ಡಾ. ಉಮರ್ ನ ಸಂಚಿಗೆ ಅಸಾದುದ್ದೀನ್ ಓವೈಸಿ ಅವರ ಉತ್ತರ

ನವದೆಹಲಿ – ಕೆಂಪು ಕೋಟೆಯ ಬಳಿ ಆತ್ಮಘಾತಿ ದಾಳಿ ನಡೆಸಿದ ಭಯೋತ್ಪಾದಕ ಡಾ. ಉಮರ್ ಮೊಹಮ್ಮದ್, ದಾಳಿಯ ಮೊದಲು ಚಿತ್ರೀಕರಿಸಿದ ವಿಡಿಯೋ ಒಂದು ಬೆಳಕಿಗೆ ಬಂದಿದೆ. ಬಾಂಬ್ ಸ್ಫೋಟಕ್ಕೆ ೨ ತಿಂಗಳ ಮೊದಲು ಈ ವಿಡಿಯೋ ಚಿತ್ರೀಕರಿಸಲಾಗಿತ್ತು. ಈ ವಿಡಿಯೋದಲ್ಲಿ ಆತ ಆತ್ಮಘಾತಿ ದಾಳಿ ಮಾಡುವ ಭಯೋತ್ಪಾದಕನನ್ನು ‘ಶಹೀದ್’ ಎಂದು ಕರೆಯಲು ಪ್ರಯತ್ನಿಸಿದ್ದಾನೆ. ಆತ್ಮಘಾತಕ ದಾಳಿಯನ್ನು ಇಸ್ಲಾಂನಲ್ಲಿ ‘ಶಹೀದ್ ಮಿಷನ್’ ಎಂದು ಉಮರ್ ಹೇಳಿದ್ದಾನೆ. ‘ಎ.ಐ.ಎಮ್.ಐ.ಎಮ್.’ (‘ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್’) ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು ಭಯೋತ್ಪಾದಕ ಉಮರ್‌ನ ಹೇಳಿಕೆಗಳನ್ನು ಬಲವಾಗಿ ವಿರೋಧಿಸಿದ್ದಾರೆ.
Asaduddin Owaisi says suicide is haram in Islam, not martyrdom – it is terrorism.
He was reacting to Dr. Umar’s viral video glorifying suicide missions as “martyrdom” and calling such attacks a path to heaven.
But if radicals are taught that killing “kafirs”, assaulting women,… pic.twitter.com/nz48mgwz1R
— Sanatan Prabhat (@SanatanPrabhat) November 19, 2025
ಇಸ್ಲಾಂನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರನ್ನು ‘ಶಹೀದ್’ ಎಂದು ಕರೆಯುವುದಿಲ್ಲ, ಬದಲಾಗಿ ಅದನ್ನು ಪಾಪ ಎಂದು ಹೇಳಲಾಗಿದೆ. ಇಸ್ಲಾಂನಲ್ಲಿ ನಿರಪರಾಧಿಗಳ ಹತ್ಯೆ ಮಾಡುವುದು ಘೋರ ಪಾಪ ಎಂದು ಸಹ ಅವರು ಸ್ಪಷ್ಟಪಡಿಸಿದರು. ಇಂತಹ ಕೃತ್ಯಗಳನ್ನು ಸಮರ್ಥಿಸುವುದು ದೇಶದ ಕಾನೂನನ್ನು ವಿರೋಧಿಸಿದಂತೆಯೇ ಆಗಿದೆ. ಇದು ಭಯೋತ್ಪಾದಕ ಕೃತ್ಯವೇ ಹೊರತು ಬೇರೇನಲ್ಲ ಎಂದು ಓವೈಸಿ ಪ್ರತಿಕ್ರಿಯೆ ನೀಡಿದರು.
‘ಆಪರೇಷನ್ ಸಿಂದೂರ್’ ಮತ್ತು ‘ಆಪರೇಷನ್ ಮಹಾದೇವ್’ ಅವಧಿಯಲ್ಲಿ, ಕಳೆದ ೬ ತಿಂಗಳಲ್ಲಿ ಯಾವುದೇ ಸ್ಥಳೀಯ ಕಾಶ್ಮೀರಿ ಭಯೋತ್ಪಾದಕ ಗುಂಪಿನಲ್ಲಿ ಸೇರಿಲ್ಲ ಎಂದು ಗೃಹ ಸಚಿವ ಅಮಿತ್ ಶಹಾ ಅವರು ಸಂಸತ್ತಿನಲ್ಲಿ ಹೇಳಿದ್ದರು. ಹಾಗಾದರೆ, ಈ ಭಯೋತ್ಪಾದಕ ಗುಂಪು ಎಲ್ಲಿಂದ ಬಂತು? ಇದನ್ನು ಪತ್ತೆಹಚ್ಚಲು ವಿಫಲವಾಗಿದ್ದಕ್ಕೆ ಜವಾಬ್ದಾರರು ಯಾರು? ಎಂದು ಓವೈಸಿ ಕೇಂದ್ರ ಸರ್ಕಾರವನ್ನು ಪರೋಕ್ಷವಾಗಿ ಪ್ರಶ್ನಿಸಿದರು.
ಸಂಪಾದಕೀಯ ನಿಲುವುಕಾಫಿರರನ್ನು ಕೊಲ್ಲುವುದು, ಅವರ ಸ್ತ್ರೀಯರ ಅತ್ಯಾಚಾರ ಮಾಡುವುದು, ಜಿಹಾದ್ ಘೋಷಿಸುವುದು – ಈ ಬೋಧನೆಯು ಮುಸಲ್ಮಾನರಿಗೆ ಎಲ್ಲಿಂದ ದೊರೆಯುತ್ತದೆ? ‘ಇಂತಹ ಕೃತ್ಯಗಳನ್ನು ಮಾಡಿದರೆ ಸ್ವರ್ಗಕ್ಕೆ ಹೋಗಬಹುದು’ ಎಂಬ ಬೋಧನೆಯಿಂದಲೇ ಮುಸಲ್ಮಾನರು ಆತ್ಮಘಾತಿ ದಾಳಿಗಳನ್ನು ಮಾಡುತ್ತಾರೆ. ಹಾಗಾಗಿ, ಓವೈಸಿ ಅವರ ಹೇಳಿಕೆಯನ್ನು ಯಾರು ನಂಬುತ್ತಾರೆ? |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!