ತುರ್ತು ಚಿಕಿತ್ಸಾ ವಿಭಾಗಕ್ಕೆ ಶಾಸಕರು ಬಂದಾಗ ಎದ್ದು ನಿಲ್ಲದ ವೈದ್ಯರ ವಿರುದ್ಧ ಕ್ರಮ ಕೈಗೊಂಡ ಪ್ರಕರಣ

ಚಂಡೀಗಢ – ಕೊರೋನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ, ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಶಾಸಕರೊಬ್ಬರು ಬಂದ ನಂತರ ಒಬ್ಬ ವೈದ್ಯರು ಎದ್ದು ನಿಂತಿಲ್ಲ ಎಂಬ ಕಾರಣಕ್ಕಾಗಿ ಹರಿಯಾಣ ಸರಕಾರವು ಆ ವೈದ್ಯರಿಗೆ ‘ಕಾರಣ ಕೇಳಿ ನೋಟೀಸ್’ ನೀಡಿತ್ತು. ಈ ಘಟನೆಯ ಬಗ್ಗೆ ಪಂಜಾಬ್ ಮತ್ತು ಹರಿಯಾಣ ಉಚ್ಚ ನ್ಯಾಯಾಲಯವು ಹರಿಯಾಣ ರಾಜ್ಯ ಸರಕಾರಕ್ಕೆ ೫೦ಸಾವಿರ ರೂಪಾಯಿ ದಂಡ ವಿಧಿಸಿದೆ. ಅಲ್ಲದೆ ಆ ವೈದ್ಯರ ತಡೆಹಿಡಿಯಲಾಗಿದ್ದ ‘ನಿರಾಕ್ಷೇಪಣಾ ಪ್ರಮಾಣಪತ್ರ’ವನ್ನು ತಕ್ಷಣವೇ ನೀಡುವಂತೆ ಸರಕಾರಕ್ಕೆ ನಿರ್ದೇಶನ ನೀಡಿದೆ. ಈ ಪ್ರಮಾಣಪತ್ರವನ್ನು ತಡೆಹಿಡಿದ ಕಾರಣ ವೈದ್ಯರಿಗೆ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗುತ್ತಿರಲಿಲ್ಲ.
ಉಚ್ಚ ನ್ಯಾಯಾಲಯವು ಆದೇಶ ನೀಡುವಾಗ, “ಶಾಸಕರು ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಬಂದಾಗ ವೈದ್ಯರು ಎದ್ದು ನಿಲ್ಲಬೇಕು ಎಂದು ನಿರೀಕ್ಷಿಸುವುದು ಮತ್ತು ವೈದ್ಯರು ಎದ್ದು ನಿಲ್ಲಲಿಲ್ಲ ಎಂಬ ಕಾರಣಕ್ಕೆ ಅವರ ವಿರುದ್ಧ ಶಿಸ್ತು ಕ್ರಮವನ್ನು ಪ್ರಸ್ತಾಪಿಸುವುದು, ಇದು ಅತ್ಯಂತ ಅಸಮಾಧಾನಕರವಾಗಿದೆ. ಆ ವೈದ್ಯರು ಶಾಸಕರನ್ನು ಗುರುತಿಸಲಿಲ್ಲ ಮತ್ತು ಅವಮಾನಿಸುವಂತಹ ಯಾವುದೇ ಕೆಲಸ ಮಾಡಿಲ್ಲ ಎಂಬ ಅರ್ಜಿದಾರರ ಸ್ಪಷ್ಟೀಕರಣವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಇಂತಹ ಆರೋಪಗಳ ಮೇಲೆ ರಾಜ್ಯವು ಅರ್ಜಿದಾರರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿರುವುದು ಸಂವೇದನಾಶೂನ್ಯವಾಗಿದೆ. ಅವರ ವಿರುದ್ಧ ‘ಕಾರಣ ಕೇಳಿ ನೋಟೀಸ್’ ಬಾಕಿ ಇದೆ ಎಂಬ ಕಾರಣಕ್ಕೆ ‘ನಿರಾಕ್ಷೇಪಣಾ ಪ್ರಮಾಣಪತ್ರ’ವನ್ನು ತಡೆಹಿಡಿದು, ಉನ್ನತ ವೈದ್ಯಕೀಯ ಶಿಕ್ಷಣ ಪಡೆಯುವ ಅವರ ಹಕ್ಕುಗಳನ್ನು ಕಸಿದುಕೊಳ್ಳುವುದು, ಅಷ್ಟೇ ಮನಸೋಚ್ಛೆಯಾಗಿದೆ ಎಂದು ಹೇಳಿದೆ.
ಸಂಪಾದಕೀಯ ನಿಲುವುಸಂಬಂಧಪಟ್ಟವರಿಗೆ ಕೇವಲ ದಂಡ ವಿಧಿಸಿ ಬಿಡಬಾರದು, ಬದಲಿಗೆ ಅವರಿಗೆ ಕಠಿಣ ಶಿಕ್ಷೆಯನ್ನೂ ವಿಧಿಸಬೇಕು, ಆಗ ಮಾತ್ರ ಭಯ ಹುಟ್ಟುತ್ತದೆ! |
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ