
(ಡಿಎಂಕೆ, ಅಂದರೆ ದ್ರಾವಿಡ ಮುನ್ನೇತ್ರ ಕಳಗಂ, ಅಂದರೆ ದ್ರಾವಿಡ ಪ್ರಗತಿ ಸಂಘ)
ಚೆನ್ನೈ (ತಮಿಳುನಾಡು) – ಸುಮಾರು ಎರಡು ವರ್ಷಗಳ ಹಿಂದೆ ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾದಂತಹ ಕಾಯಿಲೆ ಎಂದು ಕರೆದಿದ್ದ ಡಿಎಂಕೆಯ ಕಟ್ಟರ ಹಿಂದೂ ದ್ವೇಷಿ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ಈಗ ದೇವಭಾಷೆ ಸಂಸ್ಕೃತದ ಬಗ್ಗೆ ಟೀಕೆ ಮಾಡಿದ್ದಾರೆ. ಒಂದು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಂಸ್ಕೃತವನ್ನು ‘ಮೃತ’ ಎಂದು ಕರೆದರು. ಅವರು, ಕಳೆದ ೧೦ ವರ್ಷಗಳಲ್ಲಿ ಕೇಂದ್ರ ಸರಕಾರ ಸಂಸ್ಕೃತಕ್ಕಾಗಿ ೨,೪೦೦ ಕೋಟಿ ರೂಪಾಯಿ ನೀಡಿದರೆ, ತಮಿಳು ಭಾಷೆಗಾಗಿ ಕೇವಲ ೧೫೦ ಕೋಟಿ ರೂಪಾಯಿ ನೀಡಿದೆ ಎಂದು ಹೇಳಿದರು. ಮಕ್ಕಳು ತಮಿಳು ಕಲಿಯಲು ಉತ್ಸುಕರಾಗಿರುವಾಗ ಅವರ ಮೇಲೆ ಹಿಂದಿ ಮತ್ತು ಸಂಸ್ಕೃತ ಕಲಿಯಲು ಒತ್ತಡ ಏಕೆ ಹಾಕುತ್ತಿದ್ದೀರಿ ಎಂದು ಉದಯನಿಧಿ ಅವರು ಪ್ರಧಾನಮಂತ್ರಿ ಮೋದಿಯವರಿಗೆ ಪ್ರಶ್ನಿಸಿದರು. (ಈ ರೀತಿ ಭಾಷೆ ಮತ್ತು ಪ್ರದೇಶದ ಆಧಾರದ ಮೇಲೆ ಹಿಂದೂಗಳಲ್ಲಿ ಒಡಕು ಮೂಡಿಸಲು ಪ್ರಯತ್ನಿಸುವ ರಾಜಕೀಯ ನಾಯಕರ ಮೇಲೆ ರಾಷ್ಟ್ರದ್ರೋಹದ ಮೊಕದ್ದಮೆ ದಾಖಲಿಸಬೇಕು! – ಸಂಪಾದಕರು)
ಬಿಜೆಪಿಯಿಂದ ತೀವ್ರ ವಿರೋಧ!
ಸ್ಟಾಲಿನ್ ಅವರ ಹೇಳಿಕೆಗೆ ಬಿಜೆಪಿ ನಾಯಕಿ ಮತ್ತು ತೆಲಂಗಾಣದ ಮಾಜಿ ರಾಜ್ಯಪಾಲೆ ತಮಿಳಿಸೈ ಸುಂದರರಾಜನ್ ಪ್ರತಿಕ್ರಿಯೆ ನೀಡಿದ್ದು, ಇತರ ಭಾಷೆಗಳನ್ನು ಕೀಳಾಗಿ ಕಾಣುವುದು ತಮಿಳು ಸಂಸ್ಕೃತಿಗೆ ಮಾನ್ಯವಿಲ್ಲ ಎಂದು ಹೇಳಿದರು. ನಾವು ನಮ್ಮ ಭಾಷೆಯನ್ನು ಪ್ರೀತಿಸಬೇಕು ಮತ್ತು ಇತರ ಭಾಷೆಗಳನ್ನು ಸಹ ಗೌರವಿಸಬೇಕು ಎಂದು ಕರೆ ನೀಡಿದರು.
ಸಂಪಾದಕೀಯ ನಿಲುವುಇಂತಹ ಹಿಂದೂ ದ್ವೇಷಿ ‘ಉದಯ’ನಿಧಿ ಸ್ಟಾಲಿನ್ ಅವರ ರಾಜಕೀಯ ‘ಅಸ್ತ’ ಮಾಡಲು ಈಗ ತಮಿಳುನಾಡಿನ ಹಿಂದೂ ಜನರು ಮುಂದೆ ಬರಬೇಕು! ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಉದಯನಿಧಿ ಮತ್ತು ಅವರ ಡಿಎಂಕೆ ಪಕ್ಷಕ್ಕೆ ಸೋಲುಣಿಸುವುದು ಆವಶ್ಯಕವಾಗಿದೆ ! |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !