ಕುಂಭಮೇಳಕ್ಕೆ ಐದು ಪಟ್ಟು ಹೆಚ್ಚು ಭಕ್ತರು ಬರುವ ನಿರೀಕ್ಷೆ, 20 ಸಾವಿರ ಕೋಟಿ ರೂಪಾಯಿಗಳ ಕಾಮಗಾರಿಗಳಿಗೆ ಚಾಲನೆ!

ನಾಶಿಕ – ಪ್ರತೀ ನಾಶಿಕ ಕುಂಭಮೇಳಕ್ಕೆ ಲಕ್ಷಾಂತರ ಜನರು ಬರುತ್ತಾರೆ. ಆದರೆ ಈ ಬಾರಿ ಭಕ್ತರ ಸಂಖ್ಯೆ ಐದು ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಎಲ್ಲ ಭಕ್ತರ ಸುರಕ್ಷತೆ ಮತ್ತು ಸೌಕರ್ಯಗಳ ಸರಿಯಾದ ಕಾಳಜಿಯನ್ನು ತೆಗೆದುಕೊಳ್ಳಲಾಗುವುದು. ಆ ನಿಟ್ಟಿನಲ್ಲಿ 20 ಸಾವಿರ ಕೋಟಿ ರೂಪಾಯಿಗಳ ಕಾಮಗಾರಿಗಳು ಆರಂಭವಾಗಿವೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಮಾಹಿತಿ ನೀಡಿದರು. 2027 ರಲ್ಲಿ ನಡೆಯಲಿರುವ ಸಿಂಹಸ್ಥ ಕುಂಭಮೇಳಕ್ಕಾಗಿ ರಾಜ್ಯಸರಕಾರದಿಂದ ಬೃಹತ್ ಪ್ರಮಾಣದಲ್ಲಿ ಸಿದ್ಧತೆಗಳನ್ನು ಪ್ರಾರಂಭಿಸಲಾಗಿದೆ. ಆ ಹಿನ್ನೆಲೆಯಲ್ಲಿ ವಿವಿಧ ಕಾಮಗಾರಿಗಳ ಭೂಮಿಪೂಜೆಯ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.
1. ಕುಂಭಮೇಳದ ಲಾಂಛನಕ್ಕಾಗಿ ಸ್ಪರ್ಧೆಯನ್ನು ಘೋಷಿಸಲಾಗಿದೆ. ನವೆಂಬರ್ 20 ರಿಂದ ಡಿಸೆಂಬರ್ 20 ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದು. ಲಾಂಛನ ಸ್ಪರ್ಧೆಗೆ ಮೊದಲ ಬಹುಮಾನ 3 ಲಕ್ಷ ರೂಪಾಯಿಗಳಿವೆ.
2. ನಾಶಿಕ ಮತ್ತು ತ್ರ್ಯಂಬಕೇಶ್ವರದಲ್ಲಿ ನಡೆಯುವ ಸಿಂಹಸ್ಥ ಕುಂಭಮೇಳವನ್ನು ಗಮನದಲ್ಲಿಟ್ಟುಕೊಂಡು ಸರಕಾರವು ಅಲ್ಪಾವಧಿ ಮತ್ತು ದೀರ್ಘಾವಧಿ ಅಭಿವೃದ್ಧಿ ಯೋಜನೆಯ ರೂಪುರೇಷೆ ಸಿದ್ಧಪಡಿಸಿದೆ. ಇದರ ಅಡಿಯಲ್ಲಿ ರಸ್ತೆಗಳು, ನೀರು ಸರಬರಾಜು, ಒಳಚರಂಡಿ, ಸ್ವಚ್ಛತೆ, ಸಂಚಾರ, ಭದ್ರತೆ ಮತ್ತು ಸಾಧುಸಂತರ ನಿವಾಸ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯಗಳಿಗಾಗಿ ಒಟ್ಟು 5 ಸಾವಿರ 757 ಕೋಟಿ ರೂಪಾಯಿಗಳ ಹಂಚಿಕೆ ಮಾಡಲಾಗಿದೆ.
ನಾಶಿಕದ ರೂಪುರೇಷೆ ಬದಲಿಸುವ ಅವಕಾಶ!
ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಮಾತನಾಡಿ, ಕುಂಭಮೇಳದಿಂದಾಗಿ ನಾಶಿಕದ ಚಿತ್ರಣವನ್ನೇ ಬದಲಾಯಿಸುವ ದೊಡ್ಡ ಅವಕಾಶ ದೊರೆತಿದೆ. ಈ ಅಭಿವೃದ್ಧಿ ಕಾಮಗಾರಿಗಳಿಂದ ನಗರವು ಸ್ವಚ್ಛ, ಸುಂದರ ಮತ್ತು ಆಧುನಿಕವಾಗಲಿದೆ. ರಾಮಕುಂಡ ಮತ್ತು ಗೋದಾವರಿ ನದಿ ಪ್ರದೇಶದಲ್ಲಿ ಸ್ವಚ್ಛತೆ ಮತ್ತು ನೀರಿನ ಶುದ್ಧೀಕರಣದ ಮೇಲೆ ವಿಶೇಷ ಒತ್ತು ನೀಡಲಾಗುವುದು ಎಂದು ಹೇಳಿದರು.
1 ಸಾವಿರದ 400 ಎಕರೆ ಪ್ರದೇಶದಲ್ಲಿ ಸಾಧುಗ್ರಾಮ, ಭಕ್ತರಿಗೆ ಸುಸಜ್ಜಿತ ವ್ಯವಸ್ಥೆ!
ಕುಂಭಮೇಳದಲ್ಲಿ 1 ಸಾವಿರದ 400 ಎಕರೆ ಪ್ರದೇಶದಲ್ಲಿ ಸಾಧುಗ್ರಾಮವನ್ನು ನಿರ್ಮಿಸಲಾಗುವುದು. ಇಲ್ಲಿ ದೇಶಾದ್ಯಂತ ಆಗಮಿಸುವ ಸಾಧು-ಸಂತರಿಗೆ ಎಲ್ಲ ಸೌಕರ್ಯಗಳೊಂದಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಈ ತ್ರಿಖಂಡಿ ಕುಂಭಮೇಳವು 22 ತಿಂಗಳುಗಳ ಕಾಲ ನಡೆಯಲಿದೆ. ಲಕ್ಷಾಂತರ ಭಕ್ತರು ಮತ್ತು ಸಾಧುಸಂತರ ವ್ಯವಸ್ಥೆಗಾಗಿ ಆಡಳಿತವು ಯೋಜನೆಯೊಂದಿಗೆ ಸಿದ್ಧತೆ ಮಾಡುವುದು ಅವಶ್ಯಕವಾಗಿದೆ. ಪ್ರಯಾಗರಾಜ ಕುಂಭಮೇಳದ ಅನುಭವವನ್ನು ನಾವು ಬಳಸಿಕೊಳ್ಳಲಿದ್ದೇವೆ, ಎಂದು ಉಪಮುಖ್ಯಮಂತ್ರಿಗಳು ಹೇಳಿದರು.
ಡಿಜಿಟಲ್ ಕುಂಭ ಮತ್ತು ಕೃತಕ ಬುದ್ಧಿಮತ್ತೆ ನಿರ್ವಹಣೆ!
ಮುಖ್ಯಮಂತ್ರಿ ಫಡಣವೀಸ್ ಅವರು ಕುಂಭಮೇಳದ ಪ್ರಚಾರಕ್ಕಾಗಿ ‘ಡಿಜಿಟಲ್ ಕುಂಭ’ ಎಂಬ ಹೊಸ ಪರಿಕಲ್ಪನೆಯನ್ನು ಘೋಷಿಸಿದ್ದಾರೆ. ಇದರ ಅಡಿಯಲ್ಲಿ ಎಲ್ಲ ಮಾಹಿತಿಯನ್ನು ಡಿಜಿಟಲ್ ಮಾಧ್ಯಮಗಳ ಮೂಲಕ ಭಕ್ತರಿಗೆ ತಲುಪಿಸಲಾಗುವುದು, ಎಂದು ಹೇಳಿದರು. ಉಪಮುಖ್ಯಮಂತ್ರಿಗಳು ಮಾತನಾಡಿ, ಜನಸಂದಣಿ ನಿಯಂತ್ರಣ ಮತ್ತು ಕಾನೂನು ಸುವ್ಯವಸ್ಥೆಗಾಗಿ ಕೃತಕ ಬುದ್ಧಿಮತ್ತೆಯನ್ನು ಬಳಸಲಾಗುವುದು. ತಂತ್ರಜ್ಞಾನದ ಸಹಾಯದಿಂದ ವದಂತಿಗಳು ಮತ್ತು ತಪ್ಪು ಮಾಹಿತಿಯನ್ನು ತಡೆದು ಸರಿಯಾದ ಮಾಹಿತಿಯ ಪ್ರಸಾರವಾಗಲಿದೆ,” ಎಂದು ಹೇಳಿದರು.
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ