‘ಕ್ರಿಶ್ಚಿಯನ್ ವೈಯಕ್ತಿಕ ಕಾನೂನಿ’ನಲ್ಲಿ (ಕ್ರಿಶ್ಚಿಯನ್ ಪರ್ಸನಲ್ ಲಾ) ಇದಕ್ಕೆ ಯಾವುದೇ ಅವಕಾಶವಿಲ್ಲ.

ತಿರುವನಂತಪುರಂ – ಅವಿವಾಹಿತ ಕ್ರೈಸ್ತ ಯುವತಿ ತನ್ನ ತಂದೆಯಿಂದ ಜೀವನಾಂಶವನ್ನು ಕೇಳಲು ಸಾಧ್ಯವಿಲ್ಲ ಎಂದು ಕೇರಳ ಉಚ್ಚ ನ್ಯಾಯಾಲಯವು ಇತ್ತೀಚೆಗೆ ತೀರ್ಪು ನೀಡಿದೆ. ಉಚ್ಚ ನ್ಯಾಯಾಲಯವು ಕ್ರಿಶ್ಚಿಯನ್ ಪರ್ಸನಲ್ ಲಾ (ಕ್ರಿಶ್ಚಿಯನ್ ವೈಯಕ್ತಿಕ ಕಾನೂನು) ನಲ್ಲಿ ಇದಕ್ಕೆ ಯಾವುದೇ ಅವಕಾಶವಿಲ್ಲ, ಆದರೆ ‘ಮುಸ್ಲಿಂ ವೈಯಕ್ತಿಕ ಕಾನೂನು’ ಮತ್ತು ‘ಹಿಂದೂ ದತ್ತು ಮತ್ತು ನಿರ್ವಹಣಾ ಕಾಯ್ದೆ’ಯಲ್ಲಿ ಇಂತಹ ಅಧಿಕಾರ ಅಸ್ತಿತ್ವದಲ್ಲಿದೆ ಎಂದು ಸ್ಪಷ್ಟಪಡಿಸಿದೆ. 65 ವರ್ಷದ ಕ್ರೈಸ್ತ ವ್ಯಕ್ತಿಯೊಬ್ಬರು ಕುಟುಂಬ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಕುಟುಂಬ ನ್ಯಾಯಾಲಯವು ಆ ವ್ಯಕ್ತಿಯ ವಿಭಕ್ತ ಪತ್ನಿಗೆ ತಿಂಗಳಿಗೆ 20,000 ಮತ್ತು 27 ವರ್ಷದ ಅವಿವಾಹಿತ ಮಗಳಿಗೆ ತಿಂಗಳಿಗೆ 10,000 ಜೀವನಾಂಶ ನೀಡುವಂತೆ ನಿರ್ದೇಶನ ನೀಡಿತ್ತು.
1. ನನ್ನ ಮಗಳು ಅರ್ಜಿಯನ್ನು ದಾಖಲಿಸುವ ಸಮಯದಲ್ಲಿ ವಯಸ್ಕಳಾಗಿದ್ದಳು ಹಾಗಾಗಿ ಅವಳು ಜೀವನಾಂಶ ಪಡೆಯಲು ಅರ್ಹಳಲ್ಲ ಎಂದು ವಾದಿಸಿದ್ದರು. ನನ್ನ ಪತ್ನಿ ನನ್ನನ್ನು ತೊರೆದು ಹೋಗಿದ್ದಾರೆ ಮತ್ತು ಆಕೆ ಆರ್ಥಿಕವಾಗಿ ಸಶಕ್ತಳಾಗಿದ್ದಾಳೆ ಎಂದೂ ಅರ್ಜಿದಾರರು ವಾದಿಸಿದ್ದರು.
2. ಉಚ್ಚ ನ್ಯಾಯಾಲಯವು ಅರ್ಜಿಯನ್ನು ಭಾಗಶಃ ಅಂಗೀಕರಿಸಿ, ಮಗಳಿಗೆ ಮಾಸಿಕ 10,000 ರೂಪಾಯಿ ಜೀವನಾಂಶ ನೀಡುವ ಆದೇಶವನ್ನು ರದ್ದುಗೊಳಿಸಿತು. ಮಗಳು ಪ್ರೌಢಳಾಗಿದ್ದರೂ ಸಹ, ಅವಳು ದೈಹಿಕ ಅಥವಾ ಮಾನಸಿಕ ಸ್ಥಿತಿಯಿಂದಾಗಿ ತನ್ನನ್ನು ತಾನು ಪೋಷಿಸಿಕೊಳ್ಳಲು ಅಸಮರ್ಥಳಾಗಿದ್ದರೆ ಮಾತ್ರ ಜೀವನಾಂಶವನ್ನು ಕೇಳಬಹುದು ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.
3. ವಿಚಾರಣೆಯ ಸಮಯದಲ್ಲಿ, ಪತ್ನಿಯು ತನ್ನ ಅನಾರೋಗ್ಯ ಪೀಡಿತ ಮಗಳ ಶಿಕ್ಷಣ ಮತ್ತು ಚಿಕಿತ್ಸೆಗಾಗಿ ಮುಂಬಯಿಯಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿದರು. ಉಚ್ಚ ನ್ಯಾಯಾಲಯವು ಇದನ್ನು ಸಮಂಜಸವೆಂದು ಒಪ್ಪಿಕೊಂಡಿತು ಮತ್ತು ತಾಯಿಯ ಪಾಲನೆಯ ಜವಾಬ್ದಾರಿಯು ಆಕೆಯ ವೈವಾಹಿಕ ಜವಾಬ್ದಾರಿಗಿಂತ ಹೆಚ್ಚಾಗಿರುತ್ತದೆ ಎಂದು ಹೇಳಿತು.
4. ಪತ್ನಿಗೆ ತಿಂಗಳಿಗೆ 20,000 ರೂಪಾಯಿ ಜೀವನಾಂಶ ಮತ್ತು ಮಗಳ ಶಿಕ್ಷಣಕ್ಕಾಗಿ 30,000 ರೂಪಾಯಿ ನೀಡುವ ಆದೇಶದಲ್ಲಿ ಉಚ್ಚ ನ್ಯಾಯಾಲಯವು ಯಾವುದೇ ಬದಲಾವಣೆ ಮಾಡಲಿಲ್ಲ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!