|

ಕರ್ಣಾವತಿ (ಗುಜರಾತ್) – ಗುಜರಾತ್ ಭಯೋತ್ಪಾದಕ ನಿಗ್ರಹ ದಳವು (ಎಟಿಎಸ್) 3 ಜಿಹಾದಿ ಭಯೋತ್ಪಾದಕರನ್ನು ಬಂಧಿಸಿದೆ. ಈ ಉಗ್ರರು ಶಸ್ತ್ರಾಸ್ತ್ರಗಳ ವಿನಿಮಯಕ್ಕಾಗಿ ಗುಜರಾತಿಗೆ ಬಂದಿದ್ದರು. ಬಂಧಿತರಲ್ಲೊಬ್ಬ ಭಾಗ್ಯನಗರದ (ತೆಲಂಗಾಣ) ಸೈಯದ್ ಅಹ್ಮದ್ ಮೊಹಿಯುದ್ದೀನ್ ಎಂಬಾತನನ್ನು ಕರ್ಣಾವತಿಯಲ್ಲಿ, ಮತ್ತು ಉತ್ತರ ಪ್ರದೇಶದವರಾದ ಆಜಾದ್ ಸುಲೇಮಾನ್ ಶೇಖ್ ಹಾಗೂ ಮೊಹಮ್ಮದ್ ಸುಹೇಲ್ ಸಲೀಮ್ ಖಾನ್ ಎಂಬ ಇಬ್ಬರನ್ನು ಬನಾಸಕಾಂಠಾದಿಂದ ಬಂಧಿಸಲಾಯಿತು. ಈ ಮೂವರ ಉದ್ದೇಶವು ದೇಶಾದ್ಯಂತ ಭಯೋತ್ಪಾದಕ ಕೃತ್ಯಗಳನ್ನು ನಡೆಸುವುದಾಗಿತ್ತು. ಈ ಉಗ್ರರಿಂದ 3 ಪಿಸ್ತೂಲುಗಳು ಮತ್ತು 30 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ತನಿಖಾ ದಳವು ಈ ಕುರಿತು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿ, ಕಳೆದ ಒಂದು ವರ್ಷದಿಂದ ಈ ಮೂವರ ಮೇಲೆ ಕಣ್ಣಿಡಲಾಗಿತ್ತು ಎಂದು ಮಾಹಿತಿ ನೀಡಿದೆ. ಶಸ್ತ್ರಾಸ್ತ್ರ ಪೂರೈಸುತ್ತಿರುವಾಗಲೇ ಈ ಮೂವರನ್ನು ಬಂಧಿಸಲಾಗಿದೆ. ದೇಶದ ವಿವಿಧ ಸ್ಥಳಗಳಲ್ಲಿ ಸ್ಫೋಟಗಳನ್ನು ನಡೆಸಲು ಮತ್ತು ಭಯೋತ್ಪಾದಕ ದಾಳಿ ನಡೆಸಲು ಇವರು ಸಂಚು ರೂಪಿಸುತ್ತಿದ್ದರು.
ರಾಸಾಯನಿಕ ವಿಷದಿಂದ ಭಯೋತ್ಪಾದಕ ದಾಳಿಗೆ ಸಂಚು
ಪೊಲೀಸ್ ಉಪ ಮಹಾನಿರೀಕ್ಷಕ ಸುನಿಲ ಜೋಗಿ ಅವರು ನೀಡಿದ ಮಾಹಿತಿಯ ಪ್ರಕಾರ, ಸೈಯದ್ ಅಹ್ಮದ್ ಮೊಹಿಯುದ್ದೀನ್ ಚೀನಾದಿಂದ ಎಂಬಿಬಿಎಸ್ ಶಿಕ್ಷಣ ಪಡೆದಿದ್ದಾನೆ. ಅವನು ಭಾರತದಲ್ಲಿ ವ್ಯಾಪಕ ಹಾನಿಯನ್ನುಂಟುಮಾಡುವಂತಹ ಭಯೋತ್ಪಾದಕ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದ್ದನು. ಈತ ವಿದೇಶದಲ್ಲಿ ಅನೇಕರೊಂದಿಗೆ ಸಂಪರ್ಕ ಹೊಂದಿದ್ದನು. ಅಲ್ಲದೇ ‘ಅಬು ಖದೀಜಾ’ ಎಂಬ ಹೆಸರಿನ ಟೆಲಿಗ್ರಾಂ ಖಾತೆ ಸೇರಿಕೊಂಡಿದ್ದನು, ಈ ಟೆಲಿಗ್ರಾಂ ಖಾತೆಯು ‘ಇಸ್ಲಾಮಿಕ್ ಸ್ಟೇಟ್-ಖೋರಾಸನ್ ಪ್ರಾಂತ್’ ಎಂಬ ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದೆ ಎಂದು ಶಂಕಿಸಲಾಗಿದೆ. ‘ರಿಸಿನ್’ ಎಂಬ ಹೆಸರಿನ ಮಾರಣಾಂತಿಕ ರಾಸಾಯನಿಕ ವಿಷವನ್ನು ತಯಾರಿಸುವ ಪ್ರಕ್ರಿಯೆಯನ್ನು ಈತ ಪ್ರಾರಂಭಿಸಿದ್ದನು. ಈ ವಿಷವನ್ನು ಹರಳೆಣ್ಣೆ ಬೀಜಗಳ ಉಳಿದ ಭಾಗಗಳಿಂದ ತಯಾರಿಸಲಾಗುತ್ತದೆ. ಈ ವಿಷವನ್ನು ಶಸ್ತ್ರಾಸ್ತ್ರವಾಗಿ ಪಡೆಯಲು ಸೈಯದ್ ಅಹ್ಮದ್ ಪ್ರಯತ್ನಿಸುತ್ತಿದ್ದನು ಮತ್ತು ಅದಕ್ಕಾಗಿಯೇ ಕರ್ಣಾವತಿಗೆ ಬಂದಿದ್ದನು. ಈ ರಾಸಾಯನಿಕ ವಿಷವು ಅವನಿಗೆ ಗುಜರಾತಿನಲ್ಲಿ ಲಭ್ಯವಾಗಿತ್ತು.
ಪೊಲೀಸ್ ಉಪ ಮಹಾನಿರೀಕ್ಷಕ ಜೋಗಿ ಅವರು ಮುಂದೆ ಮಾತನಾಡಿ, ಉತ್ತರ ಪ್ರದೇಶದ ಆಜಾದ್ ಸುಲೇಮಾನ್ ಶೇಖ್ ಮತ್ತು ಮೊಹಮ್ಮದ್ ಸುಹೇಲ್ ಸಲೀಮ್ ಖಾನ್ ಈ ಇಬ್ಬರೂ ಧಾರ್ಮಿಕ ಶಿಕ್ಷಣ ಪಡೆದಿದ್ದು, ಕಟ್ಟರವಾದಿ ವಿಚಾರಧಾರೆ ಹೊಂದಿದ್ದಾರೆ ಎಂದು ತಿಳಿಸಿದರು. ಅವರ ವಿದೇಶಿ ಸಂಪರ್ಕಗಳ ಕುರಿತು ಸಹ ತನಿಖೆ ನಡೆಯುತ್ತಿದೆ.
ಈ ಇಬ್ಬರೂ ಲಕ್ಷ್ಮಣಪುರಿ, ದೆಹಲಿ ಮತ್ತು ಕರ್ಣಾವತಿಯ ಜನನಿಬಿಡ ಪ್ರದೇಶಗಳ ಮಾಹಿತಿಯನ್ನು ಸಂಗ್ರಹಿಸಿದ್ದರು. ಇವರಿಬ್ಬರ ಚಲನವಲನಗಳು ಕಾಶ್ಮೀರದಲ್ಲಿಯೂ ದಾಖಲಾಗಿವೆ. ಇವರು ರಾಜಸ್ಥಾನದ ಹನುಮಾನಗಢದಿಂದ ಕೆಲವು ಸಾಮಗ್ರಿಗಳನ್ನು ತಂದು ಕರ್ಣಾವತಿಯ ಕಲೋಲದಲ್ಲಿ ಇಳಿಸಿದ್ದರು ಎಂದು ತಿಳಿಸಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!