‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ಮಾಜಿ ಶಾಸಕ ನಿತಿನ್ ಶಿಂದೆ ಮತ್ತು ಸ್ವಾತಿ ಶಿಂದೆ ಅವರಿಗೆ ಆಹ್ವಾನ!

ಸಾಂಗ್ಲಿ, ನವೆಂಬರ್ ೧೫ (ವಾರ್ತೆ) – ಸನಾತನ ಸಂಸ್ಥೆಯ ವಕ್ತಾರ ಶ್ರೀ. ಅಭಯ ವರ್ತಕ್ ಮತ್ತು ಡಾ. ವೀರೇಂದ್ರ ಸಿಂಹ ತಾವಡೆ ಅವರು ನವೆಂಬರ್ ೧೪ ರಂದು ‘ಹಿಂದೂ ಏಕತಾ ಆಂದೋಲನ’ದ ರಾಜ್ಯಾಧ್ಯಕ್ಷ ಮತ್ತು ಮಾಜಿ ಶಾಸಕ ಶ್ರೀ. ನಿತಿನ್ ಶಿಂದೆ, ಹಾಗೂ ಅವರ ಪತ್ನಿ ಮತ್ತು ಮಾಜಿ ನಗರಸಭೆ ಸದಸ್ಯೆ ಸೌ. ಸ್ವಾತಿ ಶಿಂದೆ ಅವರನ್ನು ಸಾಂಗ್ಲಿಯಲ್ಲಿರುವ ಅವರ ನಿವಾಸದಲ್ಲಿ ಸೌಹಾರ್ದ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಶ್ರೀ. ಮತ್ತು ಸೌ. ಶಿಂದೆ ಅವರು ಶ್ರೀ. ಅಭಯ ವರ್ತಕ್ ಮತ್ತು ಡಾ. ವೀರೇಂದ್ರ ಸಿಂಹ ತಾವಡೆ ಅವರಿಗೆ ಕೇಸರಿ ಶಾಲು ಹೊದಿಸಿ ಸನ್ಮಾನ ಮಾಡಿದರು.

ಈ ವೇಳೆ ಮಾತನಾಡಿದ ಶ್ರೀ. ನಿತಿನ್ ಶಿಂದೆ ಅವರು ತಮ್ಮ ಕಾರ್ಯಕರ್ತರಿಗೆ, “ದೊಡ್ಡ ಛಲ ಮತ್ತು ಹಠದಿಂದ ಹಿಂದೂತ್ವದ ಕಾರ್ಯ ಮಾಡಿದ ಡಾ. ವೀರೇಂದ್ರ ಸಿಂಹ ತಾವಡೆ ಅವರ ಕಾರ್ಯವನ್ನು ತಡೆಯಲು, ಸುಳ್ಳು ಕೇಸುಗಳನ್ನು ದಾಖಲಿಸಿ ಅವರನ್ನು ೯ ವರ್ಷಗಳ ಕಾಲ ಕಾರಾಗೃಹದಲ್ಲಿಟ್ಟರು; ಆದರೆ ಅವರು ವಿಚಲಿತರಾಗಲಿಲ್ಲ. ಎಲ್ಲ ಹಿಂದೂಗಳೂ ಅವರ ಆದರ್ಶವನ್ನು ತೆಗೆದುಕೊಳ್ಳಬೇಕು. ಅವರ ಕಾರ್ಯದ ಬಗ್ಗೆ ನಮಗೆ ಹೆಮ್ಮೆಯಿದೆ. ಅವರಂತೆ ಅಡೆತಡೆಗಳನ್ನು ಎದುರಿಸಿ ಛಲದಿಂದ ಹಿಂದೂತ್ವದ ಕಾರ್ಯ ಮಾಡಬೇಕು” ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ನಗರಸಭೆ ಸದಸ್ಯೆ ಸೌ. ಸ್ವಾತಿ ಶಿಂದೆ ಅವರು, “ನಗರಪಾಲಿಕೆಯ ಚುನಾವಣಾ ಪ್ರಚಾರಕ್ಕೆ ಇಂದು ಶುಭಾರಂಭ ಮಾಡಬೇಕಿತ್ತು. ಅದರ ನಿಮಿತ್ತ ಡಾ. ವೀರೇಂದ್ರ ಸಿಂಹ ತಾವಡೆ ಮತ್ತು ಶ್ರೀ. ಅಭಯ ವರ್ತಕ್ ಅವರು ನನ್ನ ನಿವಾಸಕ್ಕೆ ಕಾಲಿಟ್ಟಿದ್ದರಿಂದ ನಾನು ಧನ್ಯಳಾದೆ” ಎಂದು ಹೇಳುವಾಗ ಅವರ ಕಣ್ಣುಗಳು ತುಂಬಿ ಬಂದವು.

ಈ ಸಂದರ್ಭದಲ್ಲಿ ಶ್ರೀ. ಅಭಯ ವರ್ತಕ್ ಅವರು ದೆಹಲಿಯಲ್ಲಿ ನಡೆಯಲಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ಶ್ರೀ. ನಿತಿನ್ ಶಿಂದೆ ಅವರಿಗೆ ಆಮಂತ್ರಣ ನೀಡಿದರು.
ಈ ವೇಳೆ ಸನಾತನ ಸಂಸ್ಥೆಯ ಸಾಧಕಿಯರಾದ ಸೌ. ಸ್ಮಿತಾ ಮೈಣಕರ್, ಶ್ರೀಮತಿ ಮಧುರಾ ತೋಫಖಾನೆ, ಭಾಜಪ ನಾಯಕ ಶ್ರೀಕಾಂತ್ ತಾತ್ಯಾ ಶಿಂದೆ, ಕಾರ್ಯಕರ್ತರಾದ ಸರ್ವಶ್ರೀ ಮನೋಜ್ ಸಾಳುಂಖೆ, ಅನಿರುದ್ಧ ಕುಂಭಾರ್, ದಿಗ್ವಿಜಯ್ ಶಿಂದೆ, ಅರವಿಂದ್ ಯೇತನಾಳೆ, ಶುಭಂ ಗವಳಿ, ಗಜಾನನ್ ಮಾನೆ, ಶ್ರೀಧರ ಮೇಸ್ತ್ರಿ, ಪೈಲ್ವಾನ್ ಶಾಂತಾರಾಮ್ ಶಿಂದೆ ಮೊದಲಾದವರು ಉಪಸ್ಥಿತರಿದ್ದರು.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ