ಕೇರಳ: ಐತಿಹಾಸಿಕ ಶಿವಮಂದಿರಕ್ಕೆ SDPI ಬೆದರಿಕೆ; ಮಂದಿರಕ್ಕೆ ಬೀಗ !

ತಿರುವನಂತಪುರಂ (ಕೇರಳ) – ನಿಷೇಧಿಸಲ್ಪಟ್ಟಿರುವ ಜಿಹಾದಿ ಸಂಘಟನೆ ‘ಪಾಪುಲರ್ ಫ್ರಂಟ್ ಆಫ್ ಇಂಡಿಯಾ’ದ ರಾಜಕೀಯ ಪಕ್ಷವಾಗಿರುವ ‘ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ’ ಅಂದರೆ ಎಸ್ಡಿಪಿಐನ ಬೆದರಿಕೆಗಳ ನಂತರ, ನಗರಸಭೆ ಅಧಿಕಾರಿಗಳು ಪ್ರಾಚೀನ ಶಿವಮಂದಿರದ ಮುಖ್ಯ ಪ್ರವೇಶದ್ವಾರವನ್ನು ಬಂದ್ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ರಾಮನಾಥನ್ ನಾಯರ್ ಅವರ ಪೂರ್ವಜರು ಸ್ಥಾಪಿಸಿದ ಅರಲುಮ್ಮೂಡು ಶಿವಪುರಂ ಶ್ರೀ ಮಹಾದೇವ ಮಂದಿರದಲ್ಲಿ ನಡೆಯುತ್ತಿದ್ದ ದುರಸ್ತಿ ಕಾರ್ಯವು ನಿಂತುಹೋಗಿದ್ದು, ದೈನಂದಿನ ಪೂಜೆಯು ಸ್ಥಗಿತಗೊಂಡಿದೆ. ಇದರಿಂದಾಗಿ ಹಿಂದೂ ಸಂಘಟನೆಗಳು ತೀವ್ರ ಹೋರಾಟವನ್ನು ಪ್ರಾರಂಭಿಸಿವೆ.

ಸಾಂಪ್ರದಾಯಿಕ ವಿಧಿ-ವಿಧಾನಗಳ ನಂತರ ಪ್ರಾರಂಭವಾದ ಕೆಲಸದಲ್ಲಿ ಹಸ್ತಕ್ಷೇಪ

ಮಂದಿರದಲ್ಲಿ ಸಾಂಪ್ರದಾಯಿಕ ವಿಧಿ-ವಿಧಾನಗಳ ನಂತರ ದುರಸ್ತಿ ಕಾರ್ಯವನ್ನು ಪ್ರಾರಂಭಿಸಲಾಗಿತ್ತು. ಅದೇ ಸಮಯದಲ್ಲಿ, ಎಸ್ಡಿಪಿಐಗೆ ಸಂಬಂಧಿಸಿದ ವ್ಯಕ್ತಿಗಳು ಹಸ್ತಕ್ಷೇಪ ಮಾಡಿ, ನಗರಸಭೆಯ ಕಾರ್ಯದರ್ಶಿಗೆ ಬೆದರಿಕೆ ಹಾಕಿದರು. ದುರಸ್ತಿ ಕಾರ್ಯವು ಕಾನೂನುಬಾಹಿರವಾಗಿದೆ ಎಂದು ಆರೋಪಿಸಿ ಕೆಲಸವನ್ನು ನಿಲ್ಲಿಸುವಂತೆ ಆಗ್ರಹಿಸಿದರು. ವಿಶೇಷ ಶಾಖೆಯ ಒಬ್ಬ ಪೊಲೀಸ್ ಅಧಿಕಾರಿಯು ಮಂದಿರ ಸಮಿತಿಗೆ ದೂರವಾಣಿ ಕರೆ ಮಾಡಿ ಕೆಲಸವನ್ನು ನಿಲ್ಲಿಸುವಂತೆ ಬೆದರಿಕೆ ಹಾಕಿದರು. ಒತ್ತಡ ಹೆಚ್ಚಾದ ಕಾರಣ ಅಂತಿಮವಾಗಿ ನಗರಸಭೆಯ ಕಾರ್ಯದರ್ಶಿಯು ಮಂದಿರದ ಮುಖ್ಯದ್ವಾರಕ್ಕೆ ಬೀಗ ಜಡಿದು, ‘ಇದು ನಗರಸಭೆಯ ಭೂಮಿಯಾಗಿದೆ, ಅನುಮತಿಯಿಲ್ಲದೆ ಪ್ರವೇಶ ನಿಷಿದ್ಧ’ ಎಂಬ ಫಲಕವನ್ನು ಹಾಕಿದರು.

ಹೊರಗಿನ ಕಾರ್ಯಕರ್ತರಿಂದ ಬೆದರಿಕೆಗಳು

ಹಿಂದೂ ಐಕ್ಯವೇದಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ. ಪ್ರಭಾಕರನ್ ಅವರ ಪ್ರಕಾರ, ‘ನಗರಸಭೆಯ ಕಾರ್ಯದರ್ಶಿಯೇ ಸ್ವತಃ, ಎಸ್ಡಿಪಿಐನ 4 ಕಾರ್ಯಕರ್ತರು ತಮಗೆ ಬೆದರಿಕೆ ಹಾಕಿದ್ದರು ಎಂದು ಒಪ್ಪಿಕೊಂಡಿದ್ದಾರೆ. ಅವರು ಸ್ಥಳೀಯರಾಗಿರದೆ, ಹೊರಗಿನವರಾಗಿದ್ದಾರೆ. ಇದೇ ಗುಂಪು ಈ ಹಿಂದೆ ಗೋಪಾನ ಸ್ವಾಮಿ ಸಮಾಧಿಯನ್ನು ಕೂಡ ಗುರಿಯಾಗಿಸಿಕೊಂಡಿತ್ತು. ಹಾಗೆಯೇ, ಪೊಲೀಸ್ ಅಧಿಕಾರಿಗಳಿಗೂ ಬೆದರಿಕೆ ಹಾಕಲಾಗಿದ್ದು, ವಿಶೇಷ ಶಾಖೆಯ ಅಧಿಕಾರಿಯೊಬ್ಬರು ದುರಸ್ತಿ ನಿಲ್ಲಿಸುವಂತೆ ಆದೇಶ ನೀಡಲು ಮಂದಿರ ಸಮಿತಿಗೆ ಕರೆ ಮಾಡಿರುವುದು ಬಹಿರಂಗವಾಗಿದೆ.’

ಅನಧಿಕೃತ ಕಟ್ಟಡಗಳ ನಿರ್ಲಕ್ಷ್ಯ, ಕೇವಲ ಮಂದಿರ ಮಾತ್ರ ಗುರಿ

ಸ್ಥಳೀಯ ಭಕ್ತರು ನೀಡಿದ ಹೇಳಿಕೆಯ ಪ್ರಕಾರ, ಈ ಪ್ರದೇಶದ ಹಿಂದೂಗಳು ಮತ್ತು ಮುಸಲ್ಮಾನರು ಶಾಂತಿಯಿಂದ ವಾಸಿಸುತ್ತಿದ್ದಾರೆ. ಮುಸಲ್ಮಾನ ನಾಗರಿಕರು ಮಂದಿರದ ‘ಕಂಜಿ ವೇಝುತು’ ನಂತಹ ಉತ್ಸವಗಳಲ್ಲಿಯೂ ಭಾಗವಹಿಸುತ್ತಿದ್ದರು. ಆದ್ದರಿಂದ, ಸೃಷ್ಟಿಯಾಗಿರುವ ಈ ಉದ್ವಿಗ್ನತೆಯು ಸ್ಥಳೀಯರಿಗೆ ಆಘಾತಕಾರಿಯಾಗಿದೆ. ‘ಇದು ಅಫ್ಘಾನಿಸ್ತಾನವೇ ಅಥವಾ ಪಾಕಿಸ್ತಾನವೇ?’ ಎಂದು ಅವರು ಪ್ರಶ್ನಿಸಿದ್ದಾರೆ. ನಗರಸಭೆ ಅನೇಕ ಅನಧಿಕೃತ ಕಟ್ಟಡ ನಿರ್ಮಾಣಗಳನ್ನು ಮುಟ್ಟುತ್ತಲೂ ಇಲ್ಲ; ಆದರೆ ಕೇವಲ ಈ ಪ್ರಾಚೀನ ಮಂದಿರವನ್ನು ಮಾತ್ರ ಗುರಿಯಾಗಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ರಾಜಕೀಯ ಬೆಂಬಲದ ಸಂಶಯ ಮತ್ತು ನಿರಂತರ ಹೋರಾಟ

ಹಿಂದೂ ಸಂಘಟನೆಗಳು ಈ ಎಲ್ಲಾ ಕ್ರಮಗಳ ಹಿಂದೆ ಆಡಳಿತಾರೂಢ ಪಕ್ಷಗಳ ಬೆಂಬಲವಿದೆ ಎಂದು ಸಂಶಯ ವ್ಯಕ್ತಪಡಿಸುತ್ತಿವೆ. ಅಲ್ಲದೇ ಅತಿಕ್ರಮಣ ನಿರ್ಮಾಣಗಳ ಮೇಲಿನ ಕ್ರಮಗಳನ್ನು ಕೂಡ ಆಯ್ಕೆ ಪದ್ಧತಿಯಲ್ಲಿ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಮಂದಿರದ ಮೇಲೆ ಕ್ರಮ ಜರುಗುತ್ತಿರುವಾಗಲೇ, ಠಾಕ್ಕಾಪಳ್ಳಿ ಮುಂತಾದ ಪ್ರದೇಶಗಳಲ್ಲಿನ ಅನಧಿಕೃತ ವಸತಿಗಳು ಹಾಗೆಯೇ ಉಳಿದಿವೆ. ಈ ಬೆಳವಣಿಗೆಗಳನ್ನು ವಿರೋಧಿಸಿ ಹಿಂದೂ ಐಕ್ಯವೇದಿಯೊಂದಿಗೆ ವಿವಿಧ ಹಿಂದೂ ಸಂಘಟನೆಗಳು ಮಂದಿರದ ಆವರಣದಲ್ಲಿ ನಿರಂತರ ಹೋರಾಟವನ್ನು ಆರಂಭಿಸಿವೆ. ನಾಮಜಪ ಮತ್ತು ನಿರಂತರ ಪ್ರದರ್ಶನಗಳೊಂದಿಗೆ ಮಂದಿರವನ್ನು ತೆರೆಯುವವರೆಗೂ ಹೋರಾಟವನ್ನು ಮುಂದುವರಿಸುವುದಾಗಿ ಘೋಷಿಸಿದ್ದಾರೆ. ತಕ್ಷಣವೇ ಬೀಗ ತೆಗೆಯದಿದ್ದರೆ, ಎಲ್ಲಾ ಪರಿಣಾಮಗಳಿಗೆ ಸರಕಾರವೇ ಜವಾಬ್ದಾರಿಯಾಗಿರುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.

ಸಂಪಾದಕೀಯ ನಿಲುವು

  • ಕೇರಳ ಭಾರತದಲ್ಲಿದೆಯೇ ಅಥವಾ ಪಾಕಿಸ್ತಾನದಲ್ಲಿದೆಯೇ ? ಇಂತಹ ಇಸ್ಲಾಮಿ ವಿಚಾರಧಾರೆಯ ರಾಜಕೀಯ ಪಕ್ಷದಿಂದ ಹಿಂದೂಗಳ ಮಂದಿರಕ್ಕೆ ಬೆದರಿಕೆ ಹಾಕುವುದು ಮತ್ತು ಆ ಮಂದಿರವನ್ನು ಮುಚ್ಚುವುದು ಹಿಂದೂಗಳಿಗೇ ನಾಚಿಕೆಗೇಡು.
  • ಎಸ್ಡಿಪಿಐ ಮೇಲೆ ನಿಷೇಧ ಹೇರಲು ಹಿಂದೂಗಳು ಆಗ್ರಹಿಸುವುದು ಅವಶ್ಯಕವಾಗಿದೆ (ಎಸ್ಡಿಪಿಐ – ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ)