ್ರೀಮತಿ ಸುಲಭಾ ಮಾಲಖರೆ ಅಜ್ಜಿ ೧೩೬ ನೇ ವ್ಯಷ್ಟಿ ಸಂತಪದವಿಯಲ್ಲಿ ವಿರಾಜಮಾನರಾದರು !
ದೇವದ (ಪನವೇಲ್) – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಮೇಲೆ ಅಚಲ ಶ್ರದ್ಧೆಯಿರುವ ಸನಾತನ ಆಶ್ರಮದ ಶ್ರೀಮತಿ ಸುಲಭಾ ಮಾಲಖರೆ ಅಜ್ಜಿ (ವಯಸ್ಸು ೮೪ ವರ್ಷ) ಶೇ. ೭೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪುವ ಮೂಲಕ ಸನಾತನ ಸಂಸ್ಥೆಯ ೧೩೬ ನೇ ವ್ಯಷ್ಟಿ ಸಂತಪದವಿಯಲ್ಲಿ ವಿರಾಜಮಾನರಾಗಿದ್ದಾರೆ. ಈ ಆನಂದದಾಯಕ ಸುದ್ದಿಯನ್ನು ಸನಾತನದ ಪೂ. (ಸೌ.) ಅಶ್ವಿನಿ ಪವಾರ ಅವರು ನವೆಂಬರ್ ೨೩ ರಂದು ಒಂದು ಅನೌಪಚಾರಿಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಾಧಕರಿಗೆ ತಿಳಿಸಿದರು. ಪೂ. (ಸೌ.) ಅಶ್ವಿನಿ ಪವಾರ ಅವರು ಪೂ. (ಶ್ರೀಮತಿ) ಸುಲಭಾ ಮಾಲಖರೆ ಅಜ್ಜಿ ಅವರಿಗೆ ಹೂವಿನ ಹಾರ ಹಾಕಿ, ಶಾಲು ಹೊದಿಸಿ, ಶ್ರೀಫಲ ಮತ್ತು ಉಡುಗೊರೆ ನೀಡಿ ಸನ್ಮಾನಿಸಿದರು. ಈ ವೇಳೆ ಉಪಸ್ಥಿತರಿದ್ದ ಆಶ್ರಮದ ಸಾಧಕರು ಪೂ. ಅಜ್ಜಿಯವರ ಗುಣವೈಶಿಷ್ಟ್ಯಗಳನ್ನು ವರ್ಣಿಸಿದರು. ಪೂ. ಅಜ್ಜಿಯವರು ತಮ್ಮ ಜೀವನದ ಹಿಂದಿನ ಪ್ರಸಂಗಗಳನ್ನು ಹೇಳಿ, ‘ಆ ಪ್ರಸಂಗಗಳಲ್ಲಿ ತಾವು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಕೃಪೆಯನ್ನು ಹೇಗೆ ಅನುಭವಿಸಿದೆ’, ಎಂಬುದನ್ನು ಎಲ್ಲರಿಗೂ ತಿಳಿಸಿದರು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು
ಆಧ್ಯಾತ್ಮಿಕ ಉಪಾಯಗಳ ವಿಷಯದಲ್ಲಿ ಇದನ್ನು ನೆನಪಿನಲ್ಲಿಡಿ !