ತಾಲಿಬಾನ್‌ನಿಂದ ಆಫ್ಘಾನ್ ವ್ಯಾಪಾರಿಗಳಿಗೆ ಆದೇಶ !

ಇಸ್ಲಾಮಾಬಾದ್ (ಪಾಕಿಸ್ತಾನ) / ಕಾಬೂಲ್ (ಅಫ್ಘಾನಿಸ್ತಾನ) – ಅಫ್ಘಾನಿಸ್ತಾನದೊಂದಿಗೆ ನಡೆಯುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ತಾಲಿಬಾನ್ ಪಾಕಿಸ್ತಾನದೊಂದಿಗಿನ ವ್ಯಾಪಾರವನ್ನು ನಿಲ್ಲಿಸಲು ಸಿದ್ಧತೆ ನಡೆಸಿದೆ. ಮುಂದಿನ 3 ತಿಂಗಳೊಳಗೆ ಪಾಕಿಸ್ತಾನದೊಂದಿಗಿನ ಎಲ್ಲಾ ವ್ಯಾಪಾರವನ್ನು ನಿಲ್ಲಿಸುವಂತೆ ಎಲ್ಲಾ ಆಫ್ಘಾನ್ ವ್ಯಾಪಾರಿಗಳಿಗೆ ನಿರ್ದೇಶನ ನೀಡಿದೆ. ತಾಲಿಬಾನ್‌ನ ಆರ್ಥಿಕ ವ್ಯವಹಾರಗಳ ಉಪ ಪ್ರಧಾನ ಮಂತ್ರಿ ಮುಲ್ಲಾ ಅಬ್ದುಲ್ ಗನಿ ಬರಾದರ್ ಅವರು ವ್ಯಾಪಾರಿಗಳು ಮತ್ತು ಹಣಕಾಸು ಸಚಿವಾಲಯದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ನಿರ್ದೇಶನ ನೀಡಿದ್ದಾರೆ. ಅಲ್ಲದೆ, ವ್ಯಾಪಾರಕ್ಕಾಗಿ ಪಾಕಿಸ್ತಾನದ ಬದಲಿಗೆ ಪರ್ಯಾಯ ಮಾರ್ಗಗಳನ್ನು ಹುಡುಕಲು ಸಹ ತಿಳಿಸಿದ್ದಾರೆ. ಇದರೊಂದಿಗೆ, ಪಾಕಿಸ್ತಾನದಿಂದ ಔಷಧಿಗಳನ್ನು ಆಮದು ಮಾಡಿಕೊಳ್ಳಲು ಯಾರಿಗೂ ಅನುಮತಿ ನೀಡಬಾರದು ಎಂದೂ ನಿರ್ದೇಶಿಸಿದ್ದಾರೆ. ಈ ಹೇಳಿಕೆಯ ನಂತರ ಪಾಕಿಸ್ತಾನದಲ್ಲಿ ಕೋಲಾಹಲ ಉಂಟಾಗಿದೆ.
‘ಪಾಕಿಸ್ತಾನಕ್ಕೆ ಲಾಭವೇ ಆಗುತ್ತದೆ!’ – ಪಾಕಿಸ್ತಾನದ ರಕ್ಷಣಾ ಮಂತ್ರಿಯ ಸುಳ್ಳು ಹೇಳಿಕೆ
ಮತ್ತೊಂದೆಡೆ, ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ‘ಅಫ್ಘಾನಿಸ್ತಾನದೊಂದಿಗಿನ ವ್ಯಾಪಾರ ನಿಂತರೆ ಪಾಕಿಸ್ತಾನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ. ಅವರು, ಅಫ್ಘಾನಿಸ್ತಾನದಿಂದ ಬರುವ ಸರಕುಗಳಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಯಾವುದೇ ಅಗತ್ಯವಿಲ್ಲ. ಅಫ್ಘಾನಿಸ್ತಾನದಿಂದ ಬರುವ ವ್ಯಾಪಾರ ಕಡಿಮೆಯಾದಾಗ, ಅದರ ಮೂಲಕ ಪಾಕಿಸ್ತಾನಕ್ಕೆ ಬರುವ ಭಯೋತ್ಪಾದಕರು ಕಡಿಮೆಯಾಗುತ್ತಾರೆ. ಇದರಿಂದ ಪಾಕಿಸ್ತಾನಕ್ಕೆ ಲಾಭವಾಗುತ್ತದೆ ಎಂದಿದ್ದಾರೆ.
ಪಾಕಿಸ್ತಾನದ ರಕ್ಷಣಾ ಮಂತ್ರಿಗೇ ಕಪಾಳ ಮೋಕ್ಷ!
ಕಳೆದ 4 ವರ್ಷಗಳಲ್ಲಿ ಪಾಕಿಸ್ತಾನವು ಅಫ್ಘಾನಿಸ್ತಾನದಲ್ಲಿನ ಶೇ. 65 ರಷ್ಟು ಮಾರುಕಟ್ಟೆಯನ್ನು ಕಳೆದುಕೊಂಡಿದೆ! – ಪಾಕಿಸ್ತಾನದ ವ್ಯಾಪಾರಿ ನಾಯಕರು
ಪಾಕಿಸ್ತಾನದ ‘ಸರ್ಹದ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್’ನ ಮಾಜಿ ಹಿರಿಯ ಉಪಾಧ್ಯಕ್ಷ ಇಂಜಿನಿಯರ್ ಮಂಜೂರ್ ಇಲಾಹಿ ಅವರು ಈ ಸಂಬಂಧದಲ್ಲಿ ಬಹಳ ಮುಖ್ಯ ಅಂಶಗಳನ್ನು ಪ್ರಸ್ತಾಪಿಸಿ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರಿಗೆ ಸ್ವಪಕ್ಷೀಯ ಟೀಕೆ ಮಾಡಿದ್ದಾರೆ. ಅವರು,
1. ಅಫ್ಘಾನಿಸ್ತಾನದೊಂದಿಗಿನ ವ್ಯಾಪಾರ ಸ್ಥಗಿತಗೊಂಡರೆ ಪಾಕಿಸ್ತಾನಕ್ಕೆ ಹೆಚ್ಚು ನಷ್ಟವಾಗುತ್ತದೆ. ಪಾಕಿಸ್ತಾನವು ಅಫ್ಘಾನಿಸ್ತಾನಕ್ಕೆ ಔಷಧಿಗಳನ್ನು ಪೂರೈಸುತ್ತದೆ; ಆದರೆ ಇರಾನ್ ಮತ್ತು ಭಾರತವು ಅವರಿಗೆ ಕಡಿಮೆ ಬೆಲೆಗೆ ಔಷಧಿಗಳನ್ನು ಪೂರೈಸುತ್ತವೆ.
2. ಉಜ್ಬೇಕಿಸ್ತಾನ್ ಮತ್ತು ರಷ್ಯಾ ಅಫ್ಘಾನಿಸ್ತಾನಕ್ಕೆ ಸಕ್ಕರೆಯನ್ನು ಪೂರೈಸುತ್ತವೆ. ಅಫ್ಘಾನಿಸ್ತಾನಕ್ಕೆ ಪಾಕಿಸ್ತಾನದ ಯಾವುದೇ ಅಗತ್ಯವಿಲ್ಲ; ಆದರೆ ನಮಗೆ ಅವರ ಅಗತ್ಯವಿದೆ.
3. ಇರಾನ್ ಮತ್ತು ಟರ್ಕಿ ಅಫ್ಘಾನಿಸ್ತಾನದಲ್ಲಿ ನಮ್ಮ ಮಾರುಕಟ್ಟೆಯ ಮೇಲೆ ನಿಯಂತ್ರಣ ಸಾಧಿಸಿವೆ. ಅಫ್ಘಾನಿಸ್ತಾನ ಈಗ ಉಜ್ಬೇಕಿಸ್ತಾನ್, ತಜಿಕಿಸ್ತಾನ್, ರಷ್ಯಾ ಮತ್ತು ಉಕ್ರೇನ್‌ನಿಂದ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ. ಕಳೆದ 4 ವರ್ಷಗಳಲ್ಲಿ ಪಾಕಿಸ್ತಾನವು ಈಗಾಗಲೇ ಅಫ್ಘಾನಿಸ್ತಾನದಲ್ಲಿನ 65 ಪ್ರತಿಶತ ಮಾರುಕಟ್ಟೆಯನ್ನು ಕಳೆದುಕೊಂಡಿದೆ.
4. ಪಾಕಿಸ್ತಾನ ಕೇವಲ ಆಫ್ಘನ್ ಮಾರುಕಟ್ಟೆಯನ್ನಷ್ಟೇ ಅಲ್ಲ, ಮಧ್ಯ ಏಷ್ಯಾದ ಮಾರುಕಟ್ಟೆಗಳನ್ನೂ ಕಳೆದುಕೊಳ್ಳಲಿದೆ.
ಸಂಪಾದಕೀಯ ನಿಲುವು
|
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation