ದೆಹಲಿ ಬಾಂಬ್ ಸ್ಫೋಟ ಪ್ರಕರಣ: ಭಯೋತ್ಪಾದಕನ ನಿವಾಸವನ್ನು ನೆಲಸಮಗೊಳಿಸಿದ(ಧ್ವಂಸಗೊಳಿಸಿದ) ಭದ್ರತಾ ಪಡೆ : Delhi Bomb Blast

ನವದೆಹಲಿ – ದೆಹಲಿಯ ಕೆಂಪು ಕೋಟೆಯ ಬಳಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಡಾ. ಉಮರ್ ನವಿಯ ಪುಲ್ವಾಮಾದ ಮನೆಯನ್ನು ಭದ್ರತಾ ಪಡೆಗಳು ನವೆಂಬರ್ 13 ರ ರಾತ್ರಿ ಸ್ಫೋಟಿಸಿ ನೆಲಸಮಗೊಳಿಸಿದರು. ನವೆಂಬರ್ 13 ರಂದು ಸ್ಫೋಟಗೊಂಡ ವಾಹನವನ್ನು ಡಾ. ಉಮರ್ ಚಾಲನೆ ಮಾಡುತ್ತಿರುವುದು ದೃಢಪಟ್ಟ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಇದುವರೆಗೂ ಬಂಧಿಸಲಾದ 8 ಭಯೋತ್ಪಾದಕರು, ಬಾಬರಿ ಮಸೀದಿ ಧ್ವಂಸದ ಸೇಡು ತೀರಿಸಿಕೊಳ್ಳಲು ಡಿಸೆಂಬರ್ 6 ರಂದು ದೆಹಲಿ ಸೇರಿದಂತೆ ದೇಶದ ವಿವಿಧೆಡೆ ಬಾಂಬ್ ಸ್ಫೋಟಗಳನ್ನು ನಡೆಸಲು ತಾವು ಉದ್ದೇಶಿಸಿದ್ದೇವೆ ಎಂದು ಹೇಳಿರುವುದಾಗಿ ಗುಪ್ತಚರ ಸಂಸ್ಥೆಗಳು ಬಹಿರಂಗಪಡಿಸಿವೆ. (ಇದರ ಆಧಾರದ ಮೇಲೆ, ಈಗ ಭಾರತ ಸರಕಾರವು ‘ಬಾಬರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ದೇಶದ ಎಷ್ಟು ಮುಸ್ಲಿಮರು ಒಪ್ಪುವುದಿಲ್ಲ ಎಂಬುದನ್ನು ಕಂಡುಹಿಡಿಯಬೇಕು, ಅವರನ್ನು ‘ಸಂಭಾವ್ಯ ಭಯೋತ್ಪಾದಕರು’ ಎಂದು ಪರಿಗಣಿಸಿ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಯಾರಾದರೂ ಬೇಡಿಕೆ ಇಟ್ಟರೆ, ಅದರಲ್ಲಿ ತಪ್ಪೇನು? – ಸಂಪಾದಕರು)

ಕಾಶ್ಮೀರದಲ್ಲಿ 600 ಜನರು ವಶಕ್ಕೆ

ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ದಕ್ಷಿಣ ಮತ್ತು ಮಧ್ಯ ಕಾಶ್ಮೀರದಲ್ಲಿ 600 ಕ್ಕೂ ಹೆಚ್ಚು ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. 500 ಕ್ಕೂ ಹೆಚ್ಚು ಕಡೆ ದಾಳಿಗಳನ್ನು ನಡೆಸಲಾಗಿದೆ. ಪುಲ್ವಾಮಾ, ಶೋಪಿಯಾನ್, ಕುಲಗಾಮ್, ಅನಂತನಾಗ್, ಬಡ್ಗಾಮ್ ಮತ್ತು ಕುಪ್ವಾರಾದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿವೆ.

‘ಇಂಡಿಯನ್ ಮೆಡಿಕಲ್ ಅಸೋಸಿಯೇಷನ್’ ನಿಂದ ಭಯೋತ್ಪಾದಕಿ ಡಾ. ಶಾಹೀನ್ ನ ಸದಸ್ಯತ್ವ ರದ್ದು

ದೆಹಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತರಾದ ಡಾ. ಶಾಹೀನ್ ಮೇಲೆ ದೊಡ್ಡ ಕ್ರಮ ಕೈಗೊಳ್ಳಲಾಗಿದೆ. ‘ಇಂಡಿಯನ್ ಮೆಡಿಕಲ್ ಅಸೋಸಿಯೇಷನ್’ ಡಾ. ಶಾಹೀನ್ ನ ಜೀವಮಾನ ಸದಸ್ಯತ್ವವನ್ನು ರದ್ದುಗೊಳಿಸಿದೆ. ಈ ಮಾಹಿತಿಯನ್ನು ಕೇಂದ್ರ ಕಚೇರಿಗೂ ಕಳುಹಿಸಲಾಗಿದೆ.