
ಉಡುಪಿ (ಕರ್ನಾಟಕ) – ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಮದರಸಾ ಮಕಂದಾರ ಎಂಬ ಮುಸಲ್ಮಾನ ಶಿಕ್ಷಕನನ್ನು ನೌಕರಿಯಿಂದ ವಜಾ ಮಾಡಲಾಗಿದೆ. ಜನಿವಾರ ತೆಗೆದ ಘಟನೆ ನವೆಂಬರ್ 17 ರಂದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿರುವ ಮಿಯಾರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿತ್ತು. ಈ ಶಾಲೆಯಲ್ಲಿ ಮದರಸಾ ದೈಹಿಕ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದನು. ಆತನನ್ನು ಜೂನ್ ತಿಂಗಳಲ್ಲಿ ಅತಿಥಿ ಶಿಕ್ಷಕನಾಗಿ ನೇಮಿಸಲಾಗಿತ್ತು. ಈತ ಮೂಲತಃ ಕಲಬುರ್ಗಿಯವನು.
ಮದರಸಾ ಮಕಂದಾರ ಹಿಂದೂ ವಿದ್ಯಾರ್ಥಿಗಳಿಗೆ 200 ಬಸಕಿ ತೆಗೆಸುತ್ತಿದ್ದನು, ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಾ ಜನಿವಾರ ಮತ್ತು ಕೈಗಡಗಳ ಮೇಲೆ ಕಟ್ಟಿರುವ ಧಾರ್ಮಿಕ ದಾರವನ್ನು ತೆಗೆಯುವಂತೆ ಹೇಳುತ್ತಿದ್ದನು, ವಿದ್ಯಾರ್ಥಿಗಳು ಮತ್ತು ಪಾಲಕರು ಆರೋಪ ಮಾಡಿದ್ದಾರೆ.
ಮಕ್ಕಳ ದೂರಿನ ನಂತರ ಪಾಲಕರು ಮತ್ತು ಗ್ರಾಮಸ್ಥರು ಶಾಲೆಗೆ ಬಂದು ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡರು. ಮಕಂದಾರನಿಗೆ ಈ ಕುರಿತು ಈ ಹಿಂದೆಯೂ ಹಲವಾರು ಬಾರಿ ಎಚ್ಚರಿಕೆ ನೀಡಿದ್ದರೂ ಸಹ ಆತ ತನ್ನ ವರ್ತನೆಯನ್ನು ಸುಧಾರಿಸಲಿಲ್ಲ. ಆದ್ದರಿಂದ, ಮುಖ್ಯೋಪಾಧ್ಯಾಯರು ಮಕಂದಾರನನ್ನು ನೌಕರಿಯಿಂದ ವಜಾ ಮಾಡಿದ್ದಾರೆ.
ಸಂಪಾದಕೀಯ ನಿಲುವುಇಂತಹ ಮತಾಂಧ ಮುಸಲ್ಮಾನರನ್ನು ಕೇವಲ ನೌಕರಿಯಿಂದ ವಜಾ ಮಾಡದೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಪ್ರಕರಣದಡಿ ದೂರು ದಾಖಲಿಸಿ ಜೈಲಿಗೆ ಕಳುಹಿಸಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!