ಅಮೆರಿಕವು 250ಕ್ಕೂ ಅಧಿಕ ಆಹಾರ ಪದಾರ್ಥಗಳ ಮೇಲಿನ ಆಮದು ಸುಂಕವನ್ನು ತೆಗೆದುಹಾಕಿದೆ! US Cut Tariffs

ವಾಷಿಂಗ್‌ಟನ್ (ಅಮೆರಿಕ) – ಅಮೆರಿಕದಲ್ಲಿ ಹೆಚ್ಚುತ್ತಿರುವ ಹಣದುಬ್ಬರವನ್ನು ನಿಯಂತ್ರಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 250ಕ್ಕೂ ಹೆಚ್ಚು ಆಹಾರ ಪದಾರ್ಥಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ನಿರ್ಧಾರದಿಂದ ಭಾರತದ ರೈತರು ಮತ್ತು ಕೃಷಿ ರಫ್ತುದಾರರಿಗೆ ಸಮಾಧಾನ ಸಿಕ್ಕಿದೆ. ಈ ನಿರ್ಧಾರದಿಂದ ಭಾರತದ ಕೃಷಿ ರಫ್ತಿಗೆ ಸುಮಾರು ₹26 ಸಾವಿರ ಕೋಟಿ ರೂಪಾಯಿಗಳ ನೇರ ಲಾಭ ಸಿಗುವ ಸಾಧ್ಯತೆ ಇದೆ. ಭಾರತದಿಂದ ರಫ್ತಾಗುವ ಮಸಾಲೆ ಪದಾರ್ಥಗಳು, ಚಹಾ, ಕಾಫಿ, ಗೋಡಂಬಿ ಮತ್ತು ಹಣ್ಣುಗಳ ಮೇಲೆ ವಿಧಿಸಲಾಗಿದ್ದ ಹೆಚ್ಚಿನ ಸುಂಕದಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ರಫ್ತಿನ ಮೇಲೆ ದೊಡ್ಡ ಪರಿಣಾಮವಾಗಿತ್ತು. ಈಗ ಸುಂಕ ಕಡಿಮೆಯಾಗಿರುವುದರಿಂದ ಪರಿಸ್ಥಿತಿ ವೇಗವಾಗಿ ಬದಲಾಗುವ ನಿರೀಕ್ಷೆಯಿದೆ.

ಭಾರತದ ಆರ್ಥಿಕತೆಗೆ ಹೊಸ ವೇಗ ದೊರೆಯಲಿದೆ!

ಅಮೆರಿಕವು ಆಮದು ಸುಂಕವನ್ನು ಹೆಚ್ಚಿಸಿದ ನಂತರ ಭಾರತದ ರಫ್ತು ಸೆಪ್ಟೆಂಬರ್‌ನಲ್ಲಿ ಶೇಕಡಾ 12ರಷ್ಟು ಕುಸಿದು 5.43 ಶತಕೋಟಿ ಡಾಲರ್‌ಗೆ ತಲುಪಿತ್ತು. ಆದ್ದರಿಂದ ಈ ಪರಿಹಾರವು ಭಾರತದ ಆರ್ಥಿಕತೆಗೆ ಮುಖ್ಯವಾಗಿದೆ. ಸುಂಕ ಕಡಿಮೆಯಾಗಿರುವುದರಿಂದ ಭಾರತೀಯ ಉತ್ಪನ್ನಗಳು ಮತ್ತೆ ಅಮೆರಿಕದ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಲಿವೆ.