ನ್ಯೂಯಾರ್ಕ್ ನಗರದ ನೂತನ ಚುನಾಯಿತ ಮೇಯರ್ ಜೋಹರಾನ್ ಮಮ್ದಾನಿ ಭಾರತೀಯರನ್ನು ದ್ವೇಷಿಸುತ್ತಾರೆ! – Zohran Mamdani Hates Indians

ಡೊನಾಲ್ಡ್ ಟ್ರಂಪ್ ಅವರ ಪುತ್ರ ಎರಿಕ್ ಟ್ರಂಪ್ ರಿಂದ ಟೀಕೆ

ನ್ಯೂಯಾರ್ಕ್ (ಅಮೆರಿಕ) – ನ್ಯೂಯಾರ್ಕ್ ನಗರದ ನೂತನ ಚುನಾಯಿತ ಮೇಯರ್ ಜೋಹರಾನ್ ಮಮ್ದಾನಿ  ಭಾರತೀಯರನ್ನು ದ್ವೇಷಿಸುತ್ತಾರೆ, ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರ ಎರಿಕ್ ಟ್ರಂಪ್ ಅವರು ‘ಫಾಕ್ಸ್ ನ್ಯೂಸ್’ ನಿರೂಪಕ ಶಾನ್ ಹ್ಯಾನಿಟಿ ಅವರೊಂದಿಗೆ ನಡೆದ ಸಂದರ್ಶನದಲ್ಲಿ ಟೀಕಿಸಿದ್ದಾರೆ. ‘ನ್ಯೂಯಾರ್ಕ್ ನಗರವನ್ನು ಒಂದು ಕಾಲದಲ್ಲಿ ‘ಜಗತ್ತಿನ ಎಲ್ಲಕ್ಕಿಂತ ಮಹಾನ್ ನಗರ,’ ಎಂದು ಪರಿಗಣಿಸಲಾಗುತ್ತಿತ್ತು; ಆದರೆ ಈಗ ರಾಜಕೀಯದ ಕಾರಣದಿಂದ ಆ ಸ್ಥಾನಮಾನ ಉಳಿದಿಲ್ಲ,” ಎಂದೂ ಸಹ ಅವರು ಟೀಕಿಸಿದರು.

೧. ಎರಿಕ್ ಟ್ರಂಪ್ ಅವರು ಮಾತು ಮುಂದುವರೆಸಿ, ‘ಡೆಮಾಕ್ರಟಿಕ್ ಸೋಷಿಯಲಿಸ್ಟ್ ಪಕ್ಷ’ದ ಆದ್ಯತೆಗಳು ನಗರದ ಅವಶ್ಯಕತೆಗಳಿಗಿಂತ ಭಿನ್ನವಾಗಿವೆ. ನ್ಯೂಯಾರ್ಕ್‌ನಲ್ಲಿ ‘ಒಬ್ಬ’ ಕಮ್ಯುನಿಸ್ಟ್ (ಮಮ್ದಾನಿ) ಇದ್ದಾರೆ, ಅವರು ಕಿರಾಣಿ ಅಂಗಡಿಗಳನ್ನು ರಾಷ್ಟ್ರೀಕರಣಗೊಳಿಸಲು ಬಯಸುತ್ತಾರೆ, ನೆತನ್ಯಾಹು ಅವರನ್ನು ಬಂಧಿಸಲು ಬಯಸುತ್ತಾರೆ.

೨. ಚುನಾಯಿತರಾಗಿ ಬಂದ ಮೇಯರ್‌ ಸುರಕ್ಷಿತ ಮತ್ತು ಸ್ವಚ್ಛ ರಸ್ತೆಗಳು, ಸಮಂಜಸವಾದ ತೆರಿಗೆಗಳನ್ನು ನಿರ್ವಹಿಸುವುದು, ಈ ರೀತಿಯ ಸರಳ ಮೂಲಭೂತ ವಿಷಯಗಳ ಮೇಲೆ ಗಮನವನ್ನು ಕೇಂದ್ರೀಕರಿಸಬೇಕು. ಹೀಗೆ ಮಾಡುವುದರಿಂದ ಸರಕಾರದ ಹಸ್ತಕ್ಷೇಪವಿಲ್ಲದೆ ನಗರವು ಯಶಸ್ವಿಯಾಗಿ ಮುಂದುವರಿಯಬಹುದು, ಎಂದು ಎರಿಕ್ ಹೇಳಿದರು.

೩. ಈ ಸಂದರ್ಭದಲ್ಲಿ ಎರಿಕ್ ಟ್ರಂಪ್ ಅವರು ಮಮ್ದಾನಿ ಅವರನ್ನು ಡೆಮಾಕ್ರಟಿಕ್ ಪಕ್ಷದ ಆಕ್ರಮಣಕಾರಿ ನಾಯಕಿ ಅಲೆಕ್ಸಾಂಡ್ರಿಯಾ ಒಕಾಸಿಯೊ-ಕಾರ್ಟೆಜ್ ಸೇರಿದಂತೆ ಇತರ ಪ್ರಗತಿಪರ ವ್ಯಕ್ತಿಗಳೊಂದಿಗೆ ಹೋಲಿಸಿದರು. ಇದರ ಜೊತೆಗೆ ನ್ಯೂಯಾರ್ಕ್‌ನಲ್ಲಿ ಅಮೆಜಾನ್‌ನ ಪ್ರಸ್ತಾವಿತ ಮುಖ್ಯ ಕಚೇರಿಗೆ ವಿರೋಧ ವ್ಯಕ್ತಪಡಿಸುವ ಮಮ್ದಾನಿ ಅವರ ನಿಲುವನ್ನೂ ಸಹ ಅವರು ಟೀಕಿಸಿದರು.