ಹಿಂದೂ ಸಂಘಟನೆಗಳಿಂದ ವಿರೋಧ; ನಿಯಮದ ಪ್ರಕಾರವೇ ಪ್ರವೇಶ ನಡೆದಿದೆ ಎಂದು ಮೂಲಗಳಿಂದ ಸ್ಪಷ್ಟನೆ

ಜಮ್ಮು – ಜಮ್ಮುವಿನ ಕತ್ರಾದಲ್ಲಿರುವ ‘ಶ್ರೀ ಮಾತಾ ವೈಷ್ಣೋ ದೇವಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಕ್ಸಲೆನ್ಸ್’ ವೈದ್ಯಕೀಯ ಕಾಲೇಜಿನ ಎಂಬಿಬಿಎಸ್ ಕೋರ್ಸ್‌ನ ಮೊದಲ ಪ್ರವೇಶ ಪಟ್ಟಿಯಲ್ಲಿ ಒಟ್ಟು 50 ಸೀಟುಗಳ ಪೈಕಿ 42 ಸೀಟುಗಳು ಮುಸ್ಲಿಂ ವಿದ್ಯಾರ್ಥಿಗಳಿಗೆ ಮತ್ತು ಕೇವಲ 8 ಸೀಟುಗಳು ಹಿಂದೂ ವಿದ್ಯಾರ್ಥಿಗಳಿಗೆ ಲಭಿಸಿವೆ.
ಈ ಪಟ್ಟಿ ಪ್ರಕಟವಾದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹಿಂದೂ ಟ್ರಸ್ಟ್‌ನಿಂದ ನಡೆಸಲ್ಪಡುವ ಈ ಕಾಲೇಜಿನಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಇಷ್ಟು ಕಡಿಮೆ ಸೀಟುಗಳು ಏಕೆ ಸಿಕ್ಕಿವೆ ಎಂಬ ಪ್ರಶ್ನೆಗಳು ಉದ್ಭವಿಸಿವೆ.
🚨 Discrimination in the Name of “Rules”?
At Shri Mata Vaishno Devi Medical College, 42 MBBS seats went to Muslim students, while only 8 were allotted to Hindus!
Hindu groups are opposing this blatant bias.
When temple-run institutions can’t prioritize Hindus, something is… pic.twitter.com/TkZ76bYGpM
— Sanatan Prabhat (@SanatanPrabhat) November 10, 2025
1. ಈ ವೈದ್ಯಕೀಯ ಕಾಲೇಜನ್ನು ‘ಮಾತಾ ವೈಷ್ಣೋ ದೇವಿ ಶ್ರೈನ್ ಬೋರ್ಡ್’ ನಡೆಸುತ್ತಿದೆ. ಇದು ಸಂಪೂರ್ಣವಾಗಿ ಧಾರ್ಮಿಕ ಸಂಸ್ಥೆಯಾಗಿದ್ದು, ಮಾತಾ ವೈಷ್ಣೋ ದೇವಿ ದೇವಸ್ಥಾನದ ದೇಣಿಗೆಗಳಿಂದ ಕಾಲೇಜಿನ ವೆಚ್ಚವನ್ನು ಭರಿಸಲಾಗುತ್ತದೆ.
2.ರಾಷ್ಟ್ರೀಯ ಬಜರಂಗ ದಳದ ಜಮ್ಮು ಅಧ್ಯಕ್ಷರಾದ ರಾಕೇಶ್ ಬಜರಂಗಿ ಅವರು ಇದನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಇದು ತಾರತಮ್ಯದ ನಿರ್ಧಾರ ಎಂದು ಅವರು ಬಣ್ಣಿಸಿದ್ದಾರೆ.ಈ ವಿಷಯದಲ್ಲಿ ಉಪರಾಜ್ಯಪಾಲ ಮನೋಜ್ ಸಿನ್ಹಾ ಅವರು ಹಸ್ತಕ್ಷೇಪ ಮಾಡಬೇಕೆಂದು ಅವರು ಆಗ್ರಹಿಸಿದರು.
ಪ್ರವೇಶ ಪ್ರಕ್ರಿಯೆ ಮತ್ತು ನಿಯಮ
‘ನೀಟ್’ (NEET) ಪರೀಕ್ಷೆಯ ಮೂಲಕ ದೇಶಾದ್ಯಂತ ವೈದ್ಯಕೀಯ ಕಾಲೇಜುಗಳಿಗಾಗಿ ಪ್ರವೇಶ ನಡೆಯುವುದರಿಂದ, ಪ್ರವೇಶವು ಕೇವಲ ಅಂಕಗಳು ಮತ್ತು ಗುಣಮಟ್ಟವನ್ನು ಆಧರಿಸಿದೆ. ಅದರಲ್ಲಿ ಧರ್ಮ ಅಥವಾ ಯಾವುದೇ ಧಾರ್ಮಿಕ ಗುರುತಿನ ಅಂಶ ಬರುವುದಿಲ್ಲ. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಅರ್ಧದಷ್ಟು ಸೀಟುಗಳನ್ನು ‘ಅಖಿಲ ಭಾರತ ಕೋಟಾ’ (All India Quota) ಮತ್ತು ಉಳಿದರ್ಧ ‘ರಾಜ್ಯ ಕೋಟಾ’ (State Quota) ಅಡಿಯಲ್ಲಿ ಭರ್ತಿ ಮಾಡಲಾಗುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲೂ ಇದೇ ಪ್ರಕ್ರಿಯೆ ನಡೆಯುತ್ತದೆ. ಮೀಸಲಾತಿ ನೀತಿಯು ಕೇವಲ ಪರಿಶಿಷ್ಟ ಜಾತಿ, ಪಂಗಡ, ಇತರೆ ಹಿಂದುಳಿದ ವರ್ಗ ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಮಾತ್ರ ಅನ್ವಯಿಸುತ್ತದೆ. ಧಾರ್ಮಿಕ ಆಧಾರದ ಮೇಲೆ ಯಾವುದೇ ಮೀಸಲಾತಿ ಇಲ್ಲ.
ಸಂಪಾದಕೀಯ ನಿಲುವು
|
‘ಜೀವೋತ್ತಮ ವಿದ್ಯಾಪೀಠಂ’ ಸನಾತನ ಧರ್ಮದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ! – ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ ದೂರು ದಾಖಲು : ಇಬ್ಬರ ಬಂಧನ
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein