ಪಾಕಿಸ್ತಾನದ ಹಿರಿಯ ಪತ್ರಕರ್ತರು ಭಾರತದಲ್ಲಿ ಭಯೋತ್ಪಾದಕ ದಾಳಿಯಾಗಲಿದೆ ಎಂದು ಮೇ ತಿಂಗಳಲ್ಲೇ ಹೇಳಿರುವುದು ಬಹಿರಂಗ! – Terror Attack In India Predicted By Journalist

ಆಪರೇಷನ್ ಸಿಂಧೂರ್’ಗೆ ಪ್ರತೀಕಾರ ತೀರಿಸಿಕೊಳ್ಳಲು ಮಸೂದ್ ಅಜರ್ ಭಯೋತ್ಪಾದಕರಿಗೆ ಆದೇಶ ನೀಡಿದ್ದ!

ಭಯೋತ್ಪಾದಕ ಮಸೂದ್ ಅಜರ್

ಇಸ್ಲಾಮಾಬಾದ್ (ಪಾಕಿಸ್ತಾನ) – ‘ಆಪರೇಷನ್ ಸಿಂಧೂರ್’ನಲ್ಲಿ ಮಸೂದ್ ಅಜರ್‌ಗೆ ಆದ ಆಘಾತದ ನಂತರ, ಭಾರತದಲ್ಲಿ ದಾಳಿ ನಡೆಸಲು ತನ್ನ ಭಯೋತ್ಪಾದಕರಿಗೆ ಆದೇಶ ನೀಡಿದ್ದಾನೆ. ಭಾರತದಲ್ಲೇ ಸಕ್ರಿಯವಾಗಿರುವ ಅವನ ಗುಪ್ತ ಗುಂಪುಗಳು ಭಯೋತ್ಪಾದಕ ದಾಳಿಗಳನ್ನು ನಡೆಸಲಿವೆ ಎಂದು ಪಾಕಿಸ್ತಾನದ ಹಿರಿಯ ಪತ್ರಕರ್ತ ಜಾವೇದ್ ಚೌಧರಿ ಮೇ 2025 ರಲ್ಲಿ ಹೇಳಿದ್ದ ವೀಡಿಯೊ ಈಗ ಹೊರಬಂದಿದೆ. ದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟ ಮತ್ತು ಅದಕ್ಕೆ ಸಂಬಂಧಿಸಿದಂತೆ ಬಂಧಿತರಾದ ಭಯೋತ್ಪಾದಕರು ಅದೇ ಪಿತೂರಿಯ ಭಾಗ ಎಂದು ಈಗ ಹೇಳಲಾಗುತ್ತಿದೆ.

ಈ ವೀಡಿಯೊದಲ್ಲಿ ಜಾವೇದ್ ಚೌಧರಿ ಅವರು, ಮಸೂದ್ ಅಜರ್‌ನಿಂದ ಭಾರತ ಅಸಮಾಧಾನಗೊಂಡಿರುತ್ತದೆ; ಏಕೆಂದರೆ ಅವನ ಜಾಲವು ಆಳವಾಗಿದೆ ಮತ್ತು ಅವನ ಬೆಂಬಲಿಗರು ಅವನಿಗೆ ನಿಷ್ಠರಾಗಿದ್ದಾರೆ. ಅವನು ಪ್ರತೀಕಾರ ತೀರಿಸಿಕೊಳ್ಳುವುದಾಗಿ ಘೋಷಿಸಿದ್ದಾನೆ. ಪಾಕಿಸ್ತಾನ ಇಲ್ಲಿಯವರೆಗೆ ಮಸೂದ್ ಅಜರ್ ಮತ್ತು ಹಾಫಿಜ್ ಸಯೀದ್ ಅವರ ಜಾಲವನ್ನು ತಡೆದಿತ್ತು; ಆದರೆ ಈಗ ಅವರಿಗೆ ಸ್ವಾತಂತ್ರ್ಯ ನೀಡಲಾಗಿದೆ. ಪಾಕಿಸ್ತಾನ ತನ್ನ ಭಯೋತ್ಪಾದಕರಿಂದ ಭಾರತದಲ್ಲಿ ಮತ್ತೆ ದಾಳಿಗಳನ್ನು ನಡೆಸಲಿದೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಇದು ಭಾರತೀಯ ಗುಪ್ತಚರ ಸಂಸ್ಥೆಗಳಿಗೆ ಗೊತ್ತಿರಲಿಲ್ಲವೇ? ಇನ್ನೂ ಎಷ್ಟು ಕಡೆ ದಾಳಿಗಳು ನಡೆಯಲಿವೆ ಎಂಬುದನ್ನು ಪತ್ತೆ ಹಚ್ಚಿ ತಡೆಯಬೇಕಿದೆ!