1942 ರಲ್ಲಿ ಪೋಲೆಂಡ್‌ನ ಯಹೂದಿ ಮಕ್ಕಳ ಪ್ರಾಣ ಉಳಿಸಿದ ಗುಜರಾತ್‌ನ ಮಹಾರಾಜ ಜಡೇಜಾ ಅವರನ್ನು ಇಸ್ರೇಲ್ -Maharaja Jadeja Honoredನಿಂದ ಗೌರವ ! – Israel Honors Maharaja Jadeja

ಇಸ್ರೇಲ್‌ನಲ್ಲಿ ಮಹಾರಾಜ ಜಾಮ್ ಸಾಹೇಬ್ ದಿಗ್ವಿಜಯ್ ಸಿಂಗ್ ಜಡೇಜಾ ಅವರ ಪ್ರತಿಮೆ ಅನಾವರಣ!

ನೆವಾಟಿಮ್ (ಇಸ್ರೇಲ್) – ದಕ್ಷಿಣ ಇಸ್ರೇಲ್‌ನ ನೆವಾಟಿಮ್‌ನಲ್ಲಿ ಇತ್ತೀಚೆಗೆ ಗುಜರಾತ್‌ನ ನವಾನಗರದ (ಜಾಮ್‌ನಗರದ) ಮಾಜಿ ಮಹಾರಾಜ ಜಾಮ್ ಸಾಹೇಬ್ ದಿಗ್ವಿಜಯ್ ಸಿಂಗ್ ಜಡೇಜಾ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಎರಡನೇ ಮಹಾಯುದ್ಧದ ಸಮಯದಲ್ಲಿ ಪೋಲೆಂಡ್‌ನ ನೂರಾರು ಮಕ್ಕಳಿಗೆ, ವಿಶೇಷವಾಗಿ ಅನೇಕ ಯಹೂದಿ ಮಕ್ಕಳಿಗೆ ಆಶ್ರಯ ನೀಡಿದ್ದನ್ನು ಸ್ಮರಿಸಲು ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಈ ಪ್ರತಿಮೆಯ ಕೆಳಗೆ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಅನೇಕ ಯಹೂದಿ ಮಕ್ಕಳ ಪ್ರಾಣವನ್ನು ಉಳಿಸಿದರು ಮತ್ತು ಅವರಿಗೆ ತಮ್ಮ ಮನೆಯಲ್ಲಿ ಆಶ್ರಯ ನೀಡಿ, ಪ್ರೀತಿ ನೀಡಿದರು ಎಂದು ಬರೆಯಲಾಗಿದೆ. ಈ ಕಾರ್ಯಕ್ರಮವನ್ನು ‘ಭಾರತೀಯ ಯಹೂದಿ ಪರಂಪರಾ ಕೇಂದ್ರ’ ಮತ್ತು ‘ಕೋಚಿ ಯಹೂದಿ ಪರಂಪರಾ ಕೇಂದ್ರ’ ಆಯೋಜಿಸಿದ್ದವು.

1. ಮಹಾರಾಜ ಜಡೇಜಾ ಅವರು ಜಾಮ್‌ನಗರದ ಕೊನೆಯ ಆಡಳಿತಗಾರರಾಗಿದ್ದರು. ಅವರು ಕೇವಲ ತಮ್ಮ ರಾಜ್ಯದ ಬಗ್ಗೆ ಮಾತ್ರ ಯೋಚಿಸದೆ, ಸಾವಿರಾರು ಕಿಲೋಮೀಟರ್ ದೂರದ ಪೋಲೆಂಡ್‌ನ ನಾಗರಿಕರಿಗೂ ಮಾನವೀಯ ಸಹಾಯ ಮಾಡಿದರು. ಎರಡನೇ ಮಹಾಯುದ್ಧದಲ್ಲಿ ಅವರು ಅಲ್ಲಿನ ಮಕ್ಕಳಿಗೆ ಭಾರತದಲ್ಲಿ ಆಶ್ರಯ ನೀಡಿದ್ದರು.

2. 1939 ರಲ್ಲಿ ಸೋವಿಯತ್ ಒಕ್ಕೂಟ ಮತ್ತು ಜರ್ಮನಿ ಜಂಟಿಯಾಗಿ ಪೋಲೆಂಡ್ ಮೇಲೆ ಆಕ್ರಮಣ ಮಾಡಿದ್ದವು. ಪೋಲೆಂಡ್ ಸರಕಾರ ಪತನಗೊಂಡ ನಂತರ, ಅಲ್ಲಿನ ಸಾವಿರಾರು ನಾಗರಿಕರು ಮತ್ತು ಮಕ್ಕಳನ್ನು ಸೋವಿಯತ್ ಒಕ್ಕೂಟಕ್ಕೆ ಕಳುಹಿಸಲಾಯಿತು. ಅಲ್ಲಿನ ಶಿಬಿರಗಳಲ್ಲಿ ಅವರು ಹಸಿವು ಮತ್ತು ರೋಗಗಳಿಂದ ಬಳಲುತ್ತಿದ್ದರು.

3. ಆ ಸಮಯದಲ್ಲಿ ಮಹಾರಾಜ ಜಡೇಜಾ ಬ್ರಿಟಿಷ್ ಯುದ್ಧ ಮಂತ್ರಿಮಂಡಲದಲ್ಲಿ ಹಿಂದೂ ಪ್ರತಿನಿಧಿಯಾಗಿದ್ದರು. ಪೋಲೆಂಡ್ ಮಕ್ಕಳ ಸ್ಥಿತಿ ತಿಳಿದ ತಕ್ಷಣ, ಅವರು ಅವರನ್ನು ತಕ್ಷಣವೇ ಭಾರತಕ್ಕೆ ಕರೆತರಲು ನಿರ್ಧರಿಸಿದರು. 1942 ರಲ್ಲಿ ಪೋಲೆಂಡ್ ಮಕ್ಕಳ ಮೊದಲ ತಂಡ ಜಾಮ್‌ನಗರಕ್ಕೆ ತಲುಪಿತು. ಮಹಾರಾಜ ಜಡೇಜಾ ಸ್ವತಃ ಅವರ ಸ್ವಾಗತಕ್ಕಾಗಿ ಹೋಗಿದ್ದರು. ಅಲ್ಲಿ ಅವರು ಮಕ್ಕಳಿಗೆ, “ಇನ್ನು ನೀವು ಅನಾಥರಲ್ಲ. ನಾನು ನಿಮ್ಮ ತಂದೆ ಮತ್ತು ನವಾನಗರ ನಿಮ್ಮ ಮನೆ” ಎಂದು ಹೇಳಿದರು. ಮಹಾರಾಜರು ಅವರ ವಸತಿ, ಆಹಾರ ಮತ್ತು ಶಿಕ್ಷಣದ ವ್ಯವಸ್ಥೆ ಮಾಡಿದ್ದರು.

4. ಮಹಾರಾಜ ಜಡೇಜಾ ಧರ್ಮ ಮತ್ತು ಮಾನವೀಯತೆಯನ್ನು ಪಾಲಿಸುತ್ತಾ ನಿಸ್ವಾರ್ಥವಾಗಿ ಕೆಲಸ ಮಾಡಿದರು. ಪೋಲೆಂಡ್‌ನಲ್ಲಿ ಅವರನ್ನು ‘ಒಳ್ಳೆಯ ಮಹಾರಾಜ’ ಎಂದು ಕರೆಯಲಾಗುತ್ತದೆ. ವಾರ್ಸಾದಲ್ಲಿ ಮಹಾರಾಜರ ಸ್ಮಾರಕವನ್ನು ನಿರ್ಮಿಸಿ ಅವರನ್ನು ಗೌರವಿಸಲಾಗಿದೆ. ವಾರ್ಸಾದಲ್ಲಿ ಅವರ ಹೆಸರಿನಲ್ಲಿ ಒಂದು ಶಾಲೆ ಮತ್ತು ‘ಮಹಾರಾಜ ಸ್ಕ್ವೇರ್’ ಎಂಬ ಚೌಕವಿದೆ. 2022 ರಲ್ಲಿ ಅವರ ಹೆಸರಿನಲ್ಲಿ ಒಂದು ರೈಲು ಕೂಡ ಪ್ರಾರಂಭವಾಯಿತು. 2024 ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪೋಲೆಂಡ್‌ಗೆ ಭೇಟಿ ನೀಡಿದಾಗ ಈ ಸ್ಮಾರಕಕ್ಕೆ ನಮಸ್ಕರಿಸಿದ್ದರು.