ನ್ಯೂಯಾರ್ಕ್ ನ ನೂತನ ಮಹಾಪೌರರಾದ ಜೋಹರಾನ ಮಮದಾನಿ ಅವರನ್ನು ಭೇಟಿಯಾದ ನಂತರ ಟ್ರಂಪ್ ಅವರ ಹೇಳಿಕೆ

ವಾಷಿಂಗ್ಟನ (ಅಮೆರಿಕ) – ನಾವು ನ್ಯೂಯಾರ್ಕ್ ಅನ್ನು ಮತ್ತೊಮ್ಮೆ ಶ್ರೇಷ್ಠಗೊಳಿಸಬೇಕು. ಜೋಹರಾನ ಮಮದಾನಿ ಅವರು ಎಷ್ಟು ಉತ್ತಮವಾಗಿ ಕೆಲಸ ಮಾಡುತ್ತಾರೋ, ಅಷ್ಟು ಹೆಚ್ಚು ಸಂತೋಷ ನನಗೆ, ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಕಟ್ಟಾ ವಿರೋಧಿಯೂ ಮತ್ತು ನ್ಯೂಯಾರ್ಕ್ ನಗರದ ನೂತನವಾಗಿ ಆಯ್ಕೆಯಾದ ಮಹಾಪೌರರಾದ ಜೋಹರಾನ್ ಮಮದಾನಿ ಅವರನ್ನು ವೈಟ್ ಹೌಸ್ನಲ್ಲಿ ಮೊತ್ತಮೊದಲ ಬಾರಿಗೆ ಭೇಟಿಯಾದ ನಂತರ ಹೇಳಿಕೆ ನೀಡಿದರು.ಈ ಭೇಟಿ ಅತ್ಯಂತ ಮಹತ್ವದ್ದಾಗಿತ್ತು; ಏಕೆಂದರೆ, ನ್ಯೂಯಾರ್ಕ್ ಮಹಾಪೌರರ ಚುನಾವಣೆಯ ಸಮಯದಲ್ಲಿ ಇಬ್ಬರೂ ನಾಯಕರು ಪರಸ್ಪರ ತೀವ್ರ ಟೀಕೆಗಳನ್ನು ಮಾಡಿದ್ದರು. ಟ್ರಂಪ್ ಅವರು ಮಮದಾನಿ ಅವರನ್ನು ‘ಕಮ್ಯುನಿಸ್ಟ್ ಹುಚ್ಚ’ ಮತ್ತು ‘ಜಿಹಾದಿ’ ಎಂದು ಕರೆದಿದ್ದರು, ಮತ್ತು ಮಮದಾನಿ ಅವರು ಟ್ರಂಪ್ ಅವರನ್ನು ‘ಸರ್ವಾಧಿಕಾರಿ’ ಮತ್ತು ‘ಫ್ಯಾಸಿಸ್ಟ್’ (ಮೂಲಭೂತವಾದಿ) ಎಂದು ಜರಿದಿದ್ದರು.
🔥 Trump’s Instant U-Turn
Trump now: “I’ll be happy if Mamdani does good work.”
Oh really?
Just days after calling him a “Jihadi” and “Mad Communist.”?🦎 Even chameleons don’t change colours this fast.
And when Mamdani’s “progressive paradise” turns NYC into… pic.twitter.com/ReKehf5vU2
— Sanatan Prabhat (@SanatanPrabhat) November 22, 2025
1. ಟ್ರಂಪ್ ಮತ್ತು ಮಮದಾನಿ ನಡುವೆ ತೀವ್ರ ವಾಗ್ವಾದ (ಬಿಸಿ ಚರ್ಚೆ?) ನಿರೀಕ್ಷಿಸಲಾಗಿತ್ತು;; ಆದರೆ ಭೇಟಿಯ ವಾತಾವರಣವು ಅತ್ಯಂತ ಸೌಹಾರ್ದಪೂರ್ಣವಾಗಿತ್ತು. ಟ್ರಂಪ್ ಅವರು ಮಮದಾನಿ ಅವರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ತಮ್ಮ ಭೇಟಿ ಬಹಳ ಒಳ್ಳೆಯದಾಗಿತ್ತು ಮತ್ತು ಫಲಪ್ರದವಾಗಿತ್ತು ಎಂದು ಹೇಳಿದರು.
2. ಮಮದಾನಿ ಅವರು ಕೂಡ ಸಭೆಯನ್ನು ‘ಫಲಪ್ರದ’ ಎಂದು ಕರೆದರು. ಅವರು ನಾವು ಬಾಡಿಗೆ, ಆಹಾರ, ವಿದ್ಯುತ್ ಬಿಲ್ ಮತ್ತು ಜೀವನ ಮಟ್ಟದ ಹೆಚ್ಚುತ್ತಿರುವ ವೆಚ್ಚಗಳ ಬಗ್ಗೆ ಚರ್ಚಿಸಿದ್ದೇವೆ. ನ್ಯೂಯಾರ್ಕ್ನ 85 ಲಕ್ಷ ಜನರ ಜೀವನ ಮಟ್ಟವನ್ನು ಹೇಗೆ ಸುಧಾರಿಸಬಹುದು ಎಂಬುದಕ್ಕಾಗಿ ನಾವಿಬ್ಬರೂ ಕೆಲಸ ಮಾಡಲು ಬಯಸುತ್ತೇವೆ ಎಂದು ತಿಳಿಸಿದರು.
3. ಕೆಲವು ವಿಷಯಗಳ ಕುರಿತು ಮಮದಾನಿ ಅವರ ಅಭಿಪ್ರಾಯಗಳು ಭಿನ್ನವಾಗಿದ್ದರೂ, ಚರ್ಚೆಯಿಂದ ಖಂಡಿತವಾಗಿಯೂ ಒಂದು ಪರಿಹಾರ ಹೊರಬೀಳುತ್ತದೆ ಎಂದು ಟ್ರಂಪ್ ಹೇಳಿದರು. ಮಮದಾನಿ ಅವರು ನನಗೆ ಮನವರಿಕೆ ಮಾಡಿಕೊಡಬಹುದು ಅಥವಾ ನಾನು ಮಮದಾನಿಗೆ ಮನವರಿಕೆ ಮಾಡಿಕೊಡಬಹುದು; ಆದರೆ ಕೊನೆಯಲ್ಲಿ, ನ್ಯೂಯಾರ್ಕ ಕ್ಕೆ ಉತ್ತಮವಾದದ್ದೇ ನಿರ್ಧಾರವಾಗುತ್ತದೆ, ಎಂದರು.
4. ಭೇಟಿಯ ಸಮಯದಲ್ಲಿ, ಮಾಧ್ಯಮದವರು ಮಮದಾನಿ ಅವರನ್ನು ನೀವು ಇನ್ನೂ ಟ್ರಂಪ್ ಅವರನ್ನು ಫ್ಯಾಸಿಸ್ಟ್ (ಮೂಲಭೂತವಾದಿ) ಎಂದು ಪರಿಗಣಿಸುತ್ತೀರಾ? ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, ಮಮದಾನಿ ಅವರಿಗೆ, ಪರವಾಗಿಲ್ಲ, ‘ಹೌದು’ ಎಂದು ಹೇಳಿ, ಅವರಿಗೆ ಆ ಸ್ಥಾನಮಾನ ನೀಡಿ(?) (ಅವರ ನಿರೀಕ್ಷೆ ಹುಸಿಗೊಳಿಸಬೇಡಿ? ಎಂದು ಆಗಬಹುದೇ?) . ಅದು ವಿವರಿಸುವುದಕ್ಕಿಂತ ಸುಲಭವಾಗಿದೆ. ನನಗೆ ಅದರಿಂದ ಯಾವುದೇ ತೊಂದರೆಯಿಲ್ಲ’ ಎಂದರು.
5. ಟ್ರಂಪ್ ಅವರು ಮಾತನಾಡುತ್ತಾ, ನ್ಯೂಯಾರ್ಕ್ ಅನ್ನು ಮತ್ತೊಮ್ಮೆ ಒಂದು ಶ್ರೇಷ್ಠ ನಗರವನ್ನಾಗಿ ಮಾಡುವುದು ಇಬ್ಬರು ನಾಯಕರ ಗುರಿಯಾಗಿದೆ ಎಂದು ಸ್ಪಷ್ಟಪಡಿಸಿದರು. ಒಂದು ವೇಳೆ ಮಮದಾನಿ ಅವರು ಉತ್ತಮ ಕೆಲಸ ಮಾಡಿ, ನಗರದಲ್ಲಿ ಸಕಾರಾತ್ಮಕ ಬದಲಾವಣೆ ತಂದರೆ, ತಮಗೆ ಅತಿ ಹೆಚ್ಚು ಸಂತೋಷವಾಗುತ್ತದೆ ಎಂದರು.
6. ಮಮದಾನಿ ಅವರು ಅನೇಕ ಸಂಪ್ರದಾಯವಾದಿ ಜನರಿಗೆ ಆಶ್ಚರ್ಯವನ್ನುಂಟು ಮಾಡಬಹುದು ಮತ್ತು ಅವರ ಕೆಲವು ವಿಚಾರಗಳು ನನ್ನಂತೆಯೇ ಇವೆ ಎಂದು ಟ್ರಂಪ್ ಅಭಿಪ್ರಾಯಪಟ್ಟರು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation