‘ಅವರು (ಮುಸಲ್ಮಾನರು) ಹಿಂದೂಗಳಂತೆ ಹಣೆಗೆ ತಿಲಕ ಹಚ್ಚಿಕೊಂಡು ತಟ್ಟೆ ಹಿಡಿಯುವುದಿಲ್ಲ!’ – ಕಾಂಗ್ರೆಸ್ಸಿನ ಮಾಜಿ ಸಚಿವ ಆಂಜನೇಯ : Bengaluru Airport Namaz

  • ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಮಾಜ್ ಮಾಡಿದ ಮುಸಲ್ಮಾನರ ಬೆಂಬಲಕ್ಕೆ ನಿಂತ ಕಾಂಗ್ರೆಸ್ಸಿನ ಮಾಜಿ ಸಚಿವ ಆಂಜನೇಯ ಅವರ ಹೇಳಿಕೆ

  • ಮುಸಲ್ಮಾನರ ಶ್ರದ್ಧೆ ಮತ್ತು ಶಿಸ್ತಿನ ಕುರಿತು ಪ್ರಶಂಸೆ

ಹಾವೇರಿ – ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಸಲ್ಮಾನರು ಸಾಮೂಹಿಕವಾಗಿ ನಮಾಜ್ ಮಾಡಿದ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಮುಸಲ್ಮಾನರು ಸಾಲಾಗಿ ನಿಂತು ನಮಾಜ್ ಮಾಡುತ್ತಿರುವ ವೀಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ. ಇದರ ಬಗ್ಗೆ ಭಾಜಪ ತೀವ್ರ ಆಕ್ರೋಶ ವ್ಯಕ್ತಪಡಿಸಿ, ‘ವಿಮಾನ ನಿಲ್ದಾಣವನ್ನು ಮಸೀದಿ ಮಾಡಲು ಯಾರು ಅನುಮತಿ ನೀಡಿದರು?’ ಎಂದು ಪ್ರಶ್ನಿಸಿದೆ, ಹಾಗೂ ಮುಸಲ್ಮಾನರ ನಮಾಜ್ ಅನ್ನು ಸಮರ್ಥಿಸುತ್ತಾ ಕಾಂಗ್ರೆಸ್ಸಿನ ಮಾಜಿ ಸಚಿವ ಆಂಜನೇಯ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಆಂಜನೇಯ ಅವರು, ”ನೀವು ಮುಸಲ್ಮಾನರ ಶ್ರದ್ಧೆಯನ್ನು ನೋಡಿ ಕಲಿಯಬೇಕು. ಅವರು ಎಲ್ಲೇ ಇರಲಿ, ತಮ್ಮ ಮನಸ್ಸಿನ ಶಾಂತಿಗಾಗಿ ನಮಾಜ್ ಮಾಡುತ್ತಾರೆ. ಅದು ಬಸ್ ನಿಲ್ದಾಣವಾಗಿರಲಿ, ರಸ್ತೆಯಾಗಿರಲಿ ಅಥವಾ ವಿಮಾನ ನಿಲ್ದಾಣವಾಗಿರಲಿ, ಅವರು ಸಾಮೂಹಿಕ ನಮಾಜ್ ಅನ್ನು ಸರಿಯಾಗಿ ಮಾಡುತ್ತಾರೆ. ಅವರು ನಮ್ಮ ಜನರಂತೆ (ಹಿಂದೂಗಳಂತೆ) ಹಣೆಗೆ ತಿಲಕ ಹಚ್ಚಿಕೊಂಡು, ಪೂಜೆ ಮಾಡಿ ತಟ್ಟೆಯಲ್ಲಿ ದಕ್ಷಿಣೆ ಕೇಳುವುದಿಲ್ಲ. ಅವರು ಮೂರ್ಖರಲ್ಲ. ಬಹುಶಃ ಮಸೀದಿ ಲಭ್ಯವಿಲ್ಲದ ಕಾರಣ ಅವರು ವಿಮಾನ ನಿಲ್ದಾಣದಲ್ಲಿ ನಮಾಜ್ ಮಾಡಿರಬಹುದು.

ಮಾಜಿ ಸಚಿವ ಆಂಜನೇಯ ಅವರು, ನಾವು ಏಕೆ ಇಷ್ಟು ಸಂಕುಚಿತತೆಯನ್ನು ತೋರಿಸಬೇಕು ಎಂದು ಕೂಡ ಹೇಳಿದ್ದಾರೆ. ಗಣೇಶೋತ್ಸವದ ಸಮಯದಲ್ಲಿ ಮದ್ಯದ ಅಂಗಡಿಗಳು ಸಂಪೂರ್ಣ ಗಿಜಿಗುಟ್ಟಿರುತ್ತವೆ. ಗಣೇಶೋತ್ಸವದಲ್ಲಿ ಹೂವು ಮತ್ತು ಹಣ್ಣುಗಳ ವ್ಯಾಪಾರ ಆಗುವುದಿಲ್ಲ. ಮದ್ಯದ ಮಾರಾಟವೇ ಹೆಚ್ಚಾಗುತ್ತದೆ. ನಮ್ಮ ಜನರು ‘ಬಾರ್’ಗಳಲ್ಲಿ ಸಾಕಷ್ಟು (ಮದ್ಯ) ಕುಡಿದ ನಂತರ ದೇವರ ಮುಂದೆ ಬಂದು ನೃತ್ಯ ಮಾಡುತ್ತಾರೆ. (ಮುಸಲ್ಮಾನರನ್ನು ಹೊಗಳುತ್ತಾ ಹಿಂದೂಗಳ ನ್ಯೂನತೆಗಳ ಮೇಲೆ ಬೆರಳು ಇಡುವ ಕಾಂಗ್ರೆಸ್ ನಾಯಕರೇ ಹಿಂದೂಗಳ ಇಂದಿನ ಸ್ಥಿತಿಗೆ ಕಾರಣರಾಗಿದ್ದಾರೆ! – ಸಂಪಾದಕರು)

ಸಂಪಾದಕೀಯ ನಿಲುವು

  • ಸಾರ್ವಜನಿಕ ಸ್ಥಳಗಳಲ್ಲಿ ಮುಸಲ್ಮಾನರು ನಮಾಜ್ ಮಾಡಿ ಸಮಾಜಕ್ಕೆ ತೊಂದರೆ ಕೊಡುತ್ತಾರೆ, ಹಿಂದೂಗಳು ಹೀಗೆ ಮಾಡುವುದಿಲ್ಲ ಎಂಬುದನ್ನು ಆಂಜನೇಯ ಅವರು ಗಮನಿಸಬೇಕು!
  • ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಮುಸಲ್ಮಾನರ ಓಲೈಕೆ ಮಾಡಿ, ಅವರಿಗೆ ಇಸ್ಲಾಂ ಧರ್ಮದ ಪಾಲನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿತು ಮತ್ತು ಇನ್ನೊಂದೆಡೆ ಹಿಂದೂಗಳನ್ನು ಧರ್ಮ ಶಿಕ್ಷಣದಿಂದ ದೂರವಿಟ್ಟಿತು. ಈಗ ಕಾಂಗ್ರೆಸಿಗಳು ಹಿಂದೂಗಳಿಗೇ ಮುಸಲ್ಮಾನರಿಂದ ಶ್ರದ್ಧೆಯನ್ನು ಕಲಿಯಲು ಹೇಳುತ್ತಿದ್ದಾರೆ!