ಪಾಕಿಸ್ಥಾನದ ಅರೆಸೇನಾಪಡೆಗಳ ಪ್ರಧಾನ ಕಚೇರಿ ಮೇಲೆ ಭಯೋತ್ಪಾದಕ ದಾಳಿ: 3 ಸಾವು Pakistan Bomb Blast

ಪೇಶಾವರ (ಪಾಕಿಸ್ತಾನ) – ಇಲ್ಲಿನ ಪಾಕಿಸ್ತಾನದ ಅರೆಸೇನಾಪಡೆಗಳ ಪ್ರಧಾನ ಕಚೇರಿ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಪ್ರಧಾನ ಕಚೇರಿ ಆವರಣದಲ್ಲಿ ಇಬ್ಬರು ಆತ್ಮಾಹುತಿ ಭಯೋತ್ಪಾದಕರು ತಮ್ಮನ್ನು ತಾವು ಸ್ಫೋಟಿಸಿಕೊಂಡಿದ್ದಾರೆ. ಈ ದಾಳಿಯಲ್ಲಿ 3 ಜನರು ಸಾವನ್ನಪ್ಪಿದ್ದಾರೆ. ಪ್ರಧಾನ ಕಚೇರಿಯೊಳಗೆ ಇನ್ನೂ ಕೆಲವು ಭಯೋತ್ಪಾದಕರು ನುಸುಳಿರುವ ಸಾಧ್ಯತೆ ಇರುವುದರಿಂದ, ಆ ಇಡೀ ಪ್ರದೇಶವನ್ನು ಪೊಲೀಸರು ಮತ್ತು ಸೇನೆಯು ಸುತ್ತುವರಿದಿದೆ. ಈ ದಾಳಿಯ ಹೊಣೆಯನ್ನು ಇದುವರೆಗೆ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.