|

ಮುಂಬಯಿ, ನವೆಂಬರ್ ೧೬ (ವಾರ್ತೆ) – ಶ್ರೀಕೃಷ್ಣ ಜನ್ಮಭೂಮಿ ಮುಕ್ತವಾಗಬೇಕು ಎಂಬ ಉದ್ದೇಶದಿಂದ ವರಳಿಯ ಗಾಂಧಿ (ಜಾಂಭೋರಿ) ಮೈದಾನದಲ್ಲಿ ನಡೆಯುತ್ತಿದ್ದ ಶ್ರೀ ನಾರಾಯಣ ಮಹಾಯಜ್ಞದ ಸ್ಥಳದಲ್ಲಿ ಕೆಲವು ಸಮಾಜಘಾತುಕರು ಗಲಭೆ ಮಾಡಿದ್ದಾರೆ. ಯಜ್ಞದ ನಿಮಿತ್ತ ಮೈದಾನದ ಹೊರಗೆ ಹಾಕಲಾಗಿದ್ದ ವಿವಿಧ ಫಲಕಗಳಲ್ಲಿ, ಪೂ. ಸಂಭಾಜಿರಾವ್ ಭಿಡೆ ಗುರುಜಿ ಅವರು ಈ ಯಜ್ಞಕ್ಕಾಗಿ ನೀಡಿದ್ದ ಶುಭಾಶಯದ ಫಲಕವೂ ಇತ್ತು. ಅದರ ಮೇಲೆ ಅವರ ಛಾಯಾಚಿತ್ರವಿತ್ತು. ಸಮಾಜಘಾತುಕರು ಆ ಫಲಕವನ್ನು ಹರಿದು ಹಾಕಿದರು. ನವೆಂಬರ್ ೧೫ ರಂದು ಸಂಜೆ ೭:೩೦ ರಿಂದ ರಾತ್ರಿ ೮ ಗಂಟೆಯ ಅವಧಿಯಲ್ಲಿ, ‘ಜೈ ಭೀಮ್’, ‘ಮನೋಹರ ಭಿಡೆ ಮುರ್ದಾಬಾದ್’ ಎಂಬ ಘೋಷಣೆಗಳನ್ನು ಕೂಗುತ್ತಾ ೧೫-೨೦ ಸಮಾಜಘಾತುಕರು ಮೈದಾನದ ಪ್ರವೇಶದ್ವಾರದ ಬಳಿ ಈ ಕೃತ್ಯ ಎಸಗಿದ್ದಾರೆ. ಈ ಸಮಯದಲ್ಲಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು; ಆದರೆ ಫಲಕ ಹರಿದು ಹಾಕಿದವರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ.

ಶ್ರೀಕೃಷ್ಣ ಜನ್ಮಭೂಮಿ ಮುಕ್ತವಾಗಬೇಕು ಎಂಬ ಉದ್ದೇಶದಿಂದ ‘ಶ್ರೀಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸ’ದ ವತಿಯಿಂದ ನವೆಂಬರ್ ೧೫ ಮತ್ತು ೧೬ ರಂದು ಈ ಮಹಾಯಜ್ಞವನ್ನು ಆಯೋಜಿಸಲಾಗಿದೆ. ಇದರ ನಿಮಿತ್ತ ಈ ಸಮಾರಂಭಕ್ಕೆ ಶುಭ ಕೋರಲು ವಿವಿಧ ಹಿಂದುತ್ವನಿಷ್ಠ ಸಂಘಟನೆಗಳು ಗಾಂಧಿ ಮೈದಾನದ ಹೊರಗೆ ಫಲಕಗಳನ್ನು ಹಾಕಿದ್ದವು. ಸಮಾಜಘಾತುಕರು ಮೈದಾನದ ಹೊರಗೆ ಗಲಭೆ ಮಾಡುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ, ಯಜ್ಞ ಸ್ಥಳದಲ್ಲಿ ಉಪಸ್ಥಿತರಿದ್ದ ಹಿಂದೂಗಳೂ ದೊಡ್ಡ ಸಂಖ್ಯೆಯಲ್ಲಿ ‘ಜೈ ಶ್ರೀರಾಮ್’, ‘ಹರ ಹರ ಮಹಾದೇವ’ ಎಂಬ ಘೋಷಣೆಗಳನ್ನು ಕೂಗುತ್ತಾ ಮೈದಾನದ ಪ್ರವೇಶದ್ವಾರಕ್ಕೆ ಬಂದರು. ಎರಡೂ ಗುಂಪುಗಳು ಮುಖಾಮುಖಿಯಾಗಿದ್ದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದರು. ಸುಮಾರು ೨೦-೨೫ ನಿಮಿಷಗಳ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು. ಈ ಘಟನೆಯ ನಂತರ ರಾತ್ರಿ ೯:೩೦ ರ ವೇಳೆಗೆ ಗಾಂಧಿ ಮೈದಾನದ ಹೊರಗೆ ದೊಡ್ಡ ಪ್ರಮಾಣದಲ್ಲಿ ಪೊಲೀಸರ ಕಾವಲು ಇತ್ತು. ಈ ಘಟನೆಯ ಕುರಿತು ‘ಶ್ರೀಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸ’ದ ರಾಷ್ಟ್ರೀಯ ಮಹಾಮಂತ್ರಿ ಹಾಗೂ ಮಹಾರಾಷ್ಟ್ರ ರಾಜ್ಯ ಸಂಯೋಜಕ ಶ್ರೀ. ಪರಾಗ್ ಫಡಣೀಸ್ ಅವರೊಂದಿಗೆ ‘ಸನಾತನ ಪ್ರಭಾತ’ದ ಪ್ರತಿನಿಧಿ ಸಂಪರ್ಕಿಸಿದಾಗ ಅವರು, “ಪೊಲೀಸ್ ಠಾಣೆಯಲ್ಲಿ ನಿಯಮಾನುಸಾರ ದೂರು ದಾಖಲಿಸಲಾಗುವುದು. ನವೆಂಬರ್ ೧೬ ರ ಸಂಜೆ ನಡೆದ ಘಟನೆಯ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಲಾಗುವುದು” ಎಂದು ಹೇಳಿದರು.
ಸಮಾಜಘಾತುಕರ ಗಲಭೆ ಅನಗತ್ಯ!ಸಮಾಜಘಾತುಕರು ಹರಿದು ಹಾಕಿದ ಫಲಕದ ಮೇಲೆ ಪೂ. ಸಂಭಾಜಿರಾವ್ ಭಿಡೆ ಗುರುಜಿ ಅವರ ಚಿತ್ರದೊಂದಿಗೆ, ‘ಶುದ್ಧ ಉದ್ದೇಶದಿಂದ ಆಯೋಜಿಸಲಾದ ಶ್ರೀಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸದ ಧರ್ಮ ಕಾರ್ಯಕ್ಕೆ ನನ್ನ ನಿರಂತರ ಶುಭಾಶಯಗಳು! ಛತ್ರಪತಿ ಶ್ರೀ ಶಿವಾಜಿ ಮಹಾರಾಜರು ಮತ್ತು ಧರ್ಮವೀರ ಛತ್ರಪತಿ ಶ್ರೀ ಸಂಭಾಜಿ ಮಹಾರಾಜರ ಅಪೂರ್ಣ ಕನಸುಗಳನ್ನು ಪೂರ್ಣಗೊಳಿಸೋಣ’, ಎಂಬ ಶುಭಾಶಯದ ಸಂದೇಶವಿತ್ತು. ಈ ಸಂದೇಶದಲ್ಲಿ ಯಾವುದೇ ಆಕ್ಷೇಪಾರ್ಹ ವಿಷಯ ಇರಲಿಲ್ಲ. ಕೇವಲ ಪೂ. ಭಿಡೆ ಗುರುಜಿ ಅವರ ಚಿತ್ರ ಮತ್ತು ಸಂದೇಶವಿದೆ ಎಂಬ ಕಾರಣಕ್ಕೆ ಸಮಾಜಘಾತುಕರು ಈ ಗಲಭೆ ಮಾಡಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. |
ಸಂಪಾದಕೀಯ ನಿಲುವು
|
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!