
ಭೋಪಾಲ್ (ಮಧ್ಯಪ್ರದೇಶ) – ಮಧ್ಯಪ್ರದೇಶ ಪೊಲೀಸ್ ಇಲಾಖೆಯು ರಾಜ್ಯದ ಎಲ್ಲಾ ಪೊಲೀಸ್ ತರಬೇತಿ ಕೇಂದ್ರಗಳಲ್ಲಿ ಭಗವದ್ಗೀತೆಯ ಪಠಣವನ್ನು ಪ್ರಾರಂಭಿಸಲು ನಿರ್ಧರಿಸಿದೆ. ಇದರ ಅನುಷ್ಠಾನವು ಈಗಾಗಲೇ ಪ್ರಾರಂಭವಾಗಿದೆ. ಈ ಉಪಕ್ರಮದ ಉದ್ದೇಶವು ಹೊಸದಾಗಿ ನೇಮಕಗೊಂಡ ಪೊಲೀಸರಿಗೆ ವೃತ್ತಿಪರ ತರಬೇತಿಯನ್ನು ನೀಡುವುದು ಮಾತ್ರವಲ್ಲದೆ, ಅವರಿಗೆ ನೈತಿಕ ಮೌಲ್ಯಗಳು ಮತ್ತು ಆಧ್ಯಾತ್ಮಿಕತೆಯನ್ನು ಕಲಿಸುವುದಾಗಿದೆ.

೧. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರಾಜಾ ಬಾಬು ಸಿಂಗ್ ಅವರು ಈ ಹೊಸ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಈ ಉಪಕ್ರಮದಿಂದಾಗಿ, ಪೊಲೀಸ್ ತರಬೇತಿಗೆ ಹೊಸ ದಿಕ್ಕು ಸಿಗುತ್ತಿದೆ ಮತ್ತು ಸೈನಿಕರ ಜೀವನಕ್ಕೆ ನೈತಿಕ ಅಡಿಪಾಯ ಸಿಗುತ್ತಿದೆ. ಶ್ರೀರಾಮಚರಿತಮಾನಸ ಮತ್ತು ಶ್ರೀಮದ್ಭಗವದ್ಗೀತೆಗಳು ಜೀವನದ ನಿಜವಾದ ತತ್ವವನ್ನು ಹೇಳುತ್ತವೆ ಮತ್ತು ನೈತಿಕ ಜೀವನವನ್ನು ನಡೆಸಲು ಕಲಿಸುತ್ತವೆ ಎಂದು ಅವರ ಅಭಿಪ್ರಾಯವಿದೆ.
This new scheme, launched by ADGP Raja Babu Singh, gives a new moral foundation to police training.
💬 “The Bhagavad Gita and Ramayana are our rich Spiritual legacy and treasure trove of good values. Its regular reading will surely guide our trainees to lead a righteous life and… pic.twitter.com/0mz3igDC4o
— Sanatan Prabhat (@SanatanPrabhat) November 8, 2025
೨. ಈ ಪೊಲೀಸರಿಗೆ ಕರ್ತವ್ಯನಿಷ್ಠೆ ಮತ್ತು ಆದರ್ಶ ನಡವಳಿಕೆಗಾಗಿ ಗೀತೆಯ ತತ್ವಶಾಸ್ತ್ರವನ್ನು ಹೇಳಲಾಗುವುದು. ಗೀತೆಯಲ್ಲಿನ ಕರ್ಮಯೋಗ, ನಿಷ್ಕಾಮ ಕರ್ಮ ಮತ್ತು ಸಮತ್ವಭಾವದ ಸಿದ್ಧಾಂತಗಳನ್ನು ಅವರಿಗೆ ಪರಿಚಯಿಸಲಾಗುವುದು. ಇದರಿಂದ ಪೊಲೀಸರು ಸಂಕಷ್ಟದ ಸಮಯದಲ್ಲಿ ಯೋಗ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಒತ್ತಡದ ಪರಿಸ್ಥಿತಿಯಲ್ಲಿ ಶಾಂತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಈ ಮೂಲಕ ಅವರ ಸೇವಾ ಮತ್ತು ಸಮರ್ಪಣಾ ಭಾವ ಇನ್ನಷ್ಟು ಬಲಗೊಳ್ಳುವುದು.

೩. ದೈನಂದಿನ ಕಠಿಣ ತರಬೇತಿ ಮತ್ತು ಕರ್ತವ್ಯಗಳ ನಂತರ ತರಬೇತಿ ನಿರತ ಪೊಲೀಸರು ಒಂದೆಡೆ ಸೇರಿದಾಗ, ಹಳದಿ ಕುರ್ತಾ ಧರಿಸಿದ ಒಬ್ಬ ವ್ಯಕ್ತಿ ಅವರಿಗೆ ಶ್ರೀಮದ್ಭಗವದ್ಗೀತೆಯ ಶ್ಲೋಕಗಳು ಮತ್ತು ಅವುಗಳ ಅರ್ಥಗಳನ್ನು ವಿವರಿಸುತ್ತಾರೆ. ಪ್ರಸ್ತುತ, ಸುಮಾರು ೪ ಸಾವಿರ ಯುವಕರು ಮತ್ತು ಯುವತಿಯರು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಾಗಿ ೯ ತಿಂಗಳ ತರಬೇತಿಯನ್ನು ಪಡೆಯುತ್ತಿದ್ದಾರೆ.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!