
ನವ ದೆಹಲಿ – ‘ರಾಷ್ಟ್ರೀಯ ಸುರಕ್ಷತೆ ಮತ್ತು ಸಂಸ್ಕೃತಿ ರಕ್ಷಣೆ’ಯ ಉದ್ದೇಶದೊಂದಿಗೆ ಸನಾತನ ಸಂಸ್ಥೆಯ ವತಿಯಿಂದ ಡಿಸೆಂಬರ್ 13 ಮತ್ತು 14 ರಂದು ದೆಹಲಿಯ ‘ಭಾರತ್ ಮಂಡಪಂ’ನಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವನ್ನು ಆಯೋಜಿಸಲಾಗಿದೆ. ಈ ಮಹೋತ್ಸವದ ಆಹ್ವಾನವನ್ನು ಹಿಂದೂ ಜನಜಾಗೃತಿ ಸಮಿತಿಯ ಛತ್ತೀಸ್‌ಗಢ ಸಂಯೋಜಕ ಶ್ರೀ. ಹೇಮಂತ ಕಾನಸ್ಕರ್ ಅವರು ಛತ್ತೀಸ್‌ಗಢದ ಉಪಮುಖ್ಯಮಂತ್ರಿ ಶ್ರೀ. ವಿಜಯ ಶರ್ಮಾ ಅವರಿಗೆ ನೀಡಿದರು. ಈ ಸಂದರ್ಭದಲ್ಲಿ ಸರ್ವಶ್ರೀ ದೇವರಾಜ್ ಸಾಹು, ಗೋವಿಂದ ಸಾಹು, ರೋಶನ ಸಾಹು ಮತ್ತು ಪ್ರತೀಕ ರಿಜ್ವಾನಿ ಈ ಗಣ್ಯರು ಉಪಸ್ಥಿತರಿದ್ದರು.
‘ದಿ ಜೈಪುರ ಡೈಲಾಗ್ಸ್’ ಅಧ್ಯಕ್ಷ ಸಂಜಯ ದೀಕ್ಷಿತ್ ಅವರಿಗೆ ಆಹ್ವಾನ!

ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಅವರು ‘ದಿ ಜೈಪುರ ಡೈಲಾಗ್ಸ್’ನ ಅಧ್ಯಕ್ಷರಾದ ಶ್ರೀ. ಸಂಜಯ ದೀಕ್ಷಿತ್ ಅವರಿಗೆ ದೆಹಲಿಯಲ್ಲಿ ನಡೆಯಲಿರುವ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವಕ್ಕೆ ಆಹ್ವಾನ ನೀಡಿದರು.
ಬಂಗಾಳದ ಸ್ವಾಮಿ ವಿಶ್ವಾತ್ಮಾನಂದಜಿ ಅವರಿಗೂ ಆಹ್ವಾನ!

ಬಂಗಾಳದ ಭಾರತ ಸೇವಾಶ್ರಮ ಸಂಘದ ಪ್ರಧಾನ ಕಾರ್ಯದರ್ಶಿ ಸ್ವಾಮಿ ವಿಶ್ವಾತ್ಮಾನಂದಜಿ (ದಿಲೀಪ ಮಹಾರಾಜ್) ಅವರಿಗೂ ಸಹ ಹಿಂದೂ ಜನಜಾಗೃತಿ ಸಮಿತಿಯ ಪೂರ್ವ ಮತ್ತು ಈಶಾನ್ಯ ಭಾರತದ ಸಂಯೋಜಕ ಶ್ರೀ. ಶಂಭು ಗವಾರೆ ಅವರು ಉತ್ಸವಕ್ಕೆ ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ ಸಮಿತಿಯ ಶ್ರೀ. ವಿಮಲ ಜೈಸ್ವಾಲ್ ಮತ್ತು ‘ಭಾರತೀಯ ಸಾಧಕ ಸಮಾಜ’ದ ಸ್ಥಾಪಕ ಕಾರ್ಯದರ್ಶಿ ಶ್ರೀ. ಅನಿರ್ಬಾನ ನಿಯೋಗಿ ಸಹ ಉಪಸ್ಥಿತರಿದ್ದರು. ಗೋವಾದಲ್ಲಿ ನಡೆದ ಶಂಖನಾದ ಮಹೋತ್ಸವದ ವಿಡಿಯೋವನ್ನು ವೀಕ್ಷಿಸಿದ ನಂತರ ಸ್ವಾಮೀಜಿ ಅವರು ಈ ಸಂದರ್ಭದಲ್ಲಿ ಉತ್ಸಾಹದಿಂದ, ನೀವೇನು ಮಾಡುತ್ತಿದ್ದೀರೋ ಅದು ನನ್ನ ಗುರುವಿನ ಕಾರ್ಯವೇ ಆಗಿದೆ. ನಿಮಗೆಲ್ಲಾ ತುಂಬಾ ಆಶೀರ್ವಾದಗಳು! ಎಂದು ಹೇಳಿದರು.
‘ಜಾಗರಣ್ ನ್ಯೂಸ್ ಮೀಡಿಯಾ’ದ ರಾಜಕೀಯ ಸಂಪಾದಕಿ (ಪೊಲಿಟಿಕಲ್ ಎಡಿಟರ್) ಸ್ಮೃತಿ ರಸ್ತೋಗಿ ಅವರಿಗೆ ಆಹ್ವಾನ

ನ್ಯಾಯವಾದಿ ಅಮಿತಾ ಸಚ್‌ದೇವ ಅವರು ಈ ಉತ್ಸವದ ಆಹ್ವಾನವನ್ನು ‘ಜಾಗರಣ ನ್ಯೂಸ್ ಮೀಡಿಯಾ’ದ ರಾಜಕೀಯ ಸಂಪಾದಕಿ (ಪೊಲಿಟಿಕಲ್ ಎಡಿಟರ್) ಸ್ಮೃತಿ ರಸ್ತೋಗಿ ಅವರಿಗೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ರಸ್ತೋಗಿ ಅವರು, ಈ ಉತ್ಸವಕ್ಕೆ ಬರುವ ಭರವಸೆ ನೀಡಿದರು.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ