ದೆಹಲಿ ಸ್ಪೋಟ : ಜಮ್ಮು ಮತ್ತು ಕಾಶ್ಮೀರದ ಮಾಜಿ ಪೊಲೀಸ್ ಮಹಾನಿರ್ದೇಶಕ ಎಸ್.ಪಿ. ವೈದ್ ಅವರ ಪ್ರತಿಕ್ರಿಯೆ

ಮಾತಾ ವೈಷ್ಣೋದೇವಿಯ ಭಕ್ತರ ದೇಣಿಗೆಯಿಂದ ಡಾಕ್ಟರ್ ಆದವರು, ಅದೇ ದೇವಿಯ ಭಕ್ತರನ್ನು ಕೊಂದರು!

ಜಮ್ಮು – ಮಾತಾ ವೈಷ್ಣೋದೇವಿಯ ಭಕ್ತರ ದೇಣಿಗೆಯಿಂದ ಡಾಕ್ಟರ್ ಆಗಿ ಹೊರಹೊಮ್ಮಿದ ಭಯೋತ್ಪಾದಕರು ಅದೇ ದೇವಿಯ ಭಕ್ತರನ್ನು ಕೊಂದಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಪೊಲೀಸ್ ಮಹಾನಿರ್ದೇಶಕ (DGP) ಎಸ್.ಪಿ. ವೈದ್ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ವೈದ್ ಅವರು ‘X’ (ಟ್ವಿಟರ್) ನಲ್ಲಿ, ದೆಹಲಿ ಸ್ಫೋಟದ ಶಂಕಿತ ಡಾ. ಉಮರ್ ನಬಿ ಕಾಶ್ಮೀರದ ಪುಲ್ವಾಮಾದ ನಿವಾಸಿಯಾಗಿದ್ದ. ಕಾಶ್ಮೀರದಲ್ಲಿ ‘ಡಾಕ್ಟರ್’ ಎಂಬ ಅತ್ಯಂತ ಪ್ರತಿಷ್ಠಿತ ವೃತ್ತಿಪರ ಪದವಿ ಪಡೆದ ನಂತರವೂ ಅವನು ಆತ್ಮಾಹುತಿ ಭಯೋತ್ಪಾದಕನಾದ. ಕತ್ರಾ ವೈದ್ಯಕೀಯ ಕಾಲೇಜಿನಲ್ಲಿ ಸುಮಾರು 70% ಸ್ಥಾನಗಳನ್ನು ಕಾಶ್ಮೀರಿ (ಮುಸ್ಲಿಂ) ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿತ್ತು ಎನ್ನಲಾಗಿದೆ. ಡಾಕ್ಟರ್ ಸ್ಥಾನಕ್ಕೆ ತಲುಪಿದ ನಂತರವೂ ಆತ್ಮಹತ್ಯಾ ಬಾಂಬರ್ ಆಗುವುದು ಅತ್ಯಂತ ದುಃಖಕರ ಸಂಗತಿಯಾಗಿದೆ.

ಮಾತಾ ವೈಷ್ಣೋದೇವಿಯ ಭಕ್ತರ ದೇಣಿಗೆಯಿಂದ ನಿರ್ಮಾಣವಾದ ಕಾಲೇಜು!

ಕತ್ರಾ ವೈದ್ಯಕೀಯ ಕಾಲೇಜಿಗೆ ‘ಶ್ರೀ ಮಾತಾ ವೈಷ್ಣೋದೇವಿ ಶ್ರೈನ್ ಬೋರ್ಡ್’ ನಿಂದ ಆರ್ಥಿಕ ನೆರವು ನೀಡಲಾಗುತ್ತದೆ. ಈ ಸಂಪೂರ್ಣ ವ್ಯವಸ್ಥೆಯನ್ನು, ಕಾಲೇಜು ಸೇರಿದಂತೆ, ದೇವಸ್ಥಾನಕ್ಕೆ ಬರುವ ಹಿಂದೂ ಯಾತ್ರಾರ್ಥಿಗಳ ದೇಣಿಗೆಯಿಂದ ನಡೆಸಲಾಗುತ್ತದೆ. ಇದೇ ಸಂಸ್ಥೆಯಿಂದ ಡಾ. ಮುಜಮ್ಮಿಲ್, ಡಾ. ಉಮರ್ ನಬಿ ಮುಂತಾದವರು ಶಿಕ್ಷಣ ಪಡೆದಿದ್ದಾರೆ. ಪ್ರಸ್ತುತ ಸಹ ಕಾಲೇಜಿನ ಪ್ರಕಟಿತ ಪ್ರವೇಶ ಪಟ್ಟಿಯಲ್ಲಿ 42 ಮುಸ್ಲಿಂ ಮತ್ತು ಕೇವಲ 8 ಹಿಂದೂ ವಿದ್ಯಾರ್ಥಿಗಳ ಹೆಸರುಗಳಿವೆ.

ಸಂಪಾದಕೀಯ ನಿಲುವು

ದೇಶದಲ್ಲಿ ಹಿಂದೂಗಳ ಹಣದಿಂದಲೇ ಮುಸಲ್ಮಾನರಿಗೆ ವಿವಿಧ ಅನುದಾನಗಳನ್ನು ನೀಡಲಾಗುತ್ತದೆ. ಮದರಸಾಗಳಿಗೂ ಹಿಂದೂಗಳ ಹಣದಿಂದಲೇ ನಿಧಿ ನೀಡಲಾಗುತ್ತದೆ. ಹಿಂದೆ ಹಜ್ ಯಾತ್ರೆಗೆಯೂ ಅನುದಾನ ನೀಡಲಾಗುತ್ತಿತ್ತು. ಜಮ್ಮು ಮತ್ತು ಕಾಶ್ಮೀರಕ್ಕೆ ಇತರ ರಾಜ್ಯಗಳಿಗೆ ಹೋಲಿಸಿದರೆ ಕೇಂದ್ರ ಸರಕಾರದಿಂದ ಅತಿ ಹೆಚ್ಚು ಹಣ ನೀಡಲಾಗುತ್ತದೆ. ಇದನ್ನೆಲ್ಲಾ ಕೊಟ್ಟರೂ ಹಿಂದೂಗಳಿಗೆ ಸಿಗುವುದು ಸಾವು, ದೇಶದ್ರೋಹ, ಮತ್ತು ದೇವಸ್ಥಾನಗಳ ಮೇಲೆ ದಾಳಿ! ಹಿಂದೂಗಳು ಈಗ ಇದರ ವಿರುದ್ಧ ಧ್ವನಿ ಎತ್ತಬೇಕಾದ ಅವಶ್ಯಕತೆ ಇದೆ!