ದೆಹಲಿಯ ಬಾಂಬ್ ಸ್ಫೋಟ ಪ್ರಕರಣ

ಮುಂಬ್ರಾ (ಠಾಣೆ ಜಿಲ್ಲೆ) – ಮಹಾರಾಷ್ಟ್ರ ಭಯೋತ್ಪಾದನಾ ವಿರೋಧಿ ದಳವು ಇಲ್ಲಿ 4 ಮನೆಗಳ ಮೇಲೆ ದಾಳಿ ನಡೆಸಿ 2 ಜನರನ್ನು ವಶಕ್ಕೆ ತೆಗೆದುಕೊಂಡಿದೆ. ಇವರಲ್ಲಿ ಇಬ್ರಾಹಿಂ ಆಬಿದಿ ಎಂಬುವವರು ಒಬ್ಬನ ಹೆಸರಾಗಿದೆ. ಈ ವೇಳೆ ದಳವು ಮೊಬೈಲ್ ಫೋನ್ ಮತ್ತು ಹಾರ್ಡ್‌ಡಿಸ್ಕ್‌ಗಳನ್ನು ಜಪ್ತಿ ಮಾಡಿದೆ. ಇವರ ಮೇಲೆ ‘ಅಲ್-ಖೈದಾ’ ಜೊತೆ ಸಂಬಂಧ ಹೊಂದಿರುವ ಸಂದೇಹ ಇದೆ. ಆಬಿದಿ ಶಿಕ್ಷಕರಾಗಿದ್ದು, ಇಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾನೆ ಎಂದು ತಿಳಿದುಬಂದಿದೆ. ಅವನು ಕುರ್ಲಾದ ಮಸೀದಿಯೊಂದರಲ್ಲಿ ಉರ್ದು ಕಲಿಸಲು ಹೋಗುತ್ತಿದ್ದನು. ಆಬಿದಿಗೆ 3 ಮಕ್ಕಳಿದ್ದಾರೆ. ಬಂಧಿತರಲ್ಲಿ ಒಬ್ಬರು ಸಾಫ್ಟ್‌ವೇರ್ ಇಂಜಿನಿಯರ್ ಎಂದು ತಿಳಿದುಬಂದಿದೆ. ಕುರ್ಲಾದಲ್ಲಿ ಆಬಿದಿಯ ಎರಡನೇ ಪತ್ನಿ ವಾಸವಾಗಿದ್ದು, ಅವಳ ಮನೆ ಮೇಲೆಯೂ ಭಯೋತ್ಪಾದನಾ ವಿರೋಧಿ ದಳವು ದಾಳಿ ನಡೆಸಿತು. ಈ ದಳದಲ್ಲಿ 12 ಭಯೋತ್ಪಾದನಾ ವಿರೋಧಿ ದಳದ ಪೊಲೀಸ್ ಅಧಿಕಾರಿಗಳು ಮತ್ತು 3 ಸ್ಥಳೀಯ ಪೊಲೀಸರು ಇದ್ದರು.
Two suspects detained by Anti-Terrorism Squad in Mumbra, Thane District
Connection to Delhi bomb blast case#RedFort https://t.co/CwdyisNdHr
— Sanatan Prabhat (@SanatanPrabhat) November 13, 2025
ಶಂಕಿತ ಭಯೋತ್ಪಾದಕ ಆಬಿದಿಯ ಪತ್ನಿಯ ಉದ್ಧಟತನ!
‘ಎಲ್ಲಾ ಭಯೋತ್ಪಾದಕರು ಸರಕಾರದ ಬೆಂಬಲವಿಲ್ಲದೆ ಇರಲು ಸಾಧ್ಯವಿಲ್ಲವಂತೆ!’
‘ಟಿವಿ 9’ ಸುದ್ದಿ ವಾಹಿನಿಯ ಪತ್ರಕರ್ತರು ದಾಳಿಗೆ ಒಳಗಾದ ಶಂಕಿತ ಆಬಿದಿಯ ಮನೆಯಲ್ಲಿ ಅವನ ಪತ್ನಿಯ ಸಂದರ್ಶನವನ್ನು ತೆಗೆದುಕೊಂಡರು. ಆ ಸಮಯದಲ್ಲಿ, ಅವರು ಪತ್ನಿಗೆ ‘ಆಬಿದಿ ಅವರು ‘ಅಲ್-ಖೈದಾ’ ಜೊತೆ ಸಂಬಂಧ ಹೊಂದಿರುವುದು ಮುನ್ನೆಲೆಗೆ ಬಂದಿದೆ’ ಎಂದು ಕೇಳಿದಳು. ಅದಕ್ಕೆ ಅವರು ಅತ್ಯಂತ ಉದ್ಧಟತನದಿಂದ ಉತ್ತರಿಸಿದರು, “‘ಅಲ್-ಖೈದಾ’ ಸತ್ತುಹೋಗಿದೆ. ‘ಅಲ್-ಖೈದಾ’ ಅಸ್ತಿತ್ವದಲ್ಲಿದೆಯೇ? ನೀವೇ ಹೇಳಿ, ‘ಅಲ್-ಖೈದಾ’ ಇದೆಯೇ? ಹೌದು ಅಥವಾ ಇಲ್ಲ? ನಾನು ನಿಮ್ಮನ್ನೇ ಕೇಳುತ್ತಿದ್ದೇನೆ. ಎಲ್ಲಾ ಭಯೋತ್ಪಾದಕರಿಗೆ ಸರಕಾರದ ಬೆಂಬಲವಿರುತ್ತದೆ. ಒಂದು ವೇಳೆ ನಾವು ಅವರಲ್ಲಿ ಇದ್ದರೆ, ನಮಗೂ ಸರಕಾರದ ಬೆಂಬಲವಿರುತ್ತಿತ್ತು. ನಾವು ಮುಗ್ಧ ಜನರು. ನಮಗೆ ಯಾವುದೇ ಸಂಬಂಧವಿಲ್ಲ. ಏನಾದರೂ ಇದ್ದಿದ್ದರೆ, ನಮ್ಮ ಮನೆಯಲ್ಲಿ ಏನೂ ಸಿಗುತ್ತಿರಲಿಲ್ಲವೇ? ಈ ಆರೋಪ ತಪ್ಪು. ಅವರು ಸಾಬುಸಿದ್ದಿಕ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. 35 ವರ್ಷಗಳ ಸೇವೆ ನಂತರ ಅವರು ಈಗ ನಿವೃತ್ತರಾಗಿದ್ದಾರೆ.”
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!