ಕೆನಡಾದಲ್ಲಿ ಭಾರತೀಯ ಮೂಲದ ಪರಾರಿಯಾಗಿದ್ದ ಅಪರಾಧಿಯ ಬಂಧನ – Criminal Arrested in Canada

ನವದೆಹಲಿ – ಕೆನಡಾದ ಟೊರೊಂಟೊ ನಗರದ ಪೊಲೀಸರು ಭಾರತೀಯ ಮೂಲದ ಪರಾರಿಯಾಗಿದ್ದ ಅಪರಾಧಿ ನಿಕೋಲಸ್ ಸಿಂಗ್ ಎಂಬಾತನನ್ನು ಬಂಧಿಸಿದ್ದಾರೆ. ಆತ ಸುಮಾರು ಒಂದೂವರೆ ವರ್ಷಗಳಿಂದ ತಲೆಮರೆಸಿಕೊಂಡಿದ್ದನು. ಪೆರೋಲ್ ನಿಯಮಗಳನ್ನು (ಉತ್ತಮ ನಡತೆಗಾಗಿ ಕೈದಿಯನ್ನು ಕೆಲವು ದಿನಗಳವರೆಗೆ ಷರತ್ತುಗಳ ಮೇಲೆ ಹೊರಗೆ ಬಿಡುವುದು) ಉಲ್ಲಂಘಿಸಿದ ಕಾರಣ ನಿಕೋಲಸ್ ವಿರುದ್ಧ ಬಂಧನದ ವಾರಂಟ್ ಜಾರಿ ಮಾಡಲಾಗಿತ್ತು. 2023 ರಲ್ಲಿ ಕೆನಡಾ ಪೊಲೀಸರು ನಿಕೋಲಸ್‌ನನ್ನು ಕಳ್ಳತನ ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡಿರುವ ಪ್ರಕರಣಗಳಲ್ಲಿ ಬಂಧಿಸಿದ್ದರು. ನಂತರ ನ್ಯಾಯಾಲಯವು ಆತನಿಗೆ 5 ವರ್ಷ, 5 ತಿಂಗಳು ಮತ್ತು 10 ದಿನಗಳ ಜೈಲು ಶಿಕ್ಷೆ ವಿಧಿಸಿತ್ತು. ಕಳೆದ ವರ್ಷ ಟೊರೊಂಟೊದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವಾಗಲೇ ನಿಕೋಲಸ್ ಪರಾರಿಯಾಗಿದ್ದನು. ಬಂಧನದ ಸಮಯದಲ್ಲಿ ಆತನ ಬಳಿ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಲಾಗಿದೆ.