
ಗುರುಗ್ರಾಮ (ಹರಿಯಾಣ) – ಜಮ್ಮು-ಕಾಶ್ಮೀರ ಪೊಲೀಸರು ಉತ್ತರ ಪ್ರದೇಶದ ಸಹಾರನಪುರದಿಂದ ಡಾ. ಆದಿಲ್ ಅಹ್ಮದ್ ರಾಥರ್ ಎಂಬಾತನನ್ನು ಬಂಧಿಸಿದ್ದರು. ಈತ ಇಲ್ಲಿನ ಆಸ್ಪತ್ರೆಯಲ್ಲಿ ಭಯೋತ್ಪಾದಕರು ವಾಸಿಸಲು ವ್ಯವಸ್ಥೆ ಮಾಡುತ್ತಿದ್ದನು. ಆತನ ವಿಚಾರಣೆಯಿಂದ ಕಾಶ್ಮೀರದ ಅನಂತನಾಗ ಜಿಲ್ಲಾ ಆಸ್ಪತ್ರೆಯಿಂದ ಒಂದು ಅಸಾಲ್ಟ್ ರೈಫಲ್ ಪತ್ತೆಯಾಯಿತು.

ಮುಂದಿನ ವಿಚಾರಣೆಯಲ್ಲಿ ಪೊಲೀಸರಿಗೆ ಆತನ ಸಹಚರನಾದ ಪುಲ್ವಾಮಾ ಜಿಲ್ಲೆಯ ಕೊಯಿಲ್ ಗ್ರಾಮದ ಡಾ. ಮುಜಮ್ಮಿಲ್ ಶಕೀಲನ ಮಾಹಿತಿ ಲಭಿಸಿತು. ಪೊಲೀಸರು ಹರಿಯಾಣದ ಫರಿದಾಬಾದನ ಒಂದು ಕೋಣೆಯ ಮೇಲೆ ದಾಳಿ ಮಾಡಿ ಡಾ. ಮುಜಮ್ಮಿಲನನ್ನು ಬಂಧಿಸಿದರು. ಅಲ್ಲಿ ಪೊಲೀಸರಿಗೆ 350 ಕೆಜಿ ‘ಅಮೋನಿಯಂ ನೈಟ್ರೇಟ್’ ಎಂಬ ಸ್ಫೋಟಕ, ಹಾಗೆಯೇ ಎ.ಕೆ.-47 ರೈಫಲ್ ಮತ್ತು 84 ಜೀವಂತ ಕಾಟ್ರಿಜ್ಡ್‌ಗಳು ದೊರೆತವು. ಡಾ. ಆದಿಲ್ ಅಹ್ಮದ್ ರಾಥರ್ ಈ ದೇಶದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುವ ಸಂಚಿನ ಪ್ರಮುಖ ಸೂತ್ರಧಾರನಾಗಿದ್ದಾನೆ. ಈ ಭಯೋತ್ಪಾದಕರು ದೆಹಲಿಗೆ ಸಮೀಪವಿರುವ ಫರಿದಾಬಾದನಲ್ಲಿಯೇ ಈ ಶಸ್ತ್ರಾಸ್ತ್ರ ಸಂಗ್ರಹವನ್ನು ಏಕೆ ಮಾಡಿದ್ದರು? ಎಂದು ಈಗ ಪೊಲೀಸರು ಶೋಧಿಸುತ್ತಿದ್ದಾರೆ.
1. ಮುಜಮ್ಮಿಲ್ ಶಕೀಲ್ ಈ ಕೋಣೆಯನ್ನು 3 ತಿಂಗಳ ಹಿಂದೆ ಬಾಡಿಗೆಗೆ ತೆಗೆದುಕೊಂಡಿದ್ದನು. ಅವನು ಅಲ್ಲಿ ವಾಸಿಸುತ್ತಿರಲಿಲ್ಲ; ಆದರೆ ಸಾಮಗ್ರಿಗಳನ್ನು ಇಟ್ಟಿದ್ದನು. ಈ ಸಾಮಗ್ರಿಗಳಲ್ಲೇ ಶಸ್ತ್ರಾಸ್ತ್ರ ಸಂಗ್ರಹ ಮತ್ತು ಆರ್. ಡಿ.ಎಕ್ಸ್. ಪತ್ತೆಯಾಗಿದೆ.
2. ಪೊಲೀಸರು ಇಬ್ಬರಿಗೆ ಸಂಬಂಧಿಸಿದ ಜಮ್ಮು-ಕಾಶ್ಮೀರದ ವೈದ್ಯಕೀಯ ಕ್ಷೇತ್ರದ ಸಂಪರ್ಕ ಜಾಲವನ್ನು ಪರಿಶೀಲಿಸುತ್ತಿದ್ದಾರೆ. ತನಿಖೆಯಲ್ಲಿ, ಈ ಇಬ್ಬರೊಂದಿಗೆ ಇನ್ನೂ ಕೆಲವು ವೈದ್ಯರು ನಿಷೇಧಿತ ಜಿಹಾದಿ ಭಯೋತ್ಪಾದಕ ಸಂಘಟನೆಗಳೊಂದಿಗೆ, ವಿಶೇಷವಾಗಿ ಜೈಶ್-ಎ-ಮೊಹಮ್ಮದ್‌ನೊಂದಿಗೆ ಸಂಬಂಧ ಹೊಂದಿರಬಹುದು ಎಂಬ ಸುಳಿವುಗಳು ಲಭಿಸುತ್ತಿವೆ. ತನಿಖೆಯ ನಂತರ ಈ ಪ್ರಕರಣದಲ್ಲಿ ಇನ್ನೂ ಕೆಲವರನ್ನು ಬಂಧಿಸುವ ಸಾಧ್ಯತೆಯಿದೆ.

ಮಹಿಳಾ ವೈದ್ಯೆ ಶಾಹಿನ್ ಶಾಹಿದ್ ಕೂಡ ಬಂಧನ!ಈ ಪ್ರಕರಣದಲ್ಲಿ ಡಾ. ಮುಜಮ್ಮಿಲ್ ಅವರ ಗೆಳತಿ ಡಾ. ಶಾಹಿನ್ ಶಾಹಿದ್ ಅವರನ್ನು ಲಕ್ಷ್ಮಣಪುರಿ (ಉತ್ತರ ಪ್ರದೇಶ) ದಿಂದ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಅವರ ಕಾರಿನಲ್ಲಿ ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚಿದ್ದರು. |
#WATCH | On a large quantity of IED-making material & ammunition recovered by J&K Police during investigation from Faridabad, Faridabad CP Satender Kumar says, “One assault rifle with 3 magazines and 83 live rounds, one pistol with 8 live rounds, two empty cartidges, two… pic.twitter.com/eBBKkqGpI5
— ANI (@ANI) November 10, 2025
ಕಾಶ್ಮೀರದಲ್ಲಿ ಶೋಧ ಕಾರ್ಯಾಚರಣೆ !
ಇಬ್ಬರೂ ವೈದ್ಯರನ್ನು ಬಂಧಿಸಿದ ನಂತರ, ಜಮ್ಮು-ಕಾಶ್ಮೀರ ಪೊಲೀಸರು ದೊಡ್ಡ ಪ್ರಮಾಣದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ನವೆಂಬರ್ 9 ರಂದು ಕಾಶ್ಮೀರ ಕಣಿವೆಯ ವಿವಿಧ ಸ್ಥಳಗಳಲ್ಲಿ ನಡೆಸಿದ ಶೋಧದ ಸಮಯದಲ್ಲಿ ಒಬ್ಬ ಮಹಿಳೆ ಸೇರಿದಂತೆ 9 ಜನರನ್ನು ಬಂಧಿಸಲಾಗಿದೆ.
ದೆಹಲಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿ ಗುರಿಯಾಗಿತ್ತು!![]() ಮೂಲಗಳ ಮಾಹಿತಿಯ ಪ್ರಕಾರ, ದೊಡ್ಡ ಭಯೋತ್ಪಾದಕ ಸಂಚಿನ ಕಾರ್ಯಾಚರಣೆ ಮಾಡುವ ಸಿದ್ಧತೆ ನಡೆಯುತ್ತಿತ್ತು. ಈ ಸಂಚಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿಯನ್ನು ಗುರಿ ಮಾಡುವ ಆಲೋಚನೆ ಇತ್ತು. |
ಇದುವರೆಗೆ 7 ಜನರನ್ನು ಬಂಧಿಸಲಾಗಿದೆ !
ಈ ಸಂಪೂರ್ಣ ಪ್ರಕರಣದಲ್ಲಿ ಜಮ್ಮು-ಕಾಶ್ಮೀರ, ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳಿಂದ 7 ಜನರನ್ನು ಬಂಧಿಸಲಾಗಿದೆ. ಅದರಲ್ಲಿ ಆರಿಫ್ ನಿಸಾರ್ ಡಾರ್ ಉರ್ಫ್ ಸಾಹಿಲ್ (ನವಗಾಮ, ಶ್ರೀನಗರ), ಯಾಸಿರ್-ಉಲ್-ಅಶ್ರಫ್ (ನವಗಾಮ, ಶ್ರೀನಗರ), ಮಕ್ಸೂದ ಅಹ್ಮದ್ ಡಾರ್ ಉರ್ಫ್ ಶಾಹಿದ (ನವಗಾಮ, ಶ್ರೀನಗರ), ಮೌಲವಿ (ಇಸ್ಲಾಂ ಧಾರ್ಮಿಕ ನಾಯಕ) ಇರ್ಫಾನ್ ಅಹ್ಮದ್ (ಶೋಪಿಯಾದ ಮಸೀದಿಯ ಇಮಾಮ್ (ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸುವವರು), ಜಮೀರ್ ಅಹ್ಮದ್ ಅಹಂಗರ್ ಅಲಿಯಾಸ್ ಮುತಲಾಶಾ (ವಾಕುರಾ, ಗಾಂದರಬಲ್), ಡಾ. ಮುಜಮ್ಮಿಲ್ ಅಹ್ಮದ್ ಗನಾಯಿ ಅಲಿಯಾಸ್ ಮುಸೈಬ್ (ಕೊಯಿಲ್, ಪುಲವಾಮಾ) ಮತ್ತು ಡಾ. ಆದಿಲ (ವಾನಪೋರಾ, ಕುಲಗಾಮ್) ಇವರು ಸೇರಿದ್ದಾರೆ. ಅವರ ಪೈಕಿ ಮುಜಮ್ಮಿಲ್ ಮತ್ತು ಆದಿಲ್ ರನ್ನು ಫರಿದಾಬಾದನಲ್ಲಿ ಬಂಧಿಸಲಾಗಿದೆ.
ಫರಿದಾಬಾದ ಸಮೀಪದ ಗ್ರಾಮದಿಂದ 2 ಸಾವಿರ 563 ಕೆಜಿ ಸ್ಫೋಟಕ ಜಪ್ತಿ
ಈ ಪ್ರಕರಣದಲ್ಲಿ ಡಾ. ಮುಜಮ್ಮಿಲ್ ನ ವಿಚಾರಣೆಯಲ್ಲಿ, ಫರಿದಾಬಾದನಿಂದ 4 ಕಿ.ಮೀ. ದೂರದಲ್ಲಿರುವ ಫತೇಪುರ ತಗಾ ಗ್ರಾಮದಲ್ಲಿಯೂ ಮುಜಮ್ಮಿಲ ಬಾಡಿಗೆಗೆ ಮನೆ ತೆಗೆದುಕೊಂಡಿದ್ದನು ಎಂಬ ಮಾಹಿತಿ ಲಭಿಸಿದ ನಂತರ ಪೊಲೀಸರು ಅಲ್ಲಿ ದಾಳಿ ಮಾಡಿದರು. ಅಲ್ಲಿಯೂ ಪೊಲೀಸರಿಗೆ 2 ಸಾವಿರ 563 ಕೆಜಿ ಸ್ಫೋಟಕಗಳ ಸಂಗ್ರಹ ದೊರೆಯಿತು. ಈ ಮನೆಯು ಒಬ್ಬ ಮೌಲವಿಯದ್ದಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಜಪ್ತಿ ಮಾಡಿದ ಸ್ಫೋಟಕಗಳನ್ನು ಯಾವುದಕ್ಕಾಗಿ ಬಳಸಲು ಉದ್ದೇಶಿಸಲಾಗಿತ್ತು? ಮತ್ತು ಅದರ ಹಿಂದಿನ ಜಾಲ ಯಾವುದು? ಎಂಬ ತನಿಖೆ ನಡೆಯುತ್ತಿದೆ.
ಸ್ಫೋಟಕ್ಕಾಗಿ ‘ಅಮೋನಿಯಂ ನೈಟ್ರೇಟ್’ ಬಳಸಲು ಉದ್ದೇಶಿಸಲಾಗಿತ್ತು!‘ಅಮೋನಿಯಂ ನೈಟ್ರೇಟ್’ ಅನ್ನು ಹೊಲಗಳಲ್ಲಿ ಗೊಬ್ಬರವಾಗಿ ಬಳಸಲಾಗುತ್ತದೆ, ಹಾಗೆಯೇ ಅದನ್ನು ಗಣಿಗಳಲ್ಲಿ ಸ್ಫೋಟಗಳನ್ನು ಉಂಟುಮಾಡಲು ಕೂಡ ಬಳಸಲಾಗುತ್ತದೆ. ಭಯೋತ್ಪಾದಕರು ಇದನ್ನು ಪೆಟ್ರೋಲ್, ಡೀಸೆಲ್ ಇತ್ಯಾದಿ ಇಂಧನ ತೈಲದಲ್ಲಿ ಮಿಶ್ರಣ ಮಾಡಿ ಸ್ಫೋಟಗಳನ್ನು ಉಂಟುಮಾಡಲು ಬಳಸುತ್ತಾರೆ. ಇದನ್ನು ಸುಲಭವಾಗಿ ಎಲ್ಲಿ ಬೇಕಾದರೂ ಸಾಗಿಸಬಹುದಾದ್ದರಿಂದ ಇದರ ಬಳಕೆಯನ್ನು ಮಾಡಲಾಗುತ್ತದೆ. |
ಸಂಪಾದಕೀಯ ನಿಲುವು
|

ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ