
ಜೆರುಸಲೇಮ್ (ಇಸ್ರೇಲ್) – ಸ್ವತಂತ್ರ ಪ್ಯಾಲೆಸ್ತೀನ್ ರಾಷ್ಟ್ರದ ಸ್ಥಾಪನೆ ಮತ್ತು ಗಲ್ಫ್ ಪ್ರದೇಶದಲ್ಲಿ ಶಾಶ್ವತ ಶಾಂತಿಯನ್ನು ಸ್ಥಾಪಿಸುವಲ್ಲಿ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರ ದೊಡ್ಡದಾಗಿರಬಹುದು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಮೆರಿಕ ಯಾವಾಗಲೂ ಇಸ್ರೇಲ್‌ನ ಪರವಾಗಿ ‘ವೀಟೋ’ (ವಿಶೇಷಾಧಿಕಾರ) ಬಳಸುತ್ತದೆ. ಆದ್ದರಿಂದ, ಭಾರತಕ್ಕೆ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ನೀಡಬೇಕೆಂದು ಪ್ಯಾಲೆಸ್ತೀನ್ ರಾಯಭಾರಿ ಅಬ್ದುಲ್ಲಾ ಅಬು ಶಾವೇಶ್ ಅವರು ಆಗ್ರಹಿಸಿದ್ದಾರೆ.
ರಾಯಭಾರಿ ಶಾವೇಶ್ ಅವರು ಮಾತನಾಡಿ, “ಭಾರತ ನಮ್ಮ ದೊಡ್ಡಣ್ಣ. ಮೋಹನ್‌ದಾಸ್ ಗಾಂಧಿಯವರಿಂದ ಹಿಡಿದು ಪ್ರಧಾನಿ ನರೇಂದ್ರ ಮೋದಿಯವರವರೆಗೆ ಎಲ್ಲಾ ಭಾರತೀಯ ನಾಯಕರು ಪ್ಯಾಲೆಸ್ತೀನ್ ಪರವಾಗಿ ನಿಂತಿದ್ದಾರೆ” ಎಂದು ಹೇಳಿದರು.
೧. ಪ್ರಸ್ತುತ ಗಾಜಾದಲ್ಲಿ ಯುದ್ಧ ನಡೆಯುತ್ತಿಲ್ಲ, ಆದರೂ ಇಸ್ರೇಲ್‌ನ ಏಕಪಕ್ಷೀಯ ಆಕ್ರಮಣ ನಿರಂತರವಾಗಿ ನಡೆಯುತ್ತಿದೆ. ಈ ಆಕ್ರಮಣದಲ್ಲಿ ಇಲ್ಲಿಯವರೆಗೆ ಸುಮಾರು ೬೭ ಸಾವಿರ ನಿರಪರಾಧಿ ಪ್ಯಾಲೆಸ್ತೀನ್ ನಾಗರಿಕರು ಸಾವನ್ನಪ್ಪಿದ್ದಾರೆಂದು ಶಾವೇಶ್ ಹೇಳಿದರು. (ಈ ನಿರಪರಾಧಿ ಪ್ಯಾಲೆಸ್ತೀನಿಯರು ಹಮಾಸ್ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದ್ದರು. ಅವರು ನಿಜಾವಾಗಿಯೂ ನಿರಪರಾಧಿಗಳಾಗಿದ್ದರೆ ಹಮಾಸ್ ಅನ್ನು ವಿರೋಧಿಸಬೇಕಿತ್ತು! – ಸಂಪಾದಕರು)
೨. ಅಕ್ಟೋಬರ್ ೭, ೨೦೨೩ ರಂದು ಹಮಾಸ್ ಇಸ್ರೇಲ್‌ಗೆ ನುಗ್ಗಿ ನಿರಪರಾಧಿ ನಾಗರಿಕರನ್ನು ಹತ್ಯೆ ಮತ್ತು ಅಪಹರಣ ಮಾಡಿದ್ದರ ಬಗ್ಗೆ ಕೇಳಿದಾಗ, ಶಾವೇಶ್ ಅವರು, “ಅಕ್ಟೋಬರ್ ೭ ರಂದು ನಡೆದ ಘಟನೆಯನ್ನು ಸಮರ್ಥಿಸಲಾಗುವುದಿಲ್ಲ; ಆದರೆ ಆ ಘಟನೆಯ ಹೆಸರಿನಲ್ಲಿ ಕಳೆದ ೨ ವರ್ಷಗಳಿಂದ ಗಾಜಾದಲ್ಲಿ ನಡೆಯುತ್ತಿರುವ ನರಮೇಧವೂ ಸರಿಯಲ್ಲ” ಎಂದು ಹೇಳಿದರು. (ಕಳೆದ ೨ ವರ್ಷಗಳಿಂದ ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿಲ್ಲ. ಬಂಧಿತ ಕೆಲವರನ್ನು ಹತ್ಯೆ ಮಾಡಿದೆ. ಇದೇ ಕಾರಣಕ್ಕಾಗಿ ಈ ನರಮೇಧ ನಡೆಯುತ್ತಿದೆ ಎಂಬುದನ್ನು ಶಾವೇಶ್ ಯಾಕೆ ಹೇಳುತ್ತಿಲ್ಲ? – ಸಂಪಾದಕರು).
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation