‘ಜೈಪುರ ಡೈಲಾಗ್ಸ್ ೨೦೨೫’ ರ ಸಮಾರೋಪ

ಜೈಪುರ (ರಾಜಸ್ಥಾನ) – ರಾಷ್ಟ್ರೀಯವಾದಿ ವಾತಾವರಣದಲ್ಲಿ ನಡೆದ ‘ಜೈಪುರ ಡೈಲಾಗ್ಸ್ ೨೦೨೫’ ರ ಮೂರು ದಿನಗಳ ವಿಚಾರ ಸಂಕಿರಣವು ನವೆಂಬರ್ ೯ ರಂದು ಮುಕ್ತಾಯಗೊಂಡಿತು. ‘ಶತ್ರು ಅರಿವು’ (ಶತ್ರುವಿನ ಅರಿವು) ಮತ್ತು ‘ಆತ್ಮ ಅರಿವು’ (ಸ್ವಯಂ ಅರಿವು) ಈ ವಿಷಯಗಳ ಮೇಲೆ ಮೂರು ದಿನಗಳಲ್ಲಿ ನಡೆದ ಒಟ್ಟು ೪೨ ಅಧಿವೇಶನಗಳಲ್ಲಿ ಚಿಂತಕರು, ರಾಜಕಾರಣಿಗಳು, ರಕ್ಷಣಾ ತಜ್ಞರು ಮತ್ತು ಹಿಂದುತ್ವವಾದಿ ನಾಯಕರು ದೇಶದ ಚಿಂತನೀಯ ವಿಷಯಗಳು, ಸಾಂಸ್ಕೃತಿಕ ಮತ್ತು ಸುರಕ್ಷತೆಗೆ ಸಂಬಂಧಿಸಿದ ನೀತಿಗಳ ಕುರಿತು ಆಳವಾದ ಚರ್ಚೆ ನಡೆಸಿದರು. ಈ ಅಧಿವೇಶನಗಳಲ್ಲಿ ಮತಾಂತರ, ಭ್ರಷ್ಟಾಚಾರ, ಶಿಕ್ಷಣ ವ್ಯವಸ್ಥೆ, ರಕ್ಷಣಾ ಅವಲಂಬನೆ ಮತ್ತು ಪರಿಕಲ್ಪನಾ ರಾಜಕಾರಣದ ಅನೇಕ ಆಯಾಮಗಳು ಬೆಳಕಿಗೆ ಬಂದವು.
🇮🇳 #TJD2025 | Day 3 – “Shatrubodh” 🔥
The Jaipur Dialogues Annual Summit 2025 (#TJD2025) concluded on 9th November 2025 after three days of intense deliberations across 42 sessions, focused on the themes #Shatrubodh (awareness of adversaries)Highlights of Day 3
🇮🇳 India’s… pic.twitter.com/armLPNjVK5— Sanatan Prabhat (@SanatanPrabhat) November 10, 2025
ಸಂಸ್ಕೃತಿಯ ವಿರುದ್ಧ ಶತ್ರು ಅರಿವು – ಇತಿಹಾಸದ ನಿಜವಾದ ಲೆಕ್ಕಪರಿಶೋಧನೆ ನಡೆಯಬೇಕು !
‘ಸಿವಿಲೈಜೇಷನ್ ಶತ್ರುಬೋಧ್’ (ಸಂಸ್ಕೃತಿಯ ವಿರುದ್ಧ ಶತ್ರು ಅರಿವು) ಅಧಿವೇಶನದಲ್ಲಿ ಡಾ. ಓಮೇಂದ್ರ ರತ್ನೂ, ಶಫಾಲಿ ವೈದ್ಯ, ಎಸ್ಥರ್ ಧನರಾಜ್, ಸಂದೀಪ್ ಬಾಲಕೃಷ್ಣ ಮತ್ತು ಕಾರ್ತಿಕ್ ಗೌರ್ ಅವರು ಐತಿಹಾಸಿಕ ಸುಳ್ಳು ಕಥಾನಕದ ವಿರುದ್ಧ ಆಗ್ರಹದ ನಿಲುವು ತಳೆದರು. ಇತಿಹಾಸದ ವಿರೂಪದಿಂದಾಗಿ ಹಿಂದೂ ಸಮಾಜಕ್ಕೆ ಅಪಾರ ಹಾನಿಯಾಗಿದೆ ಎಂದು ಅವರು ಹೇಳಿದರು. ಆದ್ದರಿಂದ ಸಾಂಸ್ಕೃತಿಕ ಹೆಮ್ಮೆಯನ್ನು ಕಾಪಾಡುವುದಕ್ಕೆ ಒತ್ತು ನೀಡುವ ಅವಶ್ಯಕತೆಯಿದೆ, ಹಾಗೆಯೇ ಹಿಂದೂಗಳ ಇತಿಹಾಸವನ್ನು ಪುನಃ ಬರೆಯುವುದು ಕಾಲದ ಅಗತ್ಯವಾಗಿದೆ.

ರಾಜಕೀಯ ಶತ್ರುಗಳು ಮತ್ತು ರಾಷ್ಟ್ರ ಒಡೆಯುವ ನೀತಿಗಳು
ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ರಾಜಕಾರಣಿಗಳ ಟೀಕೆ ಕುರಿತ ಈ ಅಧಿವೇಶನದಲ್ಲಿ ತುಹೀನ್ ಸಿನ್ಹಾ, ಪಲ್ಲವಿ ಘೋಷ್, ಅಭಿಜಿತ್ ಅಯ್ಯರ್ ಮಿತ್ರಾ, ಶೆಹಜಾದ್ ಪೂನಾವಾಲಾ, ಬಾಬಾ ರಾಮದಾಸ್, ಬಿ.ಡಿ.ಮುಂದಡಾ ಮತ್ತು ಪತ್ರಕರ್ತ ಅಭಿಷೇಕ್ ತಿವಾರಿ ಅವರು ಇತಿಹಾಸದ ಉಲ್ಲೇಖಗಳನ್ನು ನೀಡಿ ಸನಾತನ ಧರ್ಮದ ವಿರೋಧಿಗಳು ಮತ್ತು ಹಿಂದಿನ ಕಾಂಗ್ರೆಸ್ ಸರ್ಕಾರ ಹಾಗೂ ಗಾಂಧಿ ಕುಟುಂಬ ಮಾಡಿದ ಜಾತಿವಾದ, ತಾರತಮ್ಯ ಮತ್ತು ಅಸಮಾನತೆಯ ಅಂಶಗಳನ್ನು ಪ್ರಸ್ತಾಪಿಸಿ ವಿರೋಧಿಗಳನ್ನು ಬಯಲು ಮಾಡಿದರು.
ಶತ್ರುನಾಶ : ಶತ್ರುವನ್ನು ಗುರುತಿಸಿ ಮತ್ತು ನೀತಿಯನ್ನು ನಿರ್ಧರಿಸಿ
ನಾಲ್ಕನೇ ಅಧಿವೇಶನದಲ್ಲಿ ಆರ್. ಜಗನ್ನಾಥ್, ಭಾವು ತೋರ್ಸೆಕರ್, ಅವನೀಶ್ ಪಿ.ಎನ್. ಶರ್ಮಾ, ತೆಹ್ಸೀನ್ ಪೂನಾವಾಲಾ, ‘ಜೈಪುರ ಡೈಲಾಗ್ಸ್’ ಅಧ್ಯಕ್ಷ ಸಂಜಯ್ ದೀಕ್ಷಿತ್ ಮತ್ತು ಅನುಪಮ್ ಮಿಶ್ರಾ ಅವರು ಶತ್ರುಗಳನ್ನು ಗುರುತಿಸಿದ ನಂತರ ಅವರ ವಿರುದ್ಧ ನಿರ್ಣಾಯಕ, ಕಾನೂನುಬದ್ಧ ಮತ್ತು ಕಾರ್ಯತಂತ್ರದ ಉತ್ತರವನ್ನು ನೀಡುವುದಕ್ಕೆ ಒತ್ತು ನೀಡಿದರು. ಶತ್ರುವಿನ ಸಂಪೂರ್ಣ ಗುರುತಿನ ನಂತರ, ಅವರ ವಿರುದ್ಧ ಸಮನ್ವಯ ನೀತಿಯನ್ನು ರೂಪಿಸುವುದು ಅಗತ್ಯ ಎಂದು ಕೂಡ ಅಧಿವೇಶನದಲ್ಲಿ ಹೇಳಲಾಯಿತು. ಈ ಅಧಿವೇಶನದಲ್ಲಿ ‘ಡಿಜಿಟಲ್ ಅಖಂಡ ಭಾರತ’ ಉಪಕ್ರಮದ ಅಡಿಯಲ್ಲಿ ಸನಾತನ ಧರ್ಮದ ಮಾಹಿತಿಯನ್ನು ನೀಡುವ ‘ವರ್ಲ್ಡ್ ಫಾಸ್ಟ್ ಎಐ ಫಾರ್ ಸನಾತನ’ ಎಂಬ ‘ಆ್ಯಪ್’ ಅನ್ನು ಲೋಕಾರ್ಪಣೆ ಮಾಡಲಾಯಿತು.
ಆತ್ಮನಿರ್ಭರ ರಕ್ಷಣೆ : ತಂತ್ರಜ್ಞಾನ ಆಧಾರಿತ ಬದಲಾವಣೆ ಕಡ್ಡಾಯ
‘ಆತ್ಮನಿರ್ಭರ ಡಿಫೆನ್ಸ್’ ಅಧಿವೇಶನದಲ್ಲಿ ಲೆಫ್ಟಿನೆಂಟ್ ಜನರಲ್ ಡಿ.ಪಿ.ಪಾಂಡೆಯ, ಕರ್ನಲ್ ಮಯಂಕ್ ಚೌಬೆ, ಕರ್ನಲ್ ಅಜಯ್ ರೈನಾ ಮತ್ತು ಮೇಜರ್ ಜನರಲ್ ಸುಧಾಕರ್ ಜಿ. (ಎಲ್ಲರೂ ನಿವೃತ್ತ ಸೈನ್ಯಾಧಿಕಾರಿಗಳು) ಅವರು ಯುದ್ಧ ಕಲೆಯ ಬದಲಾವಣೆ ಮತ್ತು ಆಧುನಿಕ ತಂತ್ರಜ್ಞಾನದ ಬಳಕೆಗೆ ಒತ್ತು ನೀಡಿದರು. ‘ಆಪರೇಷನ್ ಸಿಂಧೂರ್’ ನಲ್ಲಿ ಗುಂಡು ಹಾರಿಸುವುದರ ಬದಲಿಗೆ ತಂತ್ರಜ್ಞಾನದ ನಿರ್ಣಾಯಕ ಬಳಕೆಯನ್ನು ಮಾಡಲಾಗಿದೆ ಮತ್ತು ನೌಕಾಪಡೆಯ ‘ಮೇಕ್ ಇನ್ ಇಂಡಿಯಾ’ ಹಡಗುಗಳ ಬಳಕೆಯ ಪಾತ್ರವು ಮುಖ್ಯವಾಗಿದೆ ಎಂದು ಅವರು ಹೇಳಿದರು. ಆಡಳಿತ ವ್ಯವಸ್ಥೆಯು ಈಗ ಮಾಜಿ ಸೈನ್ಯಾಧಿಕಾರಿಗಳ ಬೇಡಿಕೆಗಳನ್ನು ಗಂಭೀರವಾಗಿ ಅರ್ಥೈಸಿಕೊಂಡು ಸರಿಯಾದ ದಿಕ್ಕನ್ನು ಅನುಸರಿಸಬೇಕೆಂಬ ಸಂದೇಶವನ್ನು ಈ ಅಧಿವೇಶನದಿಂದ ನೀಡಲಾಯಿತು.
ಶಿಕ್ಷಣ ವಿಭಾಗ : ವಿದೇಶಿ ಶಿಕ್ಷಣದ ಬಗ್ಗೆ ಪುನರ್ ಪರಿಶೀಲನೆ ಅಗತ್ಯ
‘ಇಂಡಿಯನ್ಸ್ ಕಮಿಂಗ್ ಬ್ಯಾಕ್ ಟು ಭಾರತ್’ (ಭಾರತೀಯರು ಮತ್ತೆ ಭಾರತಕ್ಕೆ ಮರಳುವುದು) ಈ ಚರ್ಚೆಯಲ್ಲಿ ಸಂಕ್ರಾಂತ ಸಾನು, ಸಿ.ಕೆ. ರಾಜು, ರಾಜ್ ವೇದಂ ಮತ್ತು ವಿಜಯ್ ಸರ್ದಾನಾ ಅವರು, ನಮ್ಮ ಶಿಕ್ಷಣ ವ್ಯವಸ್ಥೆಯು ಮೊಘಲರು ಮತ್ತು ನಂತರ ಬ್ರಿಟಿಷರ ಕಾಲದಲ್ಲಿ ಕುಸಿಯಿತು; ಆದರೆ ಸ್ವಾತಂತ್ರ್ಯದ ನಂತರದ ೮ ದಶಕಗಳಲ್ಲಿಯೂ ನಾವು ಅದನ್ನು ಪುನಃಸ್ಥಾಪಿಸಲು ಸಾಧ್ಯವಾಗಲಿಲ್ಲ. ನಮ್ಮ ಗುರುಕುಲ ವ್ಯವಸ್ಥೆ ಕೊನೆಗೊಂಡಿದೆ. ನಮ್ಮ ಇತಿಹಾಸವು ಕೇವಲ ದುರ್ಬಲವಾಗಿಲ್ಲ, ವಿರೂಪಗೊಂಡಿದೆ ಕೂಡ. ಇದರ ಪರಿಣಾಮವಾಗಿ, ಭಾರತದ ಶೈಕ್ಷಣಿಕ ಪ್ರತಿಭೆಯು ವಿದೇಶದಲ್ಲಿ ಸಮೃದ್ಧಿಗಾಗಿ ವಲಸೆ ಹೋಗುತ್ತಿದೆ. ಚೀನಾ ಪ್ರತಿ ಕ್ಷೇತ್ರದಲ್ಲಿ ನಮ್ಮ ಅತ್ಯುತ್ತಮ ಪ್ರತಿಭೆಗಳನ್ನು ಗುರುತಿಸುತ್ತದೆ ಮತ್ತು ಅವರಿಗೆ ವಿಭಿನ್ನ ತರಬೇತಿಯನ್ನು ನೀಡಿ ‘ಸೂಪರ್ ಸ್ಪೆಷಲಿಸ್ಟ್’ ಆಗಿ ಮಾಡುತ್ತದೆ. ಇತರ ದೇಶಗಳು ಭಾರತವನ್ನು ಜಾಗತಿಕ ನಾಯಕನಾಗಿ ಗುರುತಿಸುವ ತನಕ ಭಾರತ ಆ ದಿಶೆಯಲ್ಲಿ ಕೆಲಸ ಮಾಡುವ ಅವಶ್ಯಕತೆಯಿದೆ.
ಸಮಾರೋಪ ಸಂದೇಶ : ‘ಹಿಂದೂ ಇಕೋಸಿಸ್ಟಮ್’ (ಹಿಂದೂ ವ್ಯವಸ್ಥೆ) ಕಾಲದ ಅವಶ್ಯಕತೆ !
ಮತಾಂತರದ ಕುರಿತು ಚಿಂತೆಯನ್ನು ವ್ಯಕ್ತಪಡಿಸಿದ ವಕ್ತಾರರು, ನಾವು ನಮ್ಮ ಸುತ್ತಮುತ್ತ ವಾಸಿಸುವ ಕುಟುಂಬಗಳ ಬಗ್ಗೆ ಕಾಳಜಿ ವಹಿಸಬೇಕು. ನಾವು ಅವರ ಅವಶ್ಯಕತೆಗಳು ಮತ್ತು ಸಮಸ್ಯೆಗಳನ್ನು ಗುರುತಿಸಬೇಕು ಮತ್ತು ಅವರಿಗೆ ಸರ್ಕಾರಿ ಯೋಜನೆಗಳ ಲಾಭಗಳನ್ನು ಒದಗಿಸಬೇಕು. ಈ ಅಧಿವೇಶನದಲ್ಲಿ ಅಮೀ ಗಣತ್ರಾ, ಬಾಬಾ ರಾಮದಾಸ್ ಮತ್ತು ಸಂಜಯ್ ದೀಕ್ಷಿತ್ ಅವರು ಮಕ್ಕಳಲ್ಲಿ ಶತ್ರು ಅರಿವಿನ ಭಾವನೆಯನ್ನು ನಿರ್ಮಿಸಬೇಕು ಎಂದು ಹೇಳಿದರು. ಸಾಮೂಹಿಕ ಸಭೆಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಬೇಕು. ಸಾಮಾಜಿಕ ಮಾಧ್ಯಮಗಳು ಮತ್ತು ‘ಪಾಡ್‌ಕಾಸ್ಟ್’ (ಆನ್‌ಲೈನ್ ಮಾಧ್ಯಮದ ಮೂಲಕ ಸಂದರ್ಶನಗಳನ್ನು ಪ್ರಸಾರ ಮಾಡುವುದು) ಇವುಗಳಿಂದ ಜಾಗೃತಿ ಮೂಡಿದೆ; ಆದರೆ ಈ ಜಾಗೃತಿಯನ್ನು ೧೦೦ ಪ್ರತಿಶತದವರೆಗೆ ತರಬೇಕು. ಸರ್ಕಾರದ ಮೇಲೆ ಅವಲಂಬಿತರಾಗುವ ಬದಲು ನಾವು ಸ್ವಯಂ ರಕ್ಷಣೆ ಮಾಡಬೇಕು. ನಾವು ರಕ್ಷಣಾ ಇಕೋಸಿಸ್ಟಮ್ (ವ್ಯವಸ್ಥೆ) ಅನ್ನು ನಿರ್ಮಿಸಬೇಕು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ