ಕಾಲೇಜಿನಲ್ಲಿ ೯೦% ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದ್ದಕ್ಕೆ ವಿಹಿಂಪದಿಂದ ಗಂಭೀರ ಆರೋಪ

ಜಮ್ಮು – ‘ಶ್ರೀ ಮಾತಾ ವೈಷ್ಣೋದೇವಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಕ್ಸಲೆನ್ಸ್’ ಕಾಲೇಜಿನಲ್ಲಿ ಪ್ರವೇಶ ಪ್ರಕ್ರಿಯೆಯ ಮೊದಲ ಸುತ್ತಿನಲ್ಲಿ ಬರೋಬ್ಬರಿ ೯೦% ಮುಸ್ಲಿಮ್ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ. ಈ ಕುರಿತು ಎಲ್ಲೆಡೆ ಆಕ್ರೋಶದ ಅಲೆ ಹರಡಿದ್ದು, ಹಿಂದೂಪರ ಪಕ್ಷಗಳು ಮತ್ತು ಸಂಘಟನೆಗಳು ಪ್ರವೇಶ ಪಡೆದ ವಿದ್ಯಾರ್ಥಿಗಳ ಮೊದಲ ಪಟ್ಟಿಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿವೆ. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳವು ಜಮ್ಮುವಿನ ಕಟ್ರಾ ಕಾಲೇಜಿನ ಹೊರಗೆ ಪ್ರತಿಭಟನೆ ನಡೆಸಿದವು. ಪ್ರತಿಭಟನೆ ವೇಳೆ ‘ವೈಷ್ಣೋದೇವಿ ಶ್ರೈನ್ ಬೋರ್ಡ್’ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಪ್ರತಿಕೃತಿಯನ್ನು ಸುಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವಿಹಿಂಪದ ಜಮ್ಮು-ಕಾಶ್ಮೀರದ ಅಧ್ಯಕ್ಷ ರಾಜೇಶ್ ಗುಪ್ತಾ, “ಮೊದಲ ಪಟ್ಟಿಯನ್ನು ರದ್ದುಗೊಳಿಸಿ, ಮುಂದಿನ ಪಟ್ಟಿಗಾಗಿ ಆಯ್ಕೆ ಮಾಡಲಾದ ಬಹುತೇಕ ವಿದ್ಯಾರ್ಥಿಗಳು ಹಿಂದೂಗಳಾಗಿರಬೇಕು” ಎಂದು ಆಗ್ರಹಿಸಿದರು. “೯೦% ವಿದ್ಯಾರ್ಥಿಗಳ ಪ್ರವೇಶ ಪಟ್ಟಿ ತಯಾರಿಸಿದ್ದು ಕಾಲೇಜನ್ನು ಇಸ್ಲಾಮೀಕರಣಗೊಳಿಸುವ ಒಂದು ಪಿತೂರಿಯಾಗಿದೆ” ಎಂದು ಗುಪ್ತಾ ಅವರು ಗಂಭೀರವಾಗಿ ಆರೋಪಿಸಿದರು.
ಬಜರಂಗ ದಳದ ಜಮ್ಮು-ಕಾಶ್ಮೀರದ ಅಧ್ಯಕ್ಷ ರಾಕೇಶ್ ಬಜರಂಗಿ ಅವರು ಮಾತನಾಡಿ, ವಿದ್ಯಾರ್ಥಿಗಳ ಪಟ್ಟಿ ಸಿದ್ಧಪಡಿಸುವಾಗ ತಾರತಮ್ಯ ಮಾಡಲಾಗಿದೆ. ಕಾಶ್ಮೀರದ ವಿದ್ಯಾರ್ಥಿಗಳು ಬೇರೆ ಯಾವುದೇ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆಯುವುದಕ್ಕೆ ನಮ್ಮ ಯಾವುದೇ ಆಕ್ಷೇಪವಿಲ್ಲ; ಆದರೆ ವೈಷ್ಣೋದೇವಿ ಕಾಲೇಜಿನಲ್ಲಿ ಹಿಂದೂ ವಿದ್ಯಾರ್ಥಿಗಳಿಗಾಗಿ ಸ್ಥಾನಗಳನ್ನು ಕಾಯ್ದಿರಿಸಬೇಕು; ಯಾಕೆಂದರೆ ಈ ಕಾಲೇಜನ್ನು ‘ವೈಷ್ಣೋದೇವಿ ಶ್ರೈನ್ ಬೋರ್ಡ್’ನ ದೇಣಿಗೆಗಳಿಂದ ಕಟ್ಟಲಾಗಿದೆ ಎಂದು ಆಗ್ರಹಿಸಿದರು.

ಭಾಜಪದ ಸ್ಪಷ್ಟ ನಿಲುವು!ಭಾಜಪದ ಊಧಂಪುರದ ಶಾಸಕ ಆರ್.ಎಸ್.ಪಠಾನಿಯಾ ಈ ಕುರಿತು ಮಾತನಾಡಿ, “ವೈಷ್ಣೋದೇವಿ ದೇವಸ್ಥಾನಕ್ಕೆ ನೀಡಿದ ದೇಣಿಗೆಗಳಿಂದಲೇ ಈ ವೈದ್ಯಕೀಯ ಕಾಲೇಜು ನಿರ್ಮಾಣವಾಗಿದೆ. ಹಾಗಾಗಿ ಅಲ್ಲಿ ಮುಸ್ಲಿಮರ ಪ್ರಾಬಲ್ಯ ಇರಬಾರದು, ಹಾಗೆಯೇ ಹಿಂದೂಗಳಿಗಾಗಿ ಕೆಲವು ಸೀಟುಗಳನ್ನು ಕಾಯ್ದಿರಿಸಬೇಕು. ಅವರು ಮುಂದೆ ಮಾತನಾಡಿ, ಸರಕಾರಿ ಅನುದಾನ ಪಡೆಯುವ ಅಲ್ಪಸಂಖ್ಯಾತ ಕಾಲೇಜುಗಳು ತಾವು ಪ್ರತಿನಿಧಿಸುವ ಸಮುದಾಯಕ್ಕಾಗಿ ಸೀಟುಗಳನ್ನು ಕಾಯ್ದಿರಿಸುತ್ತವೆ. ಇಲ್ಲಿ, ಸಂಸ್ಥೆಯು ಸರಕಾರದಿಂದ ಒಂದು ಪೈಸೆಯನ್ನೂ ಪಡೆಯುತ್ತಿಲ್ಲ ಮತ್ತು ವೈಷ್ಣೋದೇವಿ ಯಾತ್ರಾರ್ಥಿಗಳ ದೇಣಿಗೆಯಿಂದಲೇ ನಡೆಯುತ್ತದೆ. ಹೀಗಾಗಿ ಇದು ಯಾತ್ರಾರ್ಥಿಗಳ ಶ್ರದ್ಧೆಗೆ ಸಂಬಂಧಿಸಿದ ವಿಷಯವಾದ್ದರಿಂದ ಹಿಂದೂ ವಿದ್ಯಾರ್ಥಿಗಳಿಗೆ ಸೀಟುಗಳನ್ನು ಕಾಯ್ದಿರಿಸಬೇಕೆಂದು ಅವರು ಒತ್ತಿ ಹೇಳಿದರು. |
ಆಡಳಿತಾತ್ಮಕ ಅಧಿಕಾರಿಗಳ ವಿಚಿತ್ರ ತರ್ಕ !
ಹೆಸರು ಹೇಳಲಿಚ್ಛಿಸದ ಕೆಲವು ಆಡಳಿತಾಧಿಕಾರಿಗಳು, ಪ್ರವೇಶ ಪ್ರಕ್ರಿಯೆಯು ಸರಿಯಾಗಿದೆ. ರಾಷ್ಟ್ರೀಯ ವೈದ್ಯಕೀಯ ಮಂಡಳಿಯ ಮಾರ್ಗಸೂಚಿಗಳ ಆಧಾರದಡಿ ಪ್ರಕ್ರಿಯೆಯನ್ನು ನಡೆಸಲಾಗಿದೆ. ಜಮ್ಮು-ಕಾಶ್ಮೀರದ ೧೩ ವೈದ್ಯಕೀಯ ಕಾಲೇಜುಗಳಲ್ಲಿನ ಒಟ್ಟು ೧,೬೮೫ ಸ್ಥಾನಗಳಿಗೆ ‘ನೀಟ್’ (ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯಲು ನಡೆಸುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ) ಪಟ್ಟಿಯ ಪ್ರಕಾರ ಪ್ರವೇಶ ನೀಡಲಾಗಿದೆ. ಇನ್ನೊಂದು ಷರತ್ತು ಏನೆಂದರೆ, ೮೫% ಸ್ಥಾನಗಳನ್ನು ಕೇಂದ್ರಾಡಳಿತ ಪ್ರದೇಶದ ನಿವಾಸಿಗಳಿಗಾಗಿ ಕಾಯ್ದಿರಿಸಬೇಕು. ಅದರಂತೆ ಪ್ರವೇಶ ನೀಡಲಾಗಿದೆ ಎಂದು ಹೇಳಿದರು. (ಹಿಂದೂಗಳ ಹಣದಿಂದ ನಿರ್ಮಿಸಲಾದ ಕಾಲೇಜಿನ ಆಡಳಿತಕ್ಕೆ ಈಗ ಕಾನೂನು ನೆನಪಾಗುತ್ತದೆ. ಮುಸ್ಲಿಮರನ್ನು ಓಲೈಸಲು ಕಾನೂನನ್ನು ಗಾಳಿಗೆ ತೂರಿ ಅವರ ತುಷ್ಟೀಕರಣ ಮಾಡಲಾಗುತ್ತದೆ. ಇದು ಹಿಂದೂಗಳಿಗೆ ಅನ್ಯಾಯವಲ್ಲವೇ? – ಸಂಪಾದಕರು).
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!