ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರ ಹೇಳಿಕೆ

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ಅಫ್ಘಾನಿಸ್ತಾನದ ತಾಲಿಬಾನ್ ಸರಕಾರಕ್ಕೆ ನೇರವಾಗಿ ಯುದ್ಧದ ಬೆದರಿಕೆ ಹಾಕಿದ್ದಾರೆ. ಇಸ್ತಾನ್‌ಬುಲ್ (ಟರ್ಕಿಯೆ)ನಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಿಯೋಗಗಳ ಸಭೆ ನಡೆಯುವ ಕೆಲವೇ ಗಂಟೆಗಳ ಮೊದಲು ಈ ಬೆದರಿಕೆ ನೀಡಲಾಗಿದೆ. ‘ತಾಲಿಬಾನ್‌ನೊಂದಿಗೆ ನಡೆಯುವ ಸಭೆಯಲ್ಲಿ ಪರಿಹಾರ ಸಿಗದಿದ್ದರೆ ಮುಂದೆ ಏನಾಗುತ್ತದೆ?’ ಎಂದು ಒಂದು ಸುದ್ದಿವಾಹಿನಿಯ ಸಂದರ್ಶನದಲ್ಲಿ ಆಸಿಫ್ ಅವರಿಗೆ ಕೇಳಲಾಯಿತು. ಅದಕ್ಕೆ ಅವರು, ‘ಸಭೆ ವಿಫಲವಾದರೆ, ಯುದ್ಧವೇ ನಡೆಯಲಿದೆ’ ಎಂದು ಸ್ಪಷ್ಟವಾಗಿ ಉತ್ತರಿಸಿದರು. ಈ ಹೇಳಿಕೆಯಿಂದಾಗಿ ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಿದೆ.
💣 Pakistan Defence Minister Khawaja Asif warns that if talks with the Taliban Government in Afghanistan fail, it will lead to war.
🕊️ The statement came hours before the Pak–Afghan meeting in Istanbul.
⚔️ Asif accused the Taliban of sheltering terrorists and not acting against… pic.twitter.com/4wGJoHGDsp
— Sanatan Prabhat (@SanatanPrabhat) November 6, 2025
ತಾಲಿಬಾನ್ ಸರಕಾರವು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ ಮತ್ತು ಪಾಕಿಸ್ತಾನದ ಮೇಲೆ ದಾಳಿ ಮಾಡುವವರ ವಿರುದ್ಧ ತಾಲಿಬಾನ್ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಸಿಫ್ ಅವರು ಆರೋಪ ಮಾಡಿದ್ದಾರೆ. ತಾಲಿಬಾನ್ ಈ ಆರೋಪಗಳನ್ನು ನಿರಾಕರಿಸಿದ್ದು, ಪಾಕಿಸ್ತಾನದಿಂದ ಅಫ್ಘಾನ್ ನಾಗರಿಕರ ಮೇಲೆ ನಡೆದ ಡ್ರೋನ್ ದಾಳಿಗಳನ್ನು ಖಂಡಿಸಿದೆ. ಅಲ್ಲದೇ ‘ಇಸ್ಲಾಮಿಕ್ ಸ್ಟೇಟ್’ ಭಯೋತ್ಪಾದಕರಿಗೆ ಪಾಕ್ ಆಶ್ರಯ ನೀಡುತ್ತಿದೆ ಎಂದು ತಾಲಿಬಾನ್ ಆರೋಪಿಸಿದೆ.
ಸಂಪಾದಕೀಯ ನಿಲುವುಪಾಕಿಸ್ತಾನ ಸ್ವತಃ ಅಶಾಂತಿಯ ದೇಶ ಹಾಗೂ ಇತರರನ್ನು ಅಶಾಂತಿಗೆ ತಳ್ಳುವ ದೇಶ. ಆದ್ದರಿಂದ ಪಾಕ್ ನ ಅಸ್ತಿತ್ವ ಕೊನೆಗೊಳಿಸುವುದೊಂದೇ ಈಗಿರುವ ಏಕೈಕ ಉಪಾಯ. |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation